ಜಿಲ್ಲಾ ಸುದ್ದಿಗಳು
ಭಟ್ಕಳ
ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದ ಬಗ್ಗೆ ಈಶ್ವರ ಲಚ್ಚಯ್ಯ ಮೊಗೇರ ಈತನ ಮೇಲೆ ಪರಿಶಿಷ್ಟ ಜಾತಿ ಬುಡಕಟ್ಟು ಜನಾಂಗ ದೌರ್ಜನ್ಯ ಪ್ರತಿಬಂಧಕ ಕಾಯಿದೆ 1989 ಮತ್ತು ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ ನೇಮಕಾತಿ ಮೀಸಲಾತಿ ಮುಂತಾದವು ಇತ್ಯಾದಿ ಅಧಿನಿಯಮ 1990ರಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ನಾರಾಯಣ ಶಿರೂರ ನೇತ್ರತ್ವದಲ್ಲಿ ದಲಿತ ಸಂಘಟನೆ ಕಾರ್ಯಕರ್ತರು ಭಟ್ಕಳ ತಹಶೀಲ್ದಾರ ರವಿಚಂದ್ರರಿಗೆ ಮನವಿ ಸಲ್ಲಿಸಿದರು
ನಾರಾಯಣ ಶಿರುರರು ಮಾತನಾಡಿ ಈಶ್ವರ ಲಚ್ಚಯ್ಯ ಮೊಗೇರ ಸಾ|| ಜಾಲಿಕೋಡಿ: ಭಟ್ಕಳ ಈತನು ತಹಶಿಲ್ದಾರ ಕಚೇರಿಗೆ ತಾನು ಪರಿಶಿಷ್ಟ ಜಾತಿ ‘ಮೊಗೇರ’ ಎಂದು ಸುಳ್ಳು ಮಾಹಿತಿಯನ್ನು ನೀಡಿ ದಿನಾಂಕ 17/11/1998ರಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದು ಸದರಿ ನಕಲಿ ಜಾತಿ ಪ್ರಮಾಣ ಪತ್ರವನ್ನು ಸ್ವತ: ದಿನಾಂಕ 21/12/2021ರಂದು ರದ್ದುಗೊಳಿಸಿದ್ದು ಈತನ ಮೇಲೆ ಪರಿಶಿಷ್ಟ ಜಾತಿ, ಬುಡಕಟ್ಟು ಜನಾಂಗ: ದೌರ್ಜನ್ಯ ಪ್ರತಿಬಂಧಕ ಕಾಯಿದೆ 1989 ಕಲಂ 3(q) ಮತ್ತು ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ ಮುಂತಾದವು)ಇತ್ಯಾದಿ ಅಧಿನಿಯಮ 1990ರ ಕಲಂ 5ಎರಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆ ಕಲಂ 465,468,471 ಮತ್ತು 120ರಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ತಹಶಿಲ್ದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Be the first to comment