ಕೆಲೂರ:ಹೊನಲು ಬೆಳಕಿನ ಕಬಡ್ಡಿ:ನೆರೆಗಲ್ಲ ತಂಡ ಪ್ರಥಮ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಪಂದ್ಯಾವಳಿಯಲ್ಲಿ ನೆರೆಗಲ್ಲ ತಂಡ ಪ್ರಥಮ, ಕೆಲೂರ ತಂಡ ದ್ವಿತೀಯ, ಬೆಂಗಳೂರು ತಂಡ ತೃತೀಯ ಬಹುಮಾನ ಪಡೆದುಕೊಂಡವು. ಪ್ರಥಮ ಬಹುಮಾನ 20,001ರೂ., ದ್ವಿತೀಯ ಬಹುಮಾನ 15,001ರೂ., ತೃತೀಯ ಬಹುಮಾನ 10,001ರೂ. ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 15ಕ್ಕೂ ಅಧಿಕ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.

ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಕಬಡ್ಡಿ ಸೇರಿದಂತೆ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಗ್ರಾಮದ ಹೊರವಲಯದ ಮೈದಾನದಲ್ಲಿ ಎಸ್. ಆರ್.ಕೆ. ಗೆಳೆಯರ ಬಳಗದವರಿಂದ 2022ರ ಹೊಸ ವರ್ಷದ ಅಂಗವಾಗಿ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಆಟದಲ್ಲಿ ಸೋಲು-ಗೆಲುವು ಸಹಜ ಗೆಳೆಯರ ಬಳಗ ಪ್ರತಿ ವರ್ಷ ಕಬಡ್ಡಿ ಪಂದ್ಯಾವಳಿ ಕ್ರೀಡಾ ಚಟುವಟಿಕೆ ಆಯೋಜಿಸುತ್ತಿರುವುದು ಶ್ಲಾಘನೀಯ, ಹಿರಿಯರು ತಮ್ಮ ಮಕ್ಕಳಿಗೆ ಸಂಸ್ಕಾರ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದರು.ಜನವರಿ 14 ರಂದು ಪುಣ್ಯಕ್ಷೇತ್ರ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದಲ್ಲಿ ಈ ಬಾರಿಯೂ ಹೆಲಿಪ್ಯಾಡ್ ಮುಖಾಂತರ ರಥೋತ್ಸವಕ್ಕೆ ಪುಷ್ಪಾರ್ಚನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುಣ್ಯಕ್ಷೇತ್ರ ಸಿದ್ದನಕೊಳ್ಳದ ಡಾಕ್ಟರ್ ಶಿವಕುಮಾರ ಶ್ರೀಗಳು, ಮುರನಾಳ ಕ್ಷೇತ್ರದ ಮೇಘ ರಾಜೇಂದ್ರ ಶ್ರೀಗಳು,ಮುದಗಲ್ಲ ಪಿಡ್ಡಯ್ಯ ಅಜ್ಜನವರು, ಕಾಂಗ್ರೆಸ್ ಮುಖಂಡರಾದ ಅಪ್ಪಾ ಸಾಹೇಬ ನಾಡಗೌಡರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಹಾಂತೇಶ ನರಗುಂದ, ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ, ಮೈಲಾರಪ್ಪ ಮೈಲಾರಪ್ಪ ಕೊಪ್ಪದ, ಪಿಕೆಪಿಎಸ್ ಉಪಾಧ್ಯಕ್ಷೆ ತಿಪ್ಪವ್ವ ಕೊಪ್ಪದ, ಮುತ್ತಣ್ಣ ನಾಡಗೌಡರ,ವಜಿರಪ್ಪ ಪೂಜಾರ, ಚನ್ನಬಸಪ್ಪ ಇಟಗಿ, ಉಮೇಶ್ ಹೂಗಾರ, ಮಂಜುನಾಥ ಮಂಡಿ,ಮೈಲಾರಪ್ಪ ತುಂಬದ, ಬಸವರಾಜ ಮಾದರ ಇನ್ನೂ ಅನೇಕರು ಉಪಸ್ಥಿತರಿದ್ದರು.ನಿರ್ಣಾಯಕರಾಗಿ ರಾಜು ಹೆಳವರ ಹಾಗೂ ಮಲ್ಲಪ್ಪ ತೋಟಗೇರ ಉಪಸ್ಥಿತರಿದ್ದರು. ಬಾಬು ಸೀಮಿಕೇರಿ ಸ್ವಾಗತಿಸಿ ವಂದಿಸಿದರು.

Be the first to comment

Leave a Reply

Your email address will not be published.


*