ಜಿಲ್ಲಾ ಸುದ್ದಿಗಳು
ಕುಮಟಾ
ಚಿಪ್ಪಿ ಗಣಿಗಾರಿಕೆ ಸ್ಥಗಿತಗೊಳಿಸಲು ಈಗಾಗಲೇ ಮಾತುಕತೆ ನಡೆಸಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಘನಾಶಿನಿ ನದಿಯಲ್ಲಿ ಚಿಪ್ಪಿ ಗಣಿಗಾರಿಕೆ ನಡೆಸದಂತೆ ಬಹಳಷ್ಟು ವರ್ಷಗಳಿಂದ ನಮ್ಮ ಮೀನುಗಾರ ಬಂಧುಗಳು ಪ್ರತಿಭಟಿಸುತ್ತ ಬಂದಿದ್ದಾರೆ. ಆದರೆ ಗಾಂವಕರ್ ಮೈನ್ಸ್ ನವರಿಗೆ ಟೆಂಡರ್ ಈ ಹಿಂದಿಯೇ ನೀಡಲಾಗಿತ್ತು ಅದು ಈ ವರ್ಷದ ಜನವರಿ 7 ರ ತನಕ ಇತ್ತು ನನಗೆ ಮಿನುಗಾರ ಸಮಾಜದ ಪ್ರಮುಖರು ಗಣಿಗಾರಿಕೆ ಸ್ಥಗಿತಗೊಳಿಸಲು ತಿಳಿಸಿದಾಗ ನಾನು ಕೂಡಲೇ ಗಾಂವಕರ್ ಮೈನ್ಸ್ ರವರ ಜೊತೆ ಮಾತುಕತೆ ನಡೆಸಿ 7 ಕ್ಕೆ ಟೆಂಡರ್ ಸ್ಥಗಿತಗೊಂಡ ನಂತರ ಚಿಪ್ಪಿ ಗಣಿಗಾರಿಕೆ ಮತ್ತೆ ಪ್ರಾರಂಭಿಸೋದಿಲ್ಲ ಎಂದು ತಿಳಿಸಿದ್ದರು. ಅದರಂತೆ ಅವರದ್ದು ಬಂದ್ ಆಗಿದೆ ಈಗ ವೀರಾಂಜನೇಯ ಮೈನ್ಸ್ ನವರು 15 ಎಕರೆ ಜಾಗವನ್ನು ಲೀಸ್ ಗೆ ಪಡೆದು ಗಣಿಗಾರಿಕೆ ನಡೆಸುತ್ತಿದ್ದರು ಅದನ್ನು ನಾನು ಮೈನ್ಸ್ ನ ಮಾಲಿಕರ ಜೊತೆ ಮಾತನಾಡಿ ಕೂಡಲೇ ಬಂದ್ ಮಾಡುವಂತೆ ಸೂಚಿಸಿದ್ದೆ. ಆ ವಿಷಯ ಮಾತನಾಡುವಾಗ ನನ್ನ ಜೊತೆ ಮೀನುಗಾರರ ಪ್ರಮುಖರೂ ಕೂಡ ಇದ್ದರು ಅದರ ದಾಖಲೆ ಬೇಕಾದರೂ ಕೊಡುತ್ತೇನೆ. ಈಗಾಗಲೇ ವೀರಾಂಜನೇಯ ಮೈನ್ಸ್ ನವರು ಗಣಿಗಾರಿಕೆ ನಡೆಸುತ್ತಿಲ್ಲ ಎಂದು ಮಾಹಿತಿ ಕೂಡ ಪಡೆದಿದ್ದೇನೆ..
ಮೀನುಗಾರ ಸಮಾಜದವರು ಯಾವತ್ತೂ ನಮ್ಮ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ ನಾನೂ ಕೂಡ ಯಾವತ್ತೂ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೇನೆ.. ಮುಂದಿನ ಅಧಿವೇಶನದಲ್ಲಿ ಖಾಯಂ ಆಗಿ ಚಿಪ್ಪಿ ಗಣಿಗಾರಿಕೆ ನಡೆಸಲು ಅನುಮತಿ ನೀಡದಂತೆ ಸರ್ಕಾರದ ಗಮನ ಸೆಳೆಯುತ್ತೇನೆ.. ಚಿಪ್ಪಿ ಗಣಿಗಾರಿಕೆಯಿಂದ ಪರಿಸರಕ್ಕೆ ಆಗುವ ತೊಂದರೆ, ಮೀನುಗಾರರಿಗೆ ಆಗುವ ಸಮಸ್ಯೆ ಬಗ್ಗೆ ವಿವರಿಸುತ್ತೇನೆ ಎಂದರು.. ಮೀನುಗಾರ ಸಮಾಜದವರು 25 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ ಪ್ರತಿಭಟನೆ ಕ್ಯೆ ಬಿಡುವಂತೆ ಮನವಿ ಮಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು ..
ಕುಮಟಾ ಮಂಡಳ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ,ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಅಂಬಿಗ, ಶಿವಾನಂದ ಅಂಬಿಗ ಮೋಹನ ಮೂಡಂಗಿ,ಬೀರಪ್ಪ ಹರಿಕಾಂತಎಲ್ ಎಸ್ ಅಂಬಿಗ, ಸಂತೋಷ ಹರಿಕಾಂತ, ಶೇಖರ ಹರಿಕಾಂತ, ನಾಗರಾಜ ಹರಿಕಾಂತ, ಇನ್ನಿತರರು ಇದ್ದರು ಮೀನುಗಾರ ಬಂಧುಗಳು ಯಾವತ್ತೂ ನಮ್ಮ ಜೊತೆ ಇದ್ದವರು ಅವರ ಸಮಸ್ಯೆಗಳಿಗೆ ನಾನು ಯಾವತ್ತೂ ಸ್ಪಂದಿಸುತ್ತ ಬಂದಿದ್ದೇನೆ ಮುಂದೆಯೂ ಸದಾ ಅವರ ಜೊತೆ ಇರುತ್ತೇನೆ.. ಚಿಪ್ಪಿ ಗಣಿಗಾರಿಕೆ ಸ್ಥಗಿತಗೊಳಿಸಲು ನಾನು ಬದ್ಧನಿರುತ್ತೇನೆ ಎಂದು ಶಾಸಕರಾದ ದಿನಕರ ಶೆಟ್ಟಿಯವರು ತಿಳಿಸಿದರು.
Be the first to comment