ರಾಜ್ಯ ಸುದ್ದಿಗಳು
ಸೆಪ್ಟೆಂಬರ್ 3 ರಂದು ನೆಡೆಯಲಿರುವ ದೊಡ್ಡಬಳ್ಳಾಪುರ ನಗರಸಭಾ ಚುನಾವಣೆ ಶಾಂತಿಯುತವಾಗಿ ನೆಡೆಯಲು ಯಾವುದೇ ಅಹಿತಕರಘಟನೆ ಸಂಭಾವಿಸದಂತೆ ಕಾಪಾಡಲು ಪೊಲೀಸ್ ಇಲಾಖೆ 200- ಪೊಲೀಸ್,25 – ಎ.ಎಸ್. ಐ,8- ಪಿ ಎಸ್ ಐ,3 – ಇನ್ಸ್ಪೆಕ್ಟರ್, 2 – ಡಿ ಆರ್ ತಂಡ, 1 – ಡಿ ವೈ ಎಸ್ ಪಿ, ನಾಲ್ಕು ಮಂದಿ ಸೆಕ್ಟರ್ ಅಧಿಕಾರಿಗಳು ಸೇರಿದಂತೆ 290 ಸಿಬ್ಬಂದಿಗಳ ತಂಡವನ್ನು ರಚಿಸಲಾಯಿತು.
31 ಸ್ಥಾನಗಳಿಗಾಗಿ ನೆಡೆಯುತ್ತಿರುವ ಚುನಾವಣೆಗೆ ನಗರಾದ್ಯಂತ 119 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು ಈ ಪೈಕಿ ಕಾಂಗ್ರೆಸ್ ಪಕ್ಷದಿಂದ -31, ಬಿ ಜೆ ಪಿ ಪಕ್ಷದಿಂದ -30, ಜೆ ಡಿ ಎಸ್ ಪಕ್ಷದಿಂದ -28, ಬಿ ಎಸ್ ಪಿ ಪಕ್ಷದಿಂದ -3, ಸಿ ಪಿ ಐ ( ಎಂ ) ಪಕ್ಷದಿಂದ 2, ಕನ್ನಡಪಕ್ಷ -5, ಕೆ ಆರ್ ಎಸ್ – 2, ಯು ಪಿ ಪಿ -1, ಎಸ್ ಡಿ ಪಿ ಐ – 2, ಹಾಗೂ ಇತರೆ ಪಕ್ಷೇತರರಾಗಿ 15 ಅಭ್ಯರ್ಥಿಗಳು ಸ್ಪರ್ಧೆಸುತ್ತಿದ್ದಾರೆ….
ನಗರಸಭಾ ಚುನಾವಣೆಯು ಸೆ.3 ರಂದು ಬೆಳ್ಳಿಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ನೆಡೆಯಲಿದ್ದು ನಗರದಲ್ಲಿ ಶಾಂತಿಯುತ ಮತದಾನ ನೆಡೆಯುವಂತೆ ಕಾರ್ಯನಿರ್ವಾಹಿಸಬೇಕೆಂದು ಡಿ ವೈ ಎಸ್ ಪಿ ರಂಗಪ್ಪ ತಿಳಿಸಿದರು
Be the first to comment