ಜೂನ್ 20 ಕ್ಕೆ ಪೀಠಾರೋಹಣ…! ಆರ್ಯವೈಶ್ಯ ಸಮಾಜ ಸ್ವಾಮೀಜಿಗಳಿಗೆ ಭವ್ಯ ಸ್ವಾಗತ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಆರ್ಯ ವೈಶ್ಯ ಸಮಾಜ ಬಾಂಧವರ ಸಂಖ್ಯೆ ರಾಜ್ಯದಲ್ಲಿ ಶೇ.1 ರಷ್ಟಿದ್ದು, ಅವರೆಲ್ಲರ ಸಂಘಟನೆ ಅವಶ್ಯವಿದೆ ಎಂದು ಆರ್ಯ ವೈಶ್ಯ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಆರ್.ರವಿಕುಮಾರ ಹೇಳಿದರು.

ಅವರು ಅವರು ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ಸಂಜೆ ನಡೆದ ಆರ್ಯವೈಶ್ಯ ಸ್ವಾಮೀಜಿಗಳಿಗೆ ಸ್ವಾಗತ ಹಾಗೂ ಸಮಾಜ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಆರ್ಯವೈಶ್ಯ ಸಮಾಜವನ್ನು ಸರ್ವಶಕ್ತ ರೀತಿಯಲ್ಲಿ ಕಟ್ಟಿ ಬೆಳೆಸಿದ ಚಂದ್ರಶೇಖರ ಸ್ವಾಮೀಜಿಗಳ ನಿಧನದ ನಂತರ  ಎರಡು ವರ್ಷಗಳವರೆಗೆ ಖಾಲಿಯಾಗಿದ್ದ ಪೀಠವನ್ನು  ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಏರುತ್ತಿದ್ದು, ಅವರ ಪೀಠಾರೋಹಣ ಇದೇ ಜೂನ್ 20 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆರ್ಯ ವೈಶ್ಯ ಸಮಾಜ ಬಾಂಧವರ ಸಭೆ ನಡೆಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.



 ಸಾನಿಧ್ಯ ವಹಿಸಿದ್ದ  ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಮಾತನಾಡಿ, ಆರ್ಯವೈಶ್ಯ ಸಮಾಜ ಬಾಂಧವರ ಏಕತೆ, ಸಂಘಟನೆ, ಶೈಕ್ಷಣಿಕ ಪ್ರಗತಿ ಮುಖ್ಯವಾಗಿದೆ. ಅಲ್ಲಲ್ಲಿ ಹರಿದು ಹಂಚಿ ಹೋಗಿರುವ ಸಮಾಜ ಬಾಂಧವರು ಒಂದಾಗಿ ಅಭಿವೃದ್ಧಿ ಸಾಧಿಸುವತ್ತ ಮಹಾಸಭಾ ಕೆಲಸ ಮಾಡಲಿದೆ. ನಾವು ನಮ್ಮ ಮಕ್ಕಳಿಗೆ ಧರ್ಮದಿಂದ ನಡೆಯುವಂತೆ ಕಲಿಸಬೇಕು. ಅದಕ್ಕೆ ಮಠಗಳ ಅವಶ್ಯಕತೆ ಇದೆ ಎಂದು ಹೇಳಿದರು. ಇದಕ್ಕೂ ಮೊದಲು ಬಾಗಲಕೋಟೆಯಿಂದ ಬಂದ ಸ್ವಾಮೀಜಿಗಳನ್ನು ವಾಸವಿ ಯುವಜನ ಸಂಘದ ಅಧ್ಯಕ್ಷ ಶ್ರೀನಿವಾಸ ಇಲ್ಲೂರ ಅವರ ಮನೆಯಲ್ಲಿ ಸ್ವಾಗತಿಸಿ, ಶ್ರೀಗಳ ಪಾದಪೂಜೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕೆ.ವಿ.ಪ್ರಸನ್ನಕುಮಾರ, ಆರ್ಯ ವೈಶ್ಯ ಸಮಾಜದ ಜಿಲ್ಲಾ ಅಧ್ಯಕ್ಷ ಎನ್.ಜಿ.ಇಲ್ಲೂರ, ಮಹಾಸಭಾ  ಸದಸ್ಯ ಎ.ಎನ್. ಇಲ್ಲೂರ,   ಸಮಾಜದ ಸಂಘಟನೆ ವಸಂತ ಇಲ್ಲೂರ, ವೆಂಕಟೇಶ ಇಲ್ಲೂರ, ನಾರಾಯಣ ಇಲ್ಲೂರ, ವೆಂಕಟೇಶ ವಡವಡಗಿ, ಷಣ್ಮುಖಯ್ಯ ಇಲ್ಲೂರ, ಗಿರೀಶ ಇಲ್ಲೂರ, ನಿಂಗಯ್ಯ ಕೋಳೂರ, ಮುತ್ತಣ್ಣ ಇಲ್ಲೂರ, ಸುನೀಲ ಇಲ್ಲೂರ, ಉದಯ ಇಲ್ಲೂರ, ಶ್ರೀಹರಿ ಇಲ್ಲೂರ, ಪ್ರಕಾಶ ಇಲ್ಲೂರ, ವೆಂಕಟೇಶ ದೋಟಿಹಾಳ, ಕಿರಣ ಅಂಗಡಿ, ವೀರೇಶ ಇಲ್ಲೂರ, ಪ್ರಸನ್ನ ಇಲ್ಲೂರ, ಗೋಪಾಲಯ್ಯ ಹಡಗಲಿ ಸೇರಿದಂತೆ ವಿಜಯಪೂರ, ತಾಳಿಕೋಟಿ, ಆಲಮಟ್ಟಿ, ರಾಂಪೂರದಿಂದ ಬಂದ ಆರ್ಯವೈಶ್ಯ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಸ್ವಾಗತ ಸಮಿತಿ ಸದಸ್ಯ ಶ್ರೀನಿವಾಸ ಇಲ್ಲೂರ ಸ್ವಾಗತಿಸಿದರು.  ರೇಖಾ ನಾರಾಯಣ ಇಲ್ಲೂರ ಸ್ವಾಮೀಜಿಗಳ ಬಗ್ಗೆ ವಿವರಿಸಿದರು. ಎಲ್.ಎನ್.ತಾಳಪಲ್ಲೆ ನಿರೂಪಿಸಿದರು. ಕುಮಾರ ಇಲ್ಲೂರ ವಂದಿಸಿದರು. 

Be the first to comment

Leave a Reply

Your email address will not be published.


*