ಕೆರೇಕೈರಿಗೆ ಅರ್ಥಧಾರಿ ಪ್ರಶಸ್ತಿ ಪ್ರಕಟ….!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು

ಶಿರಸಿ:

CHETAN KENDULI

ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ಯಕ್ಷಗಾನ ಕಲಾರಂಗದ ಅರ್ಥಧಾರಿ ಪ್ರಶಸ್ತಿಗೆ ಮೇರು ವಿದ್ವಾಂಸ ವಿದ್ವಾನ್ ಉಮಾಕಾಂತ್ ಭಟ್ ಕೆರೇಕೈ ಭಾಜನರಾಗಿದ್ದಾರೆ.

ಉಡುಪಿಯ ಯಕ್ಷಗಾನ ಕಲಾರಂಗ ಪೆರ್ಲ ಕೃಷ್ಣ ಭಟ್ ಮತ್ತು ಮಟ್ಟಿ ಮುರಲೀಧರ ರಾವ್ ನೆನಪಿನಲ್ಲಿ ತಾಳಮದ್ದಲೆ ಅರ್ಥಧಾರಿಗಳಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ ಇದಾಗಿದೆ. ಉಮಾಕಾಂತ್ ಭಟ್ ಇವರು ಮೇಲುಕೋಟೆ ಸಂಸ್ಕೃತ ಮಹಾ ವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಚಾರ್ಯರಾಗಿದ್ದು ಪ್ರಸಿದ್ಧ ಅರ್ಥಧಾರಿಯಾಗಿ ಜನಪ್ರಿಯತೆ ಗಳಿಸಿದವರು. ಸಂಸ್ಕೃತ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಮತ್ತು ಆಗಾಧ ಪುರಾಣ ಜ್ಞಾನ ಹೊಂದಿದವರು. ಪ್ರವಚನಕಾರರಾಗಿ ಪರಿಚಿತರು.

ಈ ವರ್ಷವಷ್ಟೇ ಕೆರೇಕೈ ಅವರಿಗೆ ಪಲಿಮಾರು ‌ಮಠದಿಂದ ರಾಘವಾನುಗ್ರಹ ಪ್ರಶಸ್ತಿ, ಸ್ವರ್ಣವಲ್ಲಿ‌ ಸಂಸ್ಥಾನದ ಯಕ್ಷ ಶಾಲ್ಮಲಾದಿಂದ ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿ ಸ್ವೀಕಾರ ಮಾಡಿದ್ದರು. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 20 ಸಾ.ರೂ. ರೂಪಾಯಿ ನಗದನ್ನು ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಸೆಪ್ಟೆಂಬರ್ 26ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ. ಕೆರೇಕೈ ಅವರೊಂದಿಗೆ ಸುರತ್ಕಲ್ ವಾಸುದೇವ ರಾವ್ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂಬುದು ಉಲ್ಲೇಖನೀಯ.

Be the first to comment

Leave a Reply

Your email address will not be published.


*