ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿರುವ ಸರಕಾರಕ್ಕೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ನಗರದಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ಹೌದು, ಸಂಗಮೇಶ್ವರ ನಗರದ ಪಕ್ಕದಲ್ಲಿಯೇ ಲಿಂಗಾಯತ ಸಮಾಜಕ್ಕೆ ಸೇರಿದ ರುದ್ರಭೂಮಿ ಇದ್ದು ಇದೇ ಸ್ಥಳದಲ್ಲಿ ಹಲವು ವರ್ಷಗಳಿಂದಲೂ ನಗರದ ಮಹಿಳೆಯರು ಶೌಚಾಲಯಕ್ಕೆ ತೆರಲುತ್ತಿದ್ದರು. ಸದ್ಯಕ್ಕೆ ಸಮಾಜದ ಹಿರಿಯರು ಕೂಡಿಕೊಂಡು ರುದ್ರಭೂಮಿಯನ್ನು ಅಭಿವೃದ್ಧಿ ಪಡೆಸುವ ಕಾರ್ಯದಲ್ಲಿ ತೊಡಗಿದ್ದು ರುದ್ರಭೂಮಿ ಸುತ್ತಲೂ ಕಂಪೌಂಡ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ನಗರದ ಮಹಿಳೆಯರು ಸಮಾಜದ ಮುಖಂಡರಿಗೆ ಕಂಪೌಡ ಕಟ್ಟದಿರಲು ಮನವಿ ಮಾಡಲಲು ಮುಂದಾದ ಸಂದರ್ಭದಲ್ಲಿ ಮುಖಂಡರು ಮಹಿಳೆಯರ ಮನವಿಯನ್ನು ತಿರಸ್ಕರಿಸಿದ ವೇಳೆಯಲ್ಲಿ ಸ್ಥಳೀಯ ಜನ ಪ್ರತಿನಿಧಿಗಳಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಿವಾಸಿಗಳ ಹಾಗೂ ಸಮಾಜದ ಮುಖಂಡರಲ್ಲಿ ವಾಗ್ವಾದ:
ರುದ್ರಭೂಮಿಯಲ್ಲಿ ಬಯಲು ಶೌಚಾಲಯ ತಡೆಗಟ್ಟುವಲ್ಲಿ ಮುಂದಾದ ಸಮಾಜದ ಮುಖಂಡರು ಹಾಗೂ ಸಂಗಮೇಶ್ವರ ನಗರದ ಮಹಿಳೆಯ ಮದ್ಯ ಕೆಲ ಕಾಲ ವಾಗ್ವಾದ ನಡೆದಿದ್ದು ಹಲವು ವರ್ಷಗಳಿಂದಲೂ ಪವಿತ್ರ ರುದ್ರಭೂಮಿಯಲ್ಲಿ ಮಹಿಳೆಯರು ಶೌಚಾಲಯಕ್ಕೆ ಬರುತ್ತಿದ್ದರೂ ಸಮಾಜದಿಂದ ಯಾವುದೇ ತಕರಾರು ಮಾಡಿದಿಲ್ಲಾ. ಆದರೆ ಸದ್ಯಕ್ಕೆ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸಬೇಕಾಗಿದ್ದು ಯಾವುದೇ ಕಾರಣಕ್ಕೂ ರುದ್ರಭೂಮಿಯಲ್ಲಿ ಶೌಚಾಲಯ ಮಾಡಲು ಬಿಡುವುದಿಲ್ಲ ಎಂದು ಸಮಾಜದ ಮುಖಂಡರಾದ ಪ್ರಭುರಾಜ ಕಲಬುಗರ್ಗಿ, ಸಿ.ಪಿ.ಸಜ್ಜನ, ಸುಧೀರ ನಾವದಗಿ, ಪ್ರಶಾಂತ ಮಡಿವಾಳರ(ಗುತ್ತಿಗೆದಾರರು) ಸೇರಿದಂತೆ ಇತರರು ಪಟ್ಟು ಹಿಡಿದ ಸಂದರ್ಭದಲ್ಲಿ ನಗರದ ಮಹಿಳೆಯರು ಹಲವಾರು ವರ್ಷಗಳಿಂದಲೂ ಸ್ಥಳೀಯರು ಇದೇ ಸ್ಥಳದಲ್ಲಿಯೇ ಶೌಚಕ್ಕೆ ಹೋಗುತ್ತಿದ್ದಾರೆ. ದಿಡೀರನೆ ಬಂದ್ ಮಾಡಿಸಿದರೆ ನಿವಾಸಿಗಳು ಏನು ಮಾಡಬೇಕು. ಕನಿಷ್ಟಪಕ್ಷವಾಗಿ ನಮ್ಮ ಸ್ವಂತ ಶೌಚಾಲಯ ಕಟ್ಟಿಸಿಕೊಳ್ಳುವವರೆಗಾದರೂ ಕಂಪೌಂಡ ನಿರ್ಮಾಣವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ನಗರದಲ್ಲಿ ಶೌಚಾಲಯವೇ ಇಲ್ಲಾ:
ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಮನೆಗೊಂಡು ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರದಲ್ಲಿ ಮೋದಿ ಸರಕಾರದ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಒದಗಿಸಲಾಗುತ್ತಿದೆ. ಆದರೆ ಸ್ಥಳೀಯ ಪುರಸಭೆ ಅಧಿಕಾರಿಗಳು ಈ ಯೋಜನೆಯಡಿಯಲ್ಲಿ ಶೌಚಾಲಯವಿಲ್ಲದೆ ಫಲಾನುಭವಿಗಳಿಗೆ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಸಂಗಮೇಶ್ವರ ನಗರದಲ್ಲಿ ಶೌಚಾಲಯಕ್ಕೆ ಮಹಿಳೆಯರು ಪರದಾಡುವಂತೆ ದುಸ್ಥಿತಿ ಎದುರಾಗಿದೆ ಎಂದು ನಗರದ ಪ್ರಮುಖರು ಆರೋಪಿಸಿದ್ದಾರೆ.
ಮೊಬೈಲ್ ಶೌಚಾಲಯ ತರೆಸಲು ಆಗ್ರಹ:
ಸಮಾಜದ ಮುಖಂಡರು ಹಾಗೂ ನಗರದ ಮಹಿಳೆಯರ ಮದ್ಯ ನಡೆದ ಮಾತಿನ ಸಂಘರ್ಷದಲ್ಲಿ ಮದ್ಯ ಪ್ರವೇಶಿಸಿದ ನಗರಾಭಿವೃದ್ಧಿ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಮೂಲಭೂತ ಸೌಕರ್ಯವಾದ ಶೌಚಾಲಯವನ್ನು ಸಂಗಮೇಶ್ವರ ನಗರದ ನಿವಾಸಿಗರು ಕಟ್ಟಿಸಿಕೊಳ್ಳುವವರೆಗೂ ಪುರಸಭೆ ಅಧ್ಯಕ್ಷರು ನಗರದಲ್ಲಿ ಮೊಬೈಲ್ ಶೌಚಾಲಯಗಳನ್ನು ತಂದಿಟ್ಟು ನಿವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸೋಮವಾರ ಪುರಸಭೆ ಎದುರಿಗೆ ಪ್ರತಿಭಟನೆ:
ಸಂಗಮೇಶ್ವರ ನಗರದ ನಿವಾಸಿಗರ ಬೇಡಿಕೆಯನ್ನು ಶೀಘ್ರದಲ್ಲಿಯೇ ಇಡೇರಿಸಬೇಕು ಎಂದು ಆಗ್ರಹಿಸಿ ನಗರ ನಿವಾಸಿಗಳೊಂದಿಗೆ ಬಸವರಾಜ ನಂದಿಕೇಶ್ವರಮಠ ಅವರು ಪುರಸಭೆ ಎದುರಿಗೆ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಗಮೇಶ್ವರ ನಗರ ಪುರಸಭೆ ಸದಸ್ಯ ವಿರೇಶ ಹಡಲಗೇರಿ, ಶ್ರೀಧರ ಮಡಿವಾಳರ, ಆನಂದ ಹಡಲಗೇರಿ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳಾ ನಿವಾಸಿಗರು ಇದ್ದರು.
Be the first to comment