ಜಿಲ್ಲಾ ಸುದ್ದಿಗಳು
ಹೊನ್ನಾವರ
ಬಂದರು ನಿರ್ಮಾಣದಿಂದ ಯಾರಿಗೂ ತೊಂದರೆಯಿಲ್ಲ ಎಂದು ಹೊನ್ನಾವರ ಬಂದರಿನ ಸಿಇಒ ಕ್ಯಾಪ್ಟನ್ ಸೂರ್ಯಪ್ರಕಾಶ ಗುಟ್ಟಾ ಹೇಳಿದ್ದಾರೆ. ಮೀನುಗಾರರ ಪ್ರತಿಭಟನೆ ನಡೆಯುತ್ತಿದೆ. ಬಂದರುನಿರ್ಮಾಣ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ, ವಾಸ್ತವ ಏನು ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಯಿಸಿದ್ದಾರೆ.
ಮೀನುಗಾರಿಕಾ ಬಂದರು ಹಾಗೂ ಮೀನುಗಾರರವಸತಿ ಪ್ರದೇಶಕ್ಕೆ ಗಡಿ ಹಾಕಿಕೊಂಡು ಹೊಸದಾಗಿ ನಿರ್ಮಾಣವಾದ ಭೂ ಭಾಗವನ್ನು ನಾವು ಆಯ್ಕೆಮಾಡಿಕೊಂಡಿದ್ದೇವೆ. ಮೀನುಗಾರಿಕೆ ನಡೆಸುವ ಬಂದರುಬೇರೆ, ವಾಣಿಜ್ಯ ಬಂದರಿಗೆ ಆಯ್ಕೆಯಾದ ಸ್ಥಳ ಬೇರೆ. ಇದಲ್ಲದೆ 200ಕೋಟಿ ರೂ. ವೆಚ್ಚದಲ್ಲಿ ಸಾಗರಮಾಲಾ ಯೋಜನೆಯಡಿ ಬಂದರಿಗೆ ಸಮುದ್ರಕ್ಕೆ ಹೊಂದಿಕೊಂಡು ಚತುಷ್ಪಥ ನಿರ್ಮಾಣವಾಗುವುದರಿಂದ ಇದು ಬಂದರು ಸಹಿತ ಮೀನುಗಾರಿಕಾ ಪ್ರದೇಶಕ್ಕೆ ಚಂಡಮಾರುತದಿಂದ ರಕ್ಷಣೆ ನೀಡಲಿದೆ. ಹೆಚ್ಚಿನ ಭೂಮಿ ಬೇಕಾದರೆಸಮುದ್ರದಲ್ಲಿ ವಿಸ್ತರಿಸುತ್ತೇವೆ. ಮೀನುಗಾರರಿಗೆ ತೊಂದರೆ ಮಾಡಲು ನಾವು ಬಂದಿಲ್ಲ ಎಂದು ಅವರು ಹೇಳಿದರು.
ಇಲ್ಲಿನ ಬಂದರು ನಿರ್ಮಾಣದಿಂದ ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಧಾರವಾಡ,ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸಹಿತ 8ಜಿಲ್ಲೆಗಳ ಅಭಿವೃದ್ಧಿಗೆ ಬಲ ಬರಲಿದ್ದು ಈ ಜಿಲ್ಲೆಗಳಿಗೆ ಸಂಬಂಧಿಸಿದ ಸಾಮಗ್ರಿಗಳ ನಿರ್ಯಾತ, ಅಗತ್ಯವಸ್ತುಗಳ ಆಯಾತಕ್ಕೆ ಕಾರಣವಾಗಲಿದ್ದು ಸಾವಿರಾರುಉದ್ಯೋಗ ಸೃಷ್ಟಿಯಾಗಲಿದೆ.
Be the first to comment