ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ನಬಾರ್ಡ್ ಬೆಂಗಳೂರು, ಗ್ರಾಮೀಣ ಪರಿಸರ ಸಮುದಾಯ ಜಾಗೃತಿ ಸಂಸ್ಥೆ (ರೀಚ್) ಬಾಗಲಕೋಟೆ ಹಾಗೂ ಜಿಲ್ಲಾ ಪಂಚಾಯತಿ,ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಘನ ತ್ಯಾಜ್ಯ ನಿರ್ವಹಣೆಯ ಕುರಿತು 5 ದಿನದ ತರಬೇತಿ ಕಾರ್ಯಗಾರವನ್ನು ದಿನಾಂಕ 18.04.2022 ರಿಂದ 22.04.2022 ರವರೆಗೆ ತಾಲ್ಲೂಕ ಪಂಚಾಯತ್ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಾಸ್ತಾವಿಕವಾಗಿ ಕಾರ್ಯಗಾರದ ಕುರಿತು ಜಿ.ಎನ್.ಸಿಂಹ,ನಿರ್ದೆಶಕರು ರೀಚ್ ಸಂಸ್ಥೆ ಇವರು ಮಾತನಾಡುತ್ತಾ ರೀಚ್ ಸಂಸ್ಥೆಯ ಕಿರು ಪರಿಚಯದ ಜೊತೆಗೆ ಮಹಿಳೆಯರಿಗೆ ಘನ ತ್ಯಾಜ್ಯದ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ತಿಳಿಸುತ್ತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಅದನ್ನು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದರು.
ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಘನತ್ಯಾಜ್ಯ ನಿರ್ವಹಣೆ ಕುರಿತು 5 ದಿನದ ವಸತಿಯುತ ತರಬೇತಿಯಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆಮಾಡುತ್ತ ಶ್ರೀಯುತ ಮಲ್ಲಿಕಾರ್ಜುನ ಕಲಾದಗಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ತಾಲ್ಲೂಕ ಪಂಚಾಯತ್ ಬದಾಮಿ ಇವರು ಭಾಗಾರ್ಥಿಗಳನ್ನು ಉದ್ದೇಶಿಸಿ ನಮ್ಮ ಕಾರ್ಯಕ್ರಮದ ಕುರಿತು ಕಷ್ಟದ ಕೆಲಸಗಳನ್ನು ಮಾಡುವವರು ಮಹಿಳೆಯರು ಅದಕ್ಕಾಗಿ ಈ ಜವಾಬ್ದಾರಿಯನ್ನು ಸಂಘದ ಮಹಿಳೆಯರಿಗೆ ಕೊಟ್ಟಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಸಂಘದ ಪ್ರತಿನಿಧಿ ಶ್ರೀಮತಿ ನಂದವ್ವ ಚಲವಾದಿ ಇವರು ಸಂಘದ ಪ್ರತಿನಿಧಿಗಳ ಪರವಾಗಿ ಮಾತನಾಡಿದರು. ತರಬೇತಿದಾರರಾದ ಶಾರದಾ, ಬಸವರಾಜ್ ಚಳಿಗೇರಿ ಬದಾಮಿ ತಾಲ್ಲೂಕಿನ 10 ಗ್ರಾ.ಪಂ.ಗಳಿಂದ 30 ಮಹಿಳೆಯರು ಭಾಗವಹಿಸಿದ್ದರು.
Be the first to comment