ಜಿಲ್ಲಾ ಸುದ್ದಿಗಳು
ಮಸ್ಕಿ
ಮಸ್ಕಿ ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಅನೇಕ ಯೋಜನೆಗಳನ್ನು ಈಗಾಗಲೇ ಜನರಿಗೆ ತಲುಪಿದ್ದು ,ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸರಕಾರದ ವಿವಿಧ ಜನಪರ ಯೋಜನೆಗಳನ್ನು ಪಡೆಯಬೇಕಾದರೆ ಕಂಪ್ಯೂಟರ್ ನ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಹಾಗೆ ಗ್ರಾಮೀಣ ಮತ್ತು ಹಳ್ಳಿಗಳಲ್ಲಿ ಸಾಮನ್ಯ ಜನರಿಗೆ ತುಂಬಾ ಅನಾನುಕೂಲ ಇದ್ದ ಕಾರಣ ಇಂದು ಸಾಮಾನ್ಯ ಸೇವಾ ಕೇಂದ್ರ ವನ್ನು ಹಾಲಾಪೂರ ನಲ್ಲಿ ಮಾಡಿದ್ದು ಬಹಳಷ್ಟು ಜನರಿಗೆ ಅನುಕೂಲವಾಗಿದೆ ಎಂದು ಕಾರ್ಯಕ್ರಮ ಉದ್ಘಟಸಿದ ಗ್ರಾಮ ಪಂಚಾಯತಿ ಅದ್ಯಕ್ಷರಾದ ರವಿ ದೇಸಾಯಿ ಹೇಳಿದರು ಈ ಒಂದು ಕೇಂದ್ರದ ಲಾಭಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ ಎಂದು ರವಿ ದೇಸಾಯಿ ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಸಿದ್ದಾರ್ಥ ಪಾಟೀಲ್ ಕರ್ನಾಟಕದಲ್ಲಿ ಸಾರ್ವಜನಿಕರಿಗೆ ಬಹುತೇಕ ಸಹಾಯ, ಸಹಕಾರ, ಸ್ತ್ರೀಯರಿಗೆ ಉದ್ಯೋಗ ಕೊಟ್ಟಿರುವ ಯಾವುದಾದರೂ ಸಂಸ್ಥೆ ಇದ್ದರೆ ಅದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯಾಗಿದ್ದು, ಇಂದು ನೂತನವಾಗಿ ಸಾರ್ವಜನಿಕರಿಗೆ ಬಹಳಷ್ಟು ಕಂಪ್ಯೂಟರ್ ಸೇವೆ ಕೇಂದ್ರ ಅವಶ್ಯಕತೆ ಇತ್ತು ಅದು ನಮ್ಮ ಗ್ರಾಮದಲ್ಲಿ ಆರಂಭ ಮಾಡಿದ್ದು ಹಾಲಾಪೂರ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಉಪಯುಕ್ತ ವಾಗಿದೆ, ಆದ್ದರಿಂದ ಇಂದು ಪ್ರತಿಯೊಂದು ಸರಕಾರದ ಯೋಜನೆಗಳನ್ನು ಪಡೆಯಬೇಕಾದರೆ ಆನ್ ಲೈನ್ ಸೇವೆಗೆ ಒಳಪಡಿಸಿದ್ದು ಮತ್ತು ಈ ಸೇವೆಯಲ್ಲಿ ರಿಯಾಯಿತಿ ದರದಲ್ಲಿ ಅರ್ಜಿಗಳನ್ನು ಹಾಕತ್ತಾರೆ ಅದಕ್ಕೆ ಸಾರ್ವಜನಿಕರು ಲಾಭ ಪಡೆದುಕೊಳ್ಳಿ ಎಂದು ಗ್ರಾಮದ ಯುವ ಮುಖಂಡ ಸಿದ್ದಾರ್ಥ ಪಾಟೀಲ್ ಹೇಳಿದರು. ಕಾರ್ಯಕ್ರಮದಲ್ಲಿ ವಿನೋದ ತಾಂತ್ರಿಕ ಸಹಾಯಕ, ಜ್ಯೋತಿ ಮೇಲ್ವಿಚಾರಕಿ, ಮುತ್ತುರಾಜ ಸೇವಾ ಪ್ರತಿನಿಧಿ , ವಿಜಯಲಕ್ಷ್ಮಿ, ದೇವಮ್ಮ, ರಾರಾಯಪ್ಪ, ಗ್ರಾಮಸ್ಥರು ಇದ್ದರು.
Be the first to comment