ವಾರ್ಡಿನಲ್ಲಿ ಒಂದೇ ಗಣೇಶ ಪ್ರತಿಷ್ಠಾಪನೆ, ಪುರಸಭೆಯಿಂದ ಅನುಮತಿ ಕಡ್ಡಾಯ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕೊರೊನ ಹಿನ್ನೆಲೆ ಗಣೇಶ ಪ್ರತಿಷ್ಠಾಪನೆಗೆ ಸರಕಾರದ ಮಾರ್ಗಸೂಚಿಗಳನ್ವಯ ಗಣೇಶ ಪ್ರತಿಷ್ಠಾಪಿಸಿ ಕೊರೊನ ನಿಯಂತ್ರಣಕ್ಕೆ ಎಲ್ಲರು ಕೈಜೋಡಿಸಿ ಎಂದು ಸಬ್ಇನ್ಸ್ ಪೆಕ್ಟರ್ ರಮೇಶ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಕರೆಯಲಾಗಿದ್ದ ಪುರಸಭೆ ಸದಸ್ಯರು, ಹಾಗು ನಾಗರೀಕರ ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರದ ಮಾರ್ಗಸೂಚಿಯನ್ವಯ ವಾರ್ಡಿನಲ್ಲಿ ಸಾರ್ವಜನಿಕವಾಗಿ ಒಂದು ಗಣೇಶ ಮೂರ್ತಿಯನ್ನು ಇಡಲು ಅನುಮತಿಸಲಾಗಿದೆ ಒಂದಕ್ಕಿಂತ ಹೆಚ್ಚಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಅಂತಹವರ ವಿರುದ್ಧ ಕೇಸು ದಾಖಲಿಸಲಾಗುವುದು. ಪುರಸಭೆ ಸದಸ್ಯರು ವಾರ್ಡಿನ ಸಾರ್ವಜನಿಕರೊಂದಿಗೆ ಮಾತನಾಡಿ ವಾರ್ಡಿನಲ್ಲಿ ಒಂದೆಡೆ ಮೂರ್ತಿ ಇಡಲು ಸಾರ್ವಜನಿಕರಿಗೆ ತಿಳಿಸಬೇಕು ಹಾಗು ಪುರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು.

CHETAN KENDULI

ಒಂದಕ್ಕಿಂತ ಹೆಚ್ಚು ಗಣೇಶ ಇಡಬೇಕಾದವರು ಅವರ ವಾರ್ಡಿನಲ್ಲಿರುವ ದೇವಾಲಯದಲ್ಲಿ ಇಟ್ಟು ಪೂಜಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ 4 ಹಾಗು ಮನೆಗಳಲ್ಲಿ 2 ಅಡಿ ಮೀರಿರಬಾರದು ಹಾಗು 3 ದಿನಗಳು ಮಾತ್ರ ಅವಕಾಶ ಕಲ್ಪಿಸಲಾಗಿದ್ದು ನಂತರ ಪುರಸಭೆಯಿಂದ ಬರುವ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ಮಾಡಬೇಕು. ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚು ಮೂರ್ತಿ ಇಡುವ ಪರಿಸ್ಥಿತಿ ಬಂದರೆ ಅಂತಹ ವಾರ್ಡಿನಲ್ಲಿ ಗಣೇಶ ಪ್ರತಿಷ್ಠಾಪನೆಯನ್ನು ಸ್ಥಗಿತಗೊಳಿಸಲಾಗುವುದು.
ಧ್ವನಿವರ್ದಕ ನಿಷೇದ: ಎಲ್ಲೂ ಸಹ ಧ್ವನಿವರ್ದಕ ಹಾಗು ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ, ಹಾಗು ಗಣೇಶ ಮೂರ್ತಿಯನ್ನು ಕೆರೆ ಕುಂಟೆ, ಇನ್ನಿತರೆ ಸ್ಥಳಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ.

ಪುರಸಭೆಯಿಂದ ಗಣೇಶ ವಿಸರ್ಜನೆಗೆ ಟ್ಯಾಂಕರ್ ಅಥವ ನೀರಿನ ಡ್ರಮ್ ವ್ಯವಸ್ಥೆ ಕಲ್ಪಿಸಲಿದೆ.
ಗಣೇಶ ಪ್ರತಿಷ್ಠಾಪಿಸುವ ಸ್ಥಳದಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು, 20 ಕ್ಕಿಂತ ಹೆಚ್ಚು ಜನ ಸೇರದಂತೆ ಭಕ್ತಾದಿಗಳಿಗೆ ಅನುವುಮಾಡಿಕೊಡುವುದು. ಗಣೇಶ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಕೊರೊನ ನಿಯಮಗಳ ಅನುಸರಣೆ ಮಾಡಲು ಪೊಲೀಸ್ ಇಲಾಖೆಯಿಂದ ಹೋಮ್ ಗಾರ್ಡ್ಗಳನ್ನು ನಿಯೋಜನೆ ಮಾಡಲಾಗುವುದು.ಇದೆ ವೇಳೆ ಪುರಸಭೆ ಅಧ್ಯಕ್ಷೆ ರೇಖಾವೇಣುಗೋಪಾಲ್, ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಸ್ಥಾಯಿಸಮಿತಿ ಅಧ್ಯಕ್ಷ ನಾಗೇಶ್, ಪುರಸಭೆ ಸದಸ್ಯರಾದ ಜೆ.ಎ.ರವೀಂದ್ರ, ವೈಆರ್.ರುದ್ರೇಶ್, ಮುನಿಕೃಷ್ಣ, ನಾಗರೀಕರು ಇದ್ದರು.

Be the first to comment

Leave a Reply

Your email address will not be published.


*