ಸಾರಾಯಿ ಅಡ್ಡೆ ಮೇಲೆ ಪೊಲೀಸ್ ದಾಳಿ; 10ಲೀ ಕಳ್ಳಭಟ್ಟಿ ವಶಕ್ಕೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಶಿರಸಿ: ಮನೆಯ ಹತ್ತಿರವೇ ಕಾನೂನು ಬಾಹಿರವಾಗಿ ಕಳ್ಳಭಟ್ಟಿ ಸಾರಾಯ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ತಾಲೂಕಿನ ಸದಾಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

ವಿನಾಯಕ್ ನಾಗೇಶ್ ದೇಶಭಂಡಾರಿ (45) ಬಂಧಿತ ಆರೋಪಿಯಾಗಿದ್ದು, ಈತನ ಮನೆಯ ಹಿಂದುಗಡೆಯ ದನದ ಕೊಟ್ಟಿಗೆಯ ಬದಿಯಲ್ಲಿ ಮಾರಾಟ ಮಾಡಲು ಕಾನೂನು ಬಾಹಿರವಾಗಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದವನ ಮನೆಯ ಮೇಳೆ ದಾಳಿ ಮಾಡಿದ ಪೆÇಲೀಸರು ಆರೋಪಿತನಿಂದ 10 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಕಳ್ಳಭಟ್ಟಿ ತಯಾರಿಸಲು ಉಪಯೋಗಿಸಿದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರವಿ ನಾಯ್ಕ ಡಿ.ಎಸ್.ಪ್ರಿರಾಮಚಂದ್ರ ನಾಯಕ ಸಿ.ಪಿ.ಐ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಪಿ.ಎಸ್.ಐ ಈರಯ್ಯ ಡಿ.ಎನ್,ಪೆÇ್ರ ಪಿ.ಎಸ್.ಐ ಕೌಶಿಕ್ ಬಿ.ಸಿಎ.ಎಸ್.ಐ ರಮೇಶ ನಾಯಕ ಸಿಬ್ಬಂದಿಗಳಾದ ಬಸವರಾಜ ಮ್ಯಾಗೇರಿ,ಹನುಮಂತ ಬಿ,ಚೇತನಕುಮಾರಸಂಗಪ್ಪ ಹರಿಜನ,ಜಿಮ್ಮು ಶಿಂದೆ,ಸುನೀಲ ಹಡಲಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಈ ಬಗ್ಗೆ ಶಿರಸಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*