ವಕೀಲರ ಕಛೇರಿ ಉದ್ಘಾಟನೆಗೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಭೇಟಿ*

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ನಗರದಲ್ಲಿ ನೂತನವಾಗಿ ಪ್ರಾರಂಭಿಸುತ್ತಿರುವ ವಕೀಲ ಮಹೇಶ್ ದಾಸ್ ಅವರ ವಕೀಲ ಕಛೇರಿ ಉದ್ಘಾಟನೆಗಾಗಿ ಕೊಳ್ಳೇಗಾಲ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಸಿಎಂ ಬದಲಾವಣೆ ತುಂಬಾ ಸರಿದೂಗಿಸಿ ಮಾಡಲಾಗಿದೆ. ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರನ್ನು ಮಾಡಲಾಗಿದೆ. ದೇವನಹಳ್ಳಿಯ ವಕೀಲರು ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಸಾಕಷ್ಟು ಭೂಮಿ ಸಮಸ್ಯೆಇದೆ. ಭೂರಹಿತರಿಗೆ ಭೂಮಿ ಕಲ್ಪಿಸುವುದಕ್ಕೆ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಸೌಲಭ್ಯಗಳು ನೀಡಬೇಕಿದೆ. ಪಿಟಿಸಿಎಲ್ ಆಕ್ಟ್ ಗೆ ಹಿನ್ನಡೆ ಇದೆ. ಅದಕ್ಕೆ ಹೋರಾಟಗಳು ನಡೆಯುತ್ತಿವೆ.

CHETAN KENDULI

ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕೋವಿಡ್ನಲ್ಲಿ ಹಿನ್ನಡೆಯಾಗಿದೆ ಮುಂದಿನ ದಿನಗಳಲ್ಲಿ ಸರಿಹೋಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ಬಿಎಸ್ಪಿ ಸಂಯೋಜಕರಾದ ಹರಿರಾಮ್, ಡಾ. ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕಾರಹಳ್ಳಿ ಕೇಶವ, ದೇವನಹಳ್ಳಿ ಪುರಸಭೆ ಸದಸ್ಯ ಬಾಲರಾಜ್.ಡಿ, ಐಬಸಾಪುರ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಕುಮಾರ್.ಡಿ.ಸಿ., ಮುಖಂಡರಾದ ತ್ರಿಮೂರ್ತಿ, ಶ್ರೀನಾಥ್, ವಾಸು, ವಕೀಲ ನಾಗೇಶ್.ಟಿ, ರಂಜಿತ್, ಗುರು ಹಾಗೂ ಇತರರು ಇದ್ದರು.

Be the first to comment

Leave a Reply

Your email address will not be published.


*