ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿ ವರ್ಷದಂತೆ ಈ ವರ್ಷವೂ ಸಹ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಿ ಎಂದು ದೇವನಹಳ್ಳಿ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ತಿಳಿಸಿದರು.
ಮಾದ್ಯಮದವರೊಂದಿಗೆ ಮಾತನಾಡಿದ ಅವರು ದೀಪದಿಂದ ದೀಪವನ್ನು ಹಚ್ಚುವಂತಾಗಬೇಕು. ದೀಪಾವಳಿ ಹಬ್ಬದಲ್ಲಿ ಮೈಮರೆಯಬಾರದು. ಪ್ರತಿ ಮಕ್ಕಳ ಮೇಲೆ ನಿಗಾ ವಹಿಸಬೇಕು. ಪಟಾಕಿ ಸಿಡಿಸುವುದು ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು ಆದರೆ ಈ ಹಿಂದೆ ನಡೆದ ಹಲವು ಘಟನೆಗಳು ಮರುಕಳಿಸದಂತೆ ಪ್ರತಿ ವಾರ್ಡಿನ ಜನರು ಸರಳ ಮತ್ತು ಅರ್ಥಪೂರ್ಣ ದೀಪಾವಳಿಯನ್ನು ಆಚರಿಸಬೇಕು. ಕೋವಿಡ್‌ನಿಂದಾಗಿ ಹಲವಾರು ಕುಟುಂಬಗಳ ಉಸ್ತುವಾರಿ ವಹಿಸಿಕೊಂಡಿದ್ದ ಮನೆಯಜಮಾನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಎಷ್ಟು ಸರಳವಾಗಿ ದೀಪಾವಳಿಯನ್ನು ಆಚರಿಸುತ್ತೇವೆಯೋ ಅಷ್ಟೇ ನಮ್ಮ ಕುಟುಂಬದಲ್ಲಿ ಸುಖ-ಸಂತೋಷ ಇರುತ್ತದೆ. ಎಚ್ಚರಿಕೆಯಿಂದ ಈ ಬಾರಿ ದೀಪಾವಳಿಯನ್ನು ಸಾಂಪ್ರಾದಾಯಿಕವಾಗಿ ಆಚರಿಸುವಂತಾಗಬೇಕು. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಎಂದು ಹೇಳಿದರು.
Be the first to comment