ಜಿಲ್ಲಾ ಸುದ್ದಿಗಳು
ಭಟ್ಕಳ್
ಸಾಮಾಜಿಕ ಹೋರಾಟಗಾರರನ್ನು ಬೆದರಿಸಲು ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕರ್ತವ್ಯಕ್ಕೆ ಅಡ್ಡಿ 353 ಹಾಗೂ ಜಾತಿನಿಂದನೆ ಕೇಸುಗಳನ್ನು ದಾಖಲಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸದಂತೆ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ .ಇಂಥ ಸಂದರ್ಭಗಳಲ್ಲಿ ಭ್ರಷ್ಟರೆಂಬ ದೇಶದ್ರೋಹಿಗಳಿಗೆ ತಾತ್ಕಾಲಿಕವಾಗಿ ನೆಮ್ಮದಿ ಸಿಗಬಹುದೇ ಹೊರತು ಸತ್ಯ ಎಂದೆಂದಿಗೂ ಬೂದಿ ಮುಚ್ಚಿದ ಕೆಂಡದಂತಿದ್ದು ಅದು ಸುಡಲು ಆರಂಭಿಸಿದಾಗ ಭ್ರಷ್ಟರು ಸುಟ್ಟು ಬೂದಿಯಾಗುತ್ತಾರೆ ಸತ್ಯ ಮತ್ತು ಸಾಮಾಜಿಕ ಹೋರಾಟವನ್ನು ಹತ್ತಿಕ್ಕಲು ಎಂದಿಗೂ ಸಾಧ್ಯವಾಗುವುದಿಲ್ಲ ಅದು ನಿರಂತರವಾಗಿರುತ್ತದೆ .
ಭ್ರಷ್ಟರೆಂಬ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಿ.ಕರ್ನಾಟಕ ರಾಜ್ಯದಾದ್ಯಂತ ಸಂಘಟಿತವಾಗುತ್ತಿದೆ . ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ ತಾಲೂಕಿನ ಹೇಬಳೆ ಗ್ರಾಮ ಪಂಚಾಯತಯಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರವನ್ನು ಮಾಹಿತಿ ಹಕಿನ ಮೂಲಕ ಬಯಲಿಗೆ ಎಳೆಯಲು ಹೊರಟಿರುವ ನಮ್ಮ ಸಂಘದ ಭಟ್ಕಳ್ ತಾಲೂಕ ಪ್ರಧಾನ ಕಾರ್ಯದರ್ಶಿ ,ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟ ಮಾಡುವ ಸಾಮಾಜಿಕ ಹೋರಾಟಗಾರರ ನಾಗೇಶ್ ನಾಯ್ಕ ಮೇಲೆ ಶುಳ್ಳು ಜಾತಿ ನಿಂದನೆ ಪ್ರಕರಣವನ್ನು ಭ್ರಷ್ಟರು ಕುತಂತ್ರದ ಮೂಲಕ ದಾಖಲಿಸಿದ್ದಾರೆ. ಇದನ್ನು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘ ಖಂಡಿಸುತ್ತದೆ ಮತ್ತು ನಾಗೇಶ್ ನಾಯ್ಕ ಅವರ ಪರವಾಗಿ ನಮ್ಮ ಸಂಘ ಬೆನ್ನೆಲುಬಾಗಿ ನಿಂತು ಭಟ್ಕಳ್ ತಾಲೂಕಿನ ಹೇಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ವನ್ನು ತನಿಖೆ ಮಾಡುವಂತೆ ಹೋರಾಟ ಮಾಡಲಾಗುವದು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘದ ರಾಜ್ಯ ಅಧ್ಯಕ್ಶ ಕುಣಿಗಲ್ ರಮೇಶ್ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ ತಾಲೂಕಿನ ಹೇಬಳೆ ಗ್ರಾಮ ಪಂಚಾಯತನಲ್ಲಿ ನಡೆದಿರುವ ಭ್ರಷ್ಟಾಚಾರ ವನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಭಟ್ಕಳ್ ತಾಲೂಕಿನ ಹೇಬಳೆ ಗ್ರಾಮ ಪಂಚಾಯತ್ನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ನಮ್ಮ ಸಂಘದಿಂದ ಆಗಮಿಸಿ ಅತಿ ಶೀಘ್ರದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು. ನಮ್ಮ ಸಂಘದ ಭಟ್ಕಳ ತಾಲೂಕ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಹೋರಾಟಗಾರ ನಾಗೇಶ್ ನಾಯ್ಕ ಅವರು ಈಗಾಗಲೇ ಮಾಹಿತಿ ಹಕ್ಕಿನ ಮೂಲಕ ಹೇಬಳೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಸಾಕಷ್ಟು ಭ್ರಷ್ಟಾಚಾರದ ದಾಖಲೆಗಳನ್ನು ಪಡೆದಿದ್ದಾರೆ , ತಮ್ಮ ಸಂಘದ ಮೂಲಕ ಇನ್ನು ಹೆಚ್ಚಿನ ದಾಖಲೆ ಸಂಗಹಿಸಿ ಹೇಬಳೆ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ ಮತ್ತು ಅಧಿಕಾರಿಗಳು ನಡೆಸಿರುವ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
Be the first to comment