ಜಿಲ್ಲಾ ಸುದ್ದಿಗಳು
ಕುಮಟಾ
ಕೋವಿಡ್ ಲಾಕ್‍ಡೌನ್ ವೇಳೆ ಕೊರೊನಾ ವಾರಿಯರ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕುಮಟಾ ಪೆÇಲೀಸ್ ಠಾಣೆಯ ಕ್ರೈಂ ಪಿಎಸ್‍ಐ ಸುಧಾ ಅಘನಾಶಿನಿ ಈದೀಗ ಗೋಕರ್ಣಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಮಾತನಾಡಿ, ಮಹಿಳಾ ಅಧಿಕಾರಿಯಾದ ಸುಧಾ ಅಘನಾಶಿನಿ ತಾಲೂಕಿನಲ್ಲಿ ಸಾಕಷ್ಟು ಜನಮನ್ನಣೆಗಳಿಸಿದ್ದಾರೆ. ತಾಲೂಕಿನ ಅನೇಕ ಜನರಿಗೆ ನೆರವಾಗುವುದರ ಜೊತೆಗೆ ಕರ್ತವ್ಯ ಪಾಲನೆ ಮಾಡಿದ್ದು, ಪ್ರತಿಯೊಬ್ಬರೂ ಅವರ ಕಾರ್ಯವನ್ನು ಶ್ಲಾಘಿಸಬೇಕು. 19 ಪ್ರಕರಣಗಳನ್ನು ಭೇದಿಸಿದ ಇವರು, ಕುಂಬೇಶ್ವರ ದೇವಾಲಯದ ಪುರೋಹಿತರಾದ ವಿಶ್ವೇಶ್ವರ ಭಟ್ಟರ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ನಿಷ್ಟಾವಂತ ಅಧಿಕಾರಿಯನ್ನು ಸನ್ಮಾನಿಸುತ್ತಿರುವುದು ನಮಗೆ ಹೆಮ್ಮೆ ಎಂದರು.
ಗೌರವ ಸ್ವೀಕರಿಸಿದ ಸುಧಾ ಅಘನಾಶಿನಿ ಮಾತನಾಡಿ, ಪೆÇಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಒಂದು ರೀತಿಯ ಚಾಲೇಂಜ್ ಎಂದರೆ ತಪ್ಪಾಗಲಾರದು. ಇಲ್ಲಿ ಹಗಲು ರಾತ್ರಿ ಎನ್ನದೇ ದುಡಿಯಬೇಕು. ಜನರ ಸಹಕಾರದಿಂದಲೇ ವೃತ್ತಿ ನಿರ್ವಹಿಸಬೇಕು. ಒಬ್ಬಾಕೆ ಮಹಿಳಾ ಪೆÇಲೀಸ್ ಅಧಿಕಾರಿಯಾಗಿ ತಾಲೂಕಿಗೆ ಒಳ್ಳೆಯ ಸೇವೆ ನೀಡಿದ ತೃಪ್ತಿ ನನಗಿದೆ ಎಂದರು.ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಹಾಗೂ ಸಿದ್ದಾಪುರದ ಪ್ರಭಾರಿ ಎಮ್.ಜಿ. ಭಟ್ಟ, ಯುವ ಮೋರ್ಚಾದ ವಿಶ್ವನಾಥ ನಾಯ್ಕ, ಮಹಿಳಾ ಮೋರ್ಚಾದ ಜಯಾ ಶೇಟ್, ಶೈಲಾ ಗೌಡ, ಮಾದೇವಿ ಮುಕ್ರಿ ಸೇರಿದಂತೆ ಅನೇಕರು ಇದ್ದರು
Be the first to comment