ಕಾಂಗ್ರೆಸ್ ಸರಕಾರದಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಕಾಮಗಾರಿಗೆ ಚಾಲನೆ ನೀಡಲಾಗಿತ್ತು ೨೦೧೮ರಲ್ಲಿ ನಿಂತಿರುವ ಕೆಲಸಕ್ಕೆ ಈಗಲೂ ನೆನೆಗುದ್ದಿಗೆ ಆರೋಪ : ಮಾಜಿ ಸಚಿವ ಕೃಷ್ಣಭೈರೇಗೌಡ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಈ ಭಾಗಕ್ಕೆ ಯಾವ ನದಿಯಿಂದಲೂ ನೀರು ತರಲು ಆಗುತ್ತಿಲ್ಲ. ಕಾವೇರಿ ನೀರಿಗೆ ಕೈಹಾಕಿದರೆ ತಮಿಳುನಾಡಿನವರು ಎದ್ದೇಳ್ತಾರೆ. ಸತತ ಬರಗಾಲವನ್ನು ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾಂಗ್ರೆಸ್ ಸರಕಾರದಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಕಾಮಗಾರಿಗೆ ದಿಟ್ಟ ನಿರ್ಧಾರ ಕೈಗೊಂಡು ಹಸಿರು ನಿಶಾನೆ ತೋರಿದ್ದ ಹೆಗ್ಗಳಿಕೆ ಇದೆ ಎಂದು ಮಾಜಿ ಕೃಷಿ ಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡ ತಿಳಿಸಿದರು.

CHETAN KENDULI

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ದೇವನಹಳ್ಳಿ ವಿ.ಸಭಾಕ್ಷೇತ್ರ ಗ್ರಾಪಂ ಹಾಗೂ ವಾರ್ಡ್ ಪ್ರಜಾಪ್ರತಿನಿಧಿ ಸಮಿತಿ ರಚನೆಯ ಪೂರ್ವಭಾವಿ ಸಭೆ ಮತ್ತು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ನೇತೃತ್ವದಲ್ಲಿ ದಿನಸಿಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುಡಿಯುವ ನೀರನ್ನು ತರಲು ೧೩ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಂಗ್ರೆಸ್ ಸರಕಾರದ ಸಿದ್ಧರಾಮಯ್ಯ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ೨೦೧೮ರಲ್ಲಿ ಕಾಮಗಾರಿಗಳ ಉದ್ಘಾಟನೆ ಆಗಿ ಕೆಲಸ ಎಲ್ಲಿಗೆ ಬಂದು ನಿಂತಿದೆಯೋ ಅಲ್ಲಿಯೇ ಇದುವರೆಗೂ ನಿಂತುಹೋಗಿದೆ. ಭ್ರಷ್ಟ ಬಿಜೆಪಿ ಸರಕಾರ ಕೇವಲ ಕಮಿಷನ್ ಸರಕಾರವಾಗಿದೆ. ಜನಗಳಿಗೆ ಬಣ್ಣ ಬಣ್ಣದ ಮಾತುಗಳಾಡಿ ಮತಬ್ಯಾಂಕ್‌ಗಳನ್ನಾಗಿ ಮಾಡಿಕೊಂಡಿದ್ದಾರೆ. ಸವಾಲಾಗಿ ಈ ಬಾರಿ ಮತ್ತೇ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಆದಷ್ಟು ಶೀಘ್ರವಾಗಿ ಎತ್ತಿನಹೊಳೆ ನೀರು ಈ ಭಾಗದ ಜನರಿಗೆ ಸಿಗುವ ಕೆಲಸವನ್ನು ಮಾಡಲಾಗುತ್ತದೆ. ಈ ಭಾಗದ ಶಾಸಕರು ನನ್ನ ಮೇಲೆ ಆರೋಪಗಳನ್ನು ಮಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಈ ಭಾಗಕ್ಕೆ ನೀರಿನ ಮೂಲವನ್ನು ತರುವ ಕೆಲಸ ಮಾಡಲಿ. ಈಗ ಜೆಡಿಎಸ್‌ನವರು ಬಿಜೆಪಿ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್‌ನವರು ಏನೇ ಕೇಳಿದರೂ ಬಿಜೆಪಿ ಸರಕಾರ ಇಲ್ಲವೆಂದು ಹೇಳುತ್ತಾರೆ. ಈಗ ಅವರ ರಾಷ್ಟ್ರೀಯ ನಾಯಕರನ್ನು ಕರೆದುಕೊಂಡು ಹೋಗಿ ತಾಲೂಕಿಗೆ ಬರಬೇಕಾದ ನೀರಿನ ಮೂಲ ತರಿಸಲು ಪ್ರಯತ್ನ ಪಡಲಿ ಆಗ ನಾವೇ ಶಾಸಕರನ್ನು ವೇದಿಕೆಯಲ್ಲಿ ಅಭಿನಂದಿಸುತ್ತೇವೆ ಎಂದು ಹೇಳಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕೊರೊನಾ ವೈರಸ್ ಬಂದದ್ದು ಮೊದಲನೆ ಅಲೆ ಚೈನಾದಿಂದ ಬಂದದ್ದು, ಆದರೆ, ಎರಡನೇ ಅಲೆ ಸಂಪೂರ್ಣವಾಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ನಿರ್ಲಕ್ಷ್ಯದಿಂದ ಬಂದಿದೆ. ಎಲ್ಲರೂ ಕೂಡ ನೋವುಗಳು, ತೊಂದರೆಗಳನ್ನು ಅನುಭವಿಸುವಂತೆ ಆಯಿತು. ಬಿಜೆಪಿ ಸರಕಾರ ಏಪ್ರಿಲ್ ತಿಂಗಳಿನಲ್ಲಿ ಲಾಕ್‌ಡೌನ್ ಅಸ್ತ್ರವನ್ನು ಬಳಸಿ ರೈತರಿಗೆ, ಕಾರ್ಮಿಕರಿಗೆ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕೊರೊನಾ ಸಾವಿನ ಸಂಖ್ಯೆ ಸಂಪೂರ್ಣ ಸುಳ್ಳು ಅಂಕಿಅಂಶಗಳನ್ನು ಕೊಟ್ಟಿದ್ದಾರೆ. ಕೊರೊನಾ ಲಸಿಕೆ ಸರಿಯಾಗಿ ಕೊಟ್ಟಿಲ್ಲ. ಕೊರೊನಾದಿಂದ ಸಾವಿಗೀಡಾದವರ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ಕಷ್ಟದ ಜನರಿಗೆ ರೇಷನ್ ಕೊಟ್ಟಿಲ್ಲ. ಸಂಪೂರ್ಣವಾಗಿ ಬಿಜೆಪಿ ಸರಕಾರ ಅಭಿವೃದ್ಧಿ ಇರಲಿ, ಕೇವಲ ಕುರ್ಚಿ, ಅಧಿಕಾರ ಎಂದೇ ಕಿತ್ತಾಟ ಮಾಡುವುದಲ್ಲಿ ತಲೀನರಾಗಿರುವುದು ಜನರಿಗೆ ಮನದಟ್ಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ದೇವನಹಳ್ಳಿ ತಾಲೂಕು ಉಸ್ತುವಾರಿ ಅಂಗಡಿ, ಎಂಎಲ್‌ಸಿ ಎಸ್.ರವಿ, ಮಾಜಿ ಶಾಸಕರುಗಳಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಉಪಾಧ್ಯಕ್ಷರಾದ ವಿ.ಶಾಂತಕುಮಾರ್, ಎಸ್.ಪಿ.ಮುನಿರಾಜು, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ಚೇತನ್‌ಗೌಡ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್, ಜಿಪಂ ಮಾಜಿ ಸದಸ್ಯರಾದ ಕೆ.ಸಿ.ಮಂಜುನಾಥ್, ಅನಂತ್‌ಕುಮಾರಿ, ರಾಧಮ್ಮ, ಕುಂದಾಣ ಹೋಬಳಿ ಅಧ್ಯಕ್ಷ ಕೋದಂಡರಾಮು, ವಿಜಯಪುರ ಬ್ಲಾಕ್ ಅಧ್ಯಕ್ಷ ರಾಮಚಂದ್ರಪ್ಪ, ಕಾರಹಳ್ಳಿ ಮುಖಂಡರಾದ ಲಕ್ಷ್ಮೇಗೌಡ, ಜಯರಾಮು, ಟಿ.ಎಸ್.ರಾಜಣ್ಣ, ಶಶಿಕುಮಾರ್, ಕೆಂಪಣ್ಣ, ಅಮೀರ್‌ಜಾನ್, ತಾಜ್‌ಪೀರ್, ಜೋಸೆಫ್ (ರಾಜಣ್ಣ), ಸಜ್ಜಾದ್, ಗೋಪಾಲಗೌಡ, ಮಾಜಿ ತಾಪಂ ಸದಸ್ಯ ದಿನ್ನೂರು ವೆಂಕಟೇಶ್, ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧಾಕರ್, ಮುಖಂಡರಾದ ಚನ್ನಹಳ್ಳಿ ರಾಜಣ್ಣ, ನೆರಗನಹಳ್ಳಿ ನಾಗೇಶ್, ಕೆ.ಆರ್.ನಾಗೇಶ್, ಸೋಮಶೇಖರ್, ಬುಳ್ಳಹಳ್ಳಿ ರಾಜಪ್ಪ, ವಿಜಯ್‌ಕುಮಾರ್, ಅರ್ಶಿಗೌಡ, ಖಾದಿಬೋರ್ಡ್ ಅಧ್ಯಕ್ಷ ನಾಗೇಗೌಡ, ಮಹಿಳೆಯರಾದ ಪದ್ಮಮ್ಮ, ಕೃಷ್ಣವೇಣಿ, ಭಾಗ್ಯ, ಮೀನಾಕ್ಷಿ, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*