ನರರೋಗ ಬೆನ್ನೆಲುಬು ಮಾನಸಿಕ ರೋಗಿಗಳಿಗೆ ಉಚಿತ ಆರೋಗ್ಯ ಶಿಬಿರ : ಬೆಂಗಳೂರು ನ್ಯೂರೋ ಸೆಂಟರ್ ನವಚೇತನ ಆಸ್ಪತ್ರೆ ಸಹಯೋಗ :

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

 

ಯಲಹಂಕ

CHETAN KENDULI

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ನರರೋಗ, ಬೆನ್ನೆಲುಬು ಮತ್ತು ಮಾನಸಿಕ ರೋಗಗಳಿಗೆ ಸೂಕ್ತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಯಲಹಂಕದ ನವಚೇತನ ಆಸ್ಪತ್ರೆ ಮತ್ತು ಬೆಂಗಳೂರು ನ್ಯೋರೋ ಸೆಂಟರ್ ಸಹಯೋಗದೊಂದಿಗೆ ಭಾನುವಾರ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನವಚೇತನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಜಿ.ಗಿರೀಶ್ ಚಂದ್ರ ತಿಳಿಸಿದರು.ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ‘ಉಚಿತ ಆರೋಗ್ಯ ಶಿಬಿರವು ಭಾನುವಾರ ಬೆಳಿಗ್ಗೆ 9ಕ್ಕೆ ಆರಂಭವಾಗಿ ಮಧ್ಯಾಹ್ನ 2 ಗಂಟೆಯವರೆಗೂ ನಡೆಯಲಿದ್ದು, ಶಿಬಿರದಲ್ಲಿ ಬೆಂಗಳೂರು ನ್ಯೂರೋ ಸೆಂಟರ್ ನ ಖ್ಯಾತ ನರರೋಗ ತಜ್ಞ ಡಾ.ಆರ್.ಉಮಾಶಂಕರ್ ಸೇರಿದಂತೆ ನವಚೇತನ ಆಸ್ಪತ್ರೆಯ ಹೆಸರಾಂತ ತಜ್ಞ ವೈದ್ಯರು ಸಾರ್ವಜನಿಜನಿಕರಿಗೆ ಉಚಿತ ತಪಾಸಣೆ ಮತ್ತು ಸಮಾಲೋಚನೆ ನಡೆಸಲಿದ್ದಾರೆ.

ತಕೆನೋವು, ನರದೌರ್ಬಲ್ಯ, ನಿಶ್ಯಕ್ತಿ, ಬೆನ್ನು, ಕುತ್ತಿಗೆ ನೋವು, ತಲೆತಿರುಗುವಿಕೆ, ಮೂರ್ಛೆರೋಗ, ನಡೆದಾಡಲು ಸಮಸ್ಯೆ, ಸ್ಪರ್ಷ ಸಂವೇದನೆಯ ಕೊರತೆ, ಮಂದಗತಿಯ ಮಾತು, ಸ್ಮರಣಶಕ್ತಿಯ ಕೊರತೆ, ನಿದ್ರಾಹೀನತೆ, ಅನಗತ್ಯ ಬೇಸರ, ಮಾನಸಿಕ ಖಿನ್ನತೆ, ಅತಿಯಾದ ಆತಂಕದ ಅನುಭವ, ದುಗುಡ, ಸಹಜ ವರ್ತನೆಯಲ್ಲಿ ಏರುಪೇರು ಸೇರಿದಂತೆ ನರರೋಗ, ಬೆನ್ನೆಲುಬು ಹಾಗೂ ಮಾನಸಿಕ ರೋಗಗಳಿಗೆ ಉಚಿತ ಸಮಾಲೋಚನೆ, ತಪಾಸಣೆ ನೀಡಲಾಗುತ್ತಿದ್ದು ಸುತ್ತಮುತ್ತಲಿನ ನಾಗರೀಕರು ಈ ಸದವಕಾಶವನ್ನು ಸದುಪಯೋಗ ಪಡಿಸುಕೊಳ್ಳುವ ಮೂಲಕ ರೋಗ ಮುಕ್ತ ಜೀವನ ನಡೆಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು. ನವಚೇತನ ಆಸ್ಪತ್ರೆಯ ವತಿಯಿಂದ ಪ್ರತಿವರ್ಷ ಆಯೋಜಿಸಲಾಗುತ್ತಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಸ್ತಗಿತಗೊಳಿಸಲಾಗಿತ್ತು, ಇದೀಗ ಪುನಃ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಸಂತೋಷ ಉಂಟು ಮಾಡಿದೆ ಎಂದರು.ಇದೇ ಸಂದರ್ಭದಲ್ಲಿ ನವಚೇತನ ಆಸ್ಪತ್ರೆಯ ನಿರ್ದೇಶಕ, ನ್ಯೂರೋ ಸರ್ಜನ್ ಡಾ.ಕೃಷ್ಣಪ್ರಸಾದ್, ಡಾ.ಪಿ.ಎಂ.ಜಯಸಿಂಹ ಶೆಟ್ಟಿ ಸೇರಿದಂತೆ ಇನ್ನಿತರರಿದ್ದರು.

Be the first to comment

Leave a Reply

Your email address will not be published.


*