ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಕೋಳೂರ ಗ್ರಾಮ ಪಂಚಾಯತಿ ಗದ್ದುಗೆ ಬಿಜೆಪಿ ಪಾಲಾಗುತ್ತದೆಯೋ ಅಥವಾ ಕಾಂಗ್ರೆಸ್ ಪಾಲಾಗುತ್ತದೆಯೋ ಎಂದು ಕಾದು ನೋಡುತ್ತಿದ್ದ ಜನರಿಗೆ ಸಮಭಲ ಮತಗಳನ್ನು ಪಡೆದ ಎರಡೂ ಪಕ್ಷದ ಬೆಂಬಲಿತ ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅದೃಷ್ಠಲಕ್ಷ್ಮೀ ಒಲಿದಿದ್ದಾಳೆ.
ಹೌದು, ಕೋಳೂರ ಪಂಚಾಯತಿಯ ಒಟ್ಟು 20 ಸದಸ್ಯರನ್ನು ಹೊಂದಿದ್ದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಶಿವಮ್ಮ ಈಶ್ವರಪ್ಪ ಢವಳಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶಂಕ್ರಮ್ಮ ಶಾಂತಯ್ಯ ಒಡೆಯರ ನಾಮಪತ್ರ ಸಲ್ಲಿಸಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ಹಣಮಂತ ನರಸಪ್ಪ ಹುಗ್ಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಂಜುನಾಥ ಬಸನಗೌಡ ಪಾಟೀಲ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆ ಅಧಿಕಾರಿ ಜೆ.ಪಿ.ಶೆಟ್ಟಿ ಮತದಾನ ಪ್ರಕ್ರೀಯೆ ನಡೆಸಿದ್ದು ಎರಡೂ ಸ್ಥಾನಗಳಿಗೂ ಸಮಭಲ ಮತದಾನವಾಗಿದ್ದವು. ನಂತರ ಸರ್ವ ಸದಸ್ಯ ಒಪ್ಪಿಗೆ ಮೆರೆಗೆ ಲಾಟರಿ ಮೂಲಕ ಆಯ್ಕೆ ಪ್ರಕ್ರೀಯೆ ಆರಂಬಿಸಿದ ಚುನಾವಣಾಧಿಕಾರಿಗಳು ಪುಟ್ಟ ಮಗುವಿನಿಂದ ಚೀಟಿ ಎತ್ತಲು ಹೇಳಿದ್ದು ಅಧ್ಯಕ್ಷ ಸ್ಥಾನಕ್ಕೆ ಶಂಕ್ರಮ್ಮ ಒಡೆಯರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಪಾಟೀಲ ಅವರ ಹೆಸರೇ ಆಯ್ಕೆಯಾಗಿದ್ದು ಎರಡೂ ಸ್ಥಾನಗಳೂ ಕಾಂಗ್ರೆಸ್ ಮಡಿಲಿಗೆ ಒಲಿದಿದ್ದು ಅಚ್ಚರಿಯ ಫಲಿತಾಂಶವಾಯಿತು.
ವಿಜಯೋತ್ಸವ:
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಫಲಿತಾಂಶ ಹೊರಬಿಳುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯರೆಲ್ಲರೂ ರಾಣಿಚನ್ನಮ್ಮ ವೃತ್ತಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಕೊಟ್ಟೂರ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷವಾದ ಪೂಜೆ ಸಲ್ಲಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಅಲ್ಲದೇ ಚುನಾವಣೆ ಫಲಿತಾಂಶ ದೇವರು ಕೊಟ್ಟ ಫಲಿತಾಂಶವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಾಬಣ್ಣ ವಾಲಿಕಾರ, ಸಂಗಣ್ಣ ವಾಲಿಕಾರ, ಶರಣಬಸಪ್ಪ ಚಲವಾದಿ, ಗ್ರಾಪಂ ಸದಸ್ಯ ಪ್ರಶಾಂತ ತಾರನಾಳ, ಸುಮೀತ್ರಾ ಮೇಲ್ಮನಿ ಸೇರಿದಂತೆ ಇತರರಿದ್ದರು.
Be the first to comment