ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಕಾಳಗಿ ಗ್ರಾಮ ಪಂಚಾಯತಿಯಲ್ಲಿ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಸದಸ್ಯರಾದ ಹಣಮಗೌಡ ಬಸಪ್ಪ ಭೂತಲ ಹಾಗೂ ಉಪಾಧ್ಯಕ್ಷರಾಗಿ ಗೀತಾ ಅಶೋಕ ನಾಯಕ ಅವರು ಆಯ್ಕೆಯಾದರು.
ಒಟ್ಟು 13 ಜನ ಸದಸ್ಯರಿರುವ ಕಾಳಗಿ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಎರಡು ನಾಮಪತ್ರ ಸಲ್ಲಿಕೆಯಾಗಿದ್ದು ರಾಮಣ್ಣ ಹಣಮಂತ ನಾಶಿ ಅವರು 6 ಮತಗಳನ್ನು ಪಡಡೆದು ಪರಾಭಗೊಂಡು ಹಣಮಗೌಡ ಬಸಪ್ಪ ಭೂತಲ 7 ಮತಗಳನ್ನು ಪಡೆದು ಆಯ್ಕೆಯಾದರು. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಅನಸುಬಾಯಿ ಭೀಮಸಿಂಗ್ ಚವ್ಹಾಣ 6 ಮತಗಳನ್ನು ಪಡೆದು ಪರಾಭಗೊಂಡರೆ ಗೀತಾ ಅಶೋಕ ನಾಯಕ 7 ಮತಗಳನ್ನು ಪಡೆದು ಆಯ್ಕೆಯಾದರು.
ಈ ಸಮಯದಲ್ಲಿ ಕಾಂಗ್ರೇಸ್ ಮುಖಂಡ ಕಾಮರಾಜ ಬಿರಾದಾರ ಮಾತನಾಡಿ, ಕಾಳಗಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೇಸ್ ಬೆಂಬಲಿತ ಸದಸ್ಯ ಭೂತಲ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಗೀತಾ ನಾಯಕ ಅವರಿಗೆ ಅಧಿಕಾರ ಚುಕ್ಕಾಣಿ ನೀಡಿದ್ದು ಮುಂದಿನ ದಿನಗಳಲ್ಲಿ ಯಾವುದೇ ತಾತಮ್ಯವಿಲ್ಲದೇ ಪಂಚಾಯತಿ ವ್ಯಾಪ್ತಿಯ ಸರ್ವ ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಚುನಾವಣಾ ಅಧಿಕಾರಿಯಾಗಿ ಎಸ್.ಬಿ.ಬಿರಾದಾರ, ಸಹಾಯಕರಾಗಿ ಆರತಿ ಅಲಿಬಾದಿ, ವಸಂತ ನಾಯಕ ಕಾರ್ಯನಿರ್ವಹಿಸಿದರು. ಪಿಡಿಓ ಖೂಬಾಸಿಂಗ ಜಾಧವ ಇದ್ದರು.
ಈ ಸಮಯದಲ್ಲಿ ಕಾಂಗ್ರಸ್ ಮುಖಂಡರಾದ ಪುರಸಭೆ ಸದಸ್ಯ ಮೆಹಬೂಬ ಗೋಳಸಂಗಿ, ಕಾಳಗಿ ಗ್ರಾಪಂ ಮಾಜಿ ಅಧ್ಯಕ್ಷ ಜಾವೀದ ಇನಾಮದಾರ, ಹುಸೇನ ಮುಲ್ಲಾ, ಕಮಲಪ್ಪಗೌಡ ಹುಂಡಿ, ಚಂದ್ರಕಾಂತ ಅಂಬಿಗೇರ, ಗೋಪಾಲ ಚವ್ಹಾಣ, ಮಾಬುಸಾಬ ಮುಲ್ಲಾ, ಮೋತಿಲಾಲ ಮ್ಯಾಗೇರಿ, ಮುನ್ನಾ ಮುಲ್ಲಾ, ಕರಿಬಸಯ್ಯ ಹಿರೇಮಠ, ಮೌಲಾಸಾಬ ನಾಯ್ಕೋಡಿ ಮತ್ತಿತರರು ಇದ್ದರು.
Be the first to comment