ಶ್ರೀ ನಾರಾಯಣ ಗುರುಗಳ ಪುಣ್ಯಸ್ಮರಣೆ

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘಟನೆ ಹೊನ್ನಾವರದ ಇದರ ವತಿಯಿಂದ ಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿಯನ್ನು ರಾಯಲಕೇರಿಯ ಅಂಬೆಡ್ಕರ್ ಸಭಾಭವನದಲ್ಲಿ ಆಚರಿಸಲಾಯಿತು.

CHETAN KENDULI

ಈ ಸಂದರ್ಭದಲ್ಲಿ BSNDP ತಾಲೂಕಾ ಅಧ್ಯಕ್ಷರಾದ ಧನಂಜಯ್ ನಾಯ್ಕ್ ರಾಯಲಕೇರಿ ಮಾತನಾಡಿ ” ನಾರಾಯಣ ಗುರುಗಳ ತತ್ತ್ವ ಸಿದ್ಧಾಂತ ಅತ್ಯಂತ ಸರಳ ಮತ್ತು ಸುಲಭವಾಗಿ ಎಲ್ಲರಿಗು ಅರ್ಥ ಆಗುವಂತದ್ದು. ಶ್ರೀ ನಾರಾಯಣ ಗುರುಗಳು ಒಂದೆ ಜಾತಿ, ಒಂದೆ ಮತ, ಒಂದೆ ಕುಲ , ಎಂದು ಮನುಕುಲಕ್ಕೆ ಸಾರಿದವರು. ಸಮಾಜದಲ್ಲಿ ಇದ್ದ ಜಾತೀಯತೆ, ಅಸ್ಪೃಶ್ಯತೆ, ಜೀತ, ಜಮೀನ್ದಾರಿ ಪದ್ಧತಿ, ಮೂಢನಂಬಿಕೆ ವಿರುದ್ಧ ಹೋರಾಡಿದವರು. ಸಮಸ್ತ ಮನುಕುಲದ ಒಳಿತಿಗಾಗಿ ನಾವು ಅವರ ತತ್ತ್ವ ಸಿದ್ಧಾಂತವನ್ನು ಪಾಲಿಸಬೇಕು “ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸಂತೋಶ್ ನಾಯ್ಕ್ ಹಾಗು ಪದಾಧಿಕಾರಿಗಳಾದ ದಿನೇಶ ನಾಯ್ಕ್, ಶ್ರೀನಿವಾಸ ನಾಯ್ಕ್, ಅವಿನಾಶ ನಾಯ್ಕ್, ಗಣಪತಿ ನಾಯ್ಕ್, ಪ್ರದೀಪ ನಾಯ್ಕ್, ನಾಗರಾಜ ನಾಯ್ಕ್, ಶ್ರೀನಾಥ ನಾಯ್ಕ್, ಸಂದೀಪ ನಾಯ್ಕ್, ಸಿಡಿ ರಾಘವೇಂದ್ರ, ಪ್ರದೀಪ ನಾಯ್ಕ್,
ವಿನೊದ್ ನಾಯ್ಕ್, ಶರತ್ ನಾಯ್ಕ್ ಇನ್ನು ಮುಂತಾದವರು ಗುರುಗಳ ಭಾವಚಿತ್ರಕ್ಕೆ ನಮಸ್ಕರಿಸಿ ಆಶಿರ್ವಾದ ಪಡೆದರು.

Be the first to comment

Leave a Reply

Your email address will not be published.


*