ಪರಿಸರ ಉಳಿವಿಗೆ ೩ನೇ ೧ಭಾಗ ವೃಕ್ಷ ಕವಚದಿಂದ ಕೂಡಿರಬೇಕು ರೈತರಿಗಾಗಿ ಕಾವೇರಿಕೂಗು ಸ್ಟೇಟ್ ಆಫ್ ದಿ ಆರ್ಟ್ ಮೊಬೈಲ್ ಆಪ್ ಬಿಡುಗಡೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪರಿಸರ ಸಮತೋಲನ ಕಾಯ್ದುಕೊಳ್ಳಲು ಮೂರನೆ ಒಂದು ಭಾಗದಷ್ಟು ವೃಕ್ಷ ಕವಚದಿಂದ ಕೂಡಿರಬೇಕು. ವೃಕ್ಷ ಕವಚ ಹೆಚ್ಚಿಗೆ ಮಾಡಲು ಹೊರಟಿದ್ದೇವೆ ಎಂದು ಜಿಲ್ಲಾ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದರು.

CHETAN KENDULI

ದೇವನಹಳ್ಳಿ ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಹಿಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾವೇರಿಕೂಗು ಮೊಬೈಲ್ ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾವೇರಿ ಕೂಗು ಪುನರುಜ್ಜೀವನ ಮಾಡಬೇಕಾದರೆ ರೈತರಿಂದ ಬೇಡಿಕೆ ಪಡೆದು ಅವರಿಗೆ ಬೇಕಾದ ಸಸಿಗಳನ್ನು ಮುಂದಿನ ಮಳೆಗಾಲದಲ್ಲಿ ಮರಮಿತ್ರರು ಜೊತೆಗಿದ್ದಾರೆ ಸರಕಾರ ಎಲ್ಲರು ಒಟ್ಟಿಗೆ ಕೆಲಸ ಮಾಡಿದರೆ ನದಿ ಮೂಲಗಳನ್ನು ಪುನರುಜ್ಜೀವನಗೊಳಿಸಬಹುದಾಗಿದೆ. ಈಶಾ ಔಟ್ರೀಟ್ ಕಾವೇರಿ ಕೂಗು ಆಪ್‌ಅನ್ನು ಬಿಡುಗಡೆ ಮಾಡಿರುವುದು ರೈತರಿಗೆ ಮರ-ಆದಾರಿತ ಕೃಷಿಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ಶೇ.೧೦ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು ಉಳಿದ ಶೇ.೨೩ರಷ್ಟು ಮಾಡಬೇಕಾಗಿದೆ. ರೈತರು ಜಮೀನುಗಳಲ್ಲಿ ಮರನೆಡಲು ಪ್ರೋತ್ಸಾಹ ನೀಡಲು ಅರಣ್ಯ ಇಲಾಖೆ ಜೊತೆಗೂಡಿ ಅಭಿಯಾನ ನಡೆಸಲಾಗುತ್ತಿದೆ. ಈಶಾ ಸಂಸ್ಥೆ ಯಾವುದೇ ಅಪೇಕ್ಷೆ ಇಲ್ಲದೆ ಸ್ವಯಂ ಸೇವಕು ಕೆಲಸ ಮಾಡುತ್ತಿದ್ದಾರೆ ಎಂದರು.

ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಹಂತೇಶ್ ಮುರುಗೋಡ್ ಮಾತನಾಡಿ, ಈಶಾ ಪೌಂಡೇಶನ್ ಟೀಕ್, ಮಹಾಗನಿ, ವಿವಿಧ ತಳಿಗಳ ಸಸಿಗಳನ್ನು ನೆಟ್ಟರೆ ಅದರ ಪ್ರತಿಫಲ ೧೦-೧೫ ವರ್ಷಗಳ ಬಳಿಕ ರೈತರು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಈಶಾ ಸಂಸ್ಥೆ ಉತ್ತಮ ಯೋಜನೆ ರೂಪಿಸಿದೆ. ರೈತರ ತೋಟಗಳಿಗೆ ಮರಮಿತ್ರರು ತೆರಳಿ ಅವರಿಗೆ ಬೇಕಾದ ಸಸಿಗಳನ್ನು ಬೇಡಿಕೆ ತೆರೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ೩೦ಸಾವಿರ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳು, ಕಿಚನ್ ಗಾರ್ಡನ್, ಹಿತ್ತಲುಜಾಗದಲ್ಲಿ ೧೫-೫೦ ಗಿಡ ನೆಡಬಹುದಾಗಿದೆ, ರೈತರು ತೋಟಗಳಲ್ಲಿ ದ್ರಾಕ್ಷಿ, ಸಿಬೆ ಹಾಗು ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಗ್ರಾಮಾಂತರ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈಶಾ ಸಂಸ್ಥೆಯ ಸ್ವಯಂ ಸೇವಕ ನವೀನ್ ಮಾತನಾಡಿ, ಪ್ರತಿಯೊಬ್ಬ ರೈತರಿಗೂ ಮಾದರಿಯನ್ನಾಗಿಸಲು, ಕೃಷಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಈಶಾ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ. ಮರ ಆದಾರಿತ ಕೃಷಿಯನ್ನು ದೊಡ್ಡಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಈ ಆಫ್ ಮಹತ್ವದ ಹೆಜ್ಜೆಯಾಗಲಿದೆ. ಈ ಆಫ್‌ನಿಂದ ರೈತರ ಮನೆಬಾಗಿಲಿನಿಂದಲೇ ಸಶಕ್ತಗೊಳಿಸಬಹುದಾಗಿದೆ. ಸಸಿಗಳ ಬೇಡಿಕೆಯನ್ನು ದಾಖಲಿಸಬಹುದು, ಕೃಷಿ ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ಸ್ಥಾಪಿಸುವುದು. ರೈತರಿಗೆ ಶಿಕ್ಷಣ, ಬದುಕುಳಿದ ಮರಗಳ ಸಮೀಕ್ಷೆ, ರೈತರನ್ನು ಪ್ರೋತ್ಸಾಹಿಸುವುದು. ಇಷ್ಟೆಲ್ಲ ಸೌಲಬ್ಯಗಳು ಮರಮಿತ್ರ ಆಫ್‌ನಲ್ಲಿ ದೊರೆಯಲಿದೆ. ಕಾವೇರಿ ಕೂಗು ೫.೨ ದಶಲಕ್ಷ ರೈತರಿಗೆ ೨೪೨ ಕೋಟಿ ಮರಗಳನ್ನು ಕಾವೇರಿ ಜಲಾನಯನ ಪ್ರದೇಶದಲ್ಲಿ ನೆಡಲು ಮತ್ತು ಕಾವೇರಿ ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ಮರಗಳ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಿದೆ ಎಂದರು.ಇದೇ ವೇಳೆ ಈಶಾ ಪೌಂಡೇಶ್ ಸ್ವಯಂ ಸೇವಕರು, ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*