ಜಿಲ್ಲಾ ಸುದ್ದಿಗಳು
ಮಂಗಳೂರು:
ಮಂಗಳೂರಿನಲ್ಲಿ ಹಾಡಹಗಲೇ ಸುಲಿಗೆಗೆ ಯತ್ನ ನಡೆದಿದ್ದು, ಕಾರಿನಲ್ಲಿ ಬಂದ ಕಳ್ಳ ಪಾದಚಾರಿ ಮಹಿಳೆಯ ಬ್ಯಾಗ್ ಸುಲಿಗೆಗೆ ಯತ್ನಿಸಿ ಆತಂಕಕ್ಕೆ ಕಾರಣವಾಗಿದ್ದ. ಇದೀಗ ಈ ಪ್ರಕರಣವು ಅಣಕು ಪ್ರದರ್ಶನವಾಗಿದ್ದು, ಆತಂಕಪಡಬೇಕಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಬೆಂದೂರ್ ವೆಲ್ ಸೈಂಟ್ ಆ್ಯಗ್ನೇಸ್ ಕಾಲೇಜು ಸಮೀಪ ನಡೆದ ಮಹಿಳೆಯ ದರೋಡೆ ಪ್ರಕರಣವು ಅಣಕು ಕಾರ್ಯಾಚರಣೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಎಷ್ಟು ಎಚ್ಚರಿಕೆಯಿಂದ ಇದ್ದಾರೆ ಎಂದು ಪರೀಕ್ಷೆ ಮಾಡಲು ಈ ಅಣಕು ಕಾರ್ಯಾಚರಣೆ ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೂ ಯಾವುದೇ ಮಾಹಿತಿ ಇರಲಿಲ್ಲ. ಇಡೀ ಪ್ರಕರಣದಲ್ಲಿ ಮಹಿಳೆಯು ತಕ್ಷಣ ಪ್ರತಿ ದಾಳಿಯನ್ನೊಡ್ಡಿದ್ದಾರೆ. ಅಲ್ಲದೆ ಸಾರ್ವಜನಿಕರು ತಕ್ಷಣ ಸ್ಪಂದಿಸಿದ್ದು, ಘಟನೆ ನಡೆದ 3-4 ನಿಮಿಷದೊಳಗೆ 112ಗೆ ಕರೆ ಮಾಡಿ ತಿಳಿಸಿದ್ದಾರೆ.
ಮಂಗಳೂರು ದರೋಡೆ ಪ್ರಕರಣ ಕುರಿತು ಪೊಲೀಸ್ ಕಮಿಷನರ್ ಸ್ಪಷ್ಟನೆ:
ಪೊಲೀಸ್ ಇಲಾಖೆ ಉತ್ತಮವಾಗಿ ಸ್ಪಂದಿಸಿದ್ದು, 5-6 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯರ ಸುರಕ್ಷತೆ ನಮ್ಮ ಕರ್ತವ್ಯ ಮತ್ತು ಆದ್ಯತೆಯಾಗಿದ್ದು ಅದಕ್ಕಾಗಿ ಈ ಅಣಕು ಕಾರ್ಯಾಚರಣೆ ಮಾಡಲಾಗಿದೆ ಎಂದಿದ್ದಾರೆ.
Be the first to comment