ಜಿಲ್ಲಾ ಸುದ್ದಿಗಳು
ಕುಮಟಾ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಲಾ ವಿದ್ಯಾರ್ಥಿಗಳ ದಾಖಲಾತಿಯ ಬಗ್ಗೆ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ನಮೂದಿಸಲಾಗುತ್ತಿದ್ದು, ಈ ವರ್ಷ ತಾಲೂಕಿನ ದಾಖಲಾತಿಯ ಗುರಿಯು 20684 ಇದೆ.
ಈಗಾಗಲೇ 20717 ವಿದ್ಯಾರ್ಥಿಗಳು ದಾಖಲಾಗುವುದರ ಮೂಲಕ ಶೇ.100ರ ಸಾಧನೆಗೈದು, ರಾಜ್ಯದ 204 ತಾಲೂಕುಗಳಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ.
ತಾಲೂಕಿನ ಈ ಸಾಧನೆಗೆ ಧಾರವಾಡ ವಿಭಾಗದ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹರೀಶ ಎಲ್.ಗಾಂವಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಸಂತಸ ವ್ಯಕ್ತಪಡಿಸಿದ್ದಾರೆ
Be the first to comment