ರಾಜ್ಯ ಸುದ್ದಿಗಳು
ಗುಬ್ಬಿ
ಪೊಲೀಸರ ವಶದಲ್ಲಿದ ಕಾರು ಬಿಡಲು 28 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟು 12 ಸಾವಿರ ಪಡೆದು ಉಳಿದ 16 ಸಾವಿರ ಲಂಚ ಸ್ವೀಕರಿಸುವ ವೇಳೆ ತಾಲ್ಲೂಕಿನ ಸಿ.ಎಸ್.ಪುರ ಪಿಎಸ್ಐ ಸೋಮಶೇಖರ್ ಎಸಿಬಿ ಬಲೆಗೆ ಬಿದ್ದಿದ್ದು, ವಿಚಾರಣೆ ಅರ್ಧದಲ್ಲೇ ತನ್ನ ಮೊಬೈಲ್ ಜೊತೆ ಬೈಕ್ ನಲ್ಲಿ ಪರಾರಿಯಾದ ಘಟನೆ ತೀರ ಅನುಮಾನಕ್ಕೆ ಎಡೆಮಾಡಿತ್ತು. ನಂತರ ಸಾರ್ವಜನಿಕರು ಬೆನ್ನತ್ತಿ ಹಿಡಿಯಲು ಮುಂದಾದ ಘಟನೆಯೂ ನಡೆದು ಇದರಿಂದ ಪೋಲಿಸ್ ಇಲಾಖೆಗೆ ಮುಜುಗರ ಉಂಟುಮಾಡಿದೆ.ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವವರ ಮೇಲೆ ಕಳೆದ ತಿಂಗಳು 22 ರಂದು ದೂರು ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ಪಡೆದ ಚಂದ್ರಣ್ಣ ತನ್ನ ಕಾರು ಬಿಡಿಸಿಕೊಳ್ಳಲು ಬಂದ ಸಂದರ್ಭದಲ್ಲಿ 28 ಸಾವಿರ ರೂಗಳ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಚಂದ್ರಣ್ಣ ಈಗಾಗಲೇ 12 ಸಾವಿರ ಲಂಚ ನೀಡಿರುವ ಬಗ್ಗೆ ತಿಳಿಸಿ ಉಳಿದ 16 ಸಾವಿರ ರೂ ಲಂಚವನ್ನು ಹೆಡ್ ಕಾನ್ ಸ್ಟೇಬಲ್ ನಯಾಜ್ ಅಹಮದ್ ಮೂಲಕ ಹಣ ನೀಡುವ ಸಮಯದಲ್ಲಿ ಎಸಿಬಿ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮೀ ತಂಡ ಪಿಎಸ್ಐ ಸೋಮಶೇಖರ್ ಮತ್ತು ನಯಾಜ್ ಅವರನ್ನು ವಶಕ್ಕೆ ಪಡೆಯಿತು.
ತನಿಖೆ ಆರಂಭಿಸಿದ ಸಂದರ್ಭದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳ ಮೊಬೈಲ್ ಪಡೆದು ವಿಚಾರಣೆ ನಡೆಸಲಾಯಿತು. ಮಧ್ಯಾಹ್ನ ಊಟದ ಸಮಯದಲ್ಲಿ ಠಾಣೆಯಿಂದ ಹೊರಬಂದ ಪಿಎಸ್ಐ ಸೋಮಶೇಖರ್ ಬೈಕ್ ಏರಿ ಪಲಾಯನ ಆಗಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ತನ್ನ ಮೊಬೈಲ್ ಜೊತೆ ಬೈಕ್ ಏರಿದ ಪಿಎಸ್ಐ ಪರಾರಿಯಾದ ಘಟನೆ ಒಂದು ಸಿನಿಮೀಯಾ ಮಾದರಿಯಲ್ಲಿ ಕಂಡಿತ್ತು. ಆದರೆ ಎಲ್ಲಾ ಪೊಲೀಸ್ ಅಧಿಕಾರಿಗಳ ಮುಂದೆ ನಡೆದ ಈ ಪಲಾಯನ ಘಟನೆ ಪೋಲೀಸ್ ಇಲಾಖೆಗೆ ಮುಜುಗರ ತಂದಿದೆ ಎಂದು ಸಾರ್ವಜನಿಕರ ಚರ್ಚಿಸುತ್ತಿದ್ದಾರೆ.ಎಸಿಬಿ ಬಲೆಗೆ ಬಿದ್ದ ಪಿಎಸ್ಐ ಸೋಮಶೇಖರ್ಕೊನೆಗೂ ಪಿಎಸ್ಐ ಹಿಡಿದು ತಂದ ಎಸಿಬಿಬೈಕ್ ನಲ್ಲಿ ಎಸ್ಕೇಪ್ ಆಗಿದ್ದ ಪಿಎಸ್ಐ ಸೋಮಶೇಖರ್ ಸಿ.ಎಸ್.ಪುರ ಠಾಣಾ ವ್ಯಾಪ್ತಿಯ ಜನ್ನೇನಹಳ್ಳಿ ಬಳಿಯ ತೋಟವೊಂದರಲ್ಲಿ ಪೊಲೀಸ್ ಜೀಪ್ ನೋಡಿ ಸೋಮಶೇಖರ್ ಅವರು ತೊಟ್ಟಿದ್ದ ಯೂನಿಫಾರಂ ಶರ್ಟ್ ಅನ್ನು ಕಿತ್ತೆಸೆದು ಓಡುತ್ತಿರುವಾಗ ಎಸಿಬಿ ಪೊಲೀಸರು ಹಿಡಿದು ಪೋಲಿಸ್ ಠಾಣೆಗೆ ಕರೆ ತಂದಿದ್ದಾರೆ.ಇದು ನಿಜಕ್ಕೂ ನಾಚಿಕೆಗೇಡಿನ ಘಟನೆಯಾಗಿದೆ. ನ್ಯಾಯ ಒದಗಿಸಬೇಕಾದವರು ಸಾರ್ವಜನಿಕರ ಮುಂದೆ ಬೆತ್ತಲಾದ ಘಟನೆ ಜರುಗಿದೆ ಕೂಡಲೇ ದಕ್ಷ,ಪ್ರಾಮಾಣಿಕ, ಜನಸ್ನೇಹಿ ಎಸ್.ಪಿ ಅವರು ಇಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತಿದೆ.
Be the first to comment