ಜಿಲ್ಲಾ ಸುದ್ದಿಗಳು
”ಏಕೀಕರಣ” ಚಳುವಳಿ 19ನೆಯ ಶತಮಾನಡ ಎರಡನೇ ಭಾಗದಲ್ಲಿ ಪ್ರಾರಂಭವಾಗಿ 1956 ರಾಜ್ಯ ಪುನಸ್ಸಂಘಟನೆ ಕಾಯಿದೆ ಯೊಂದಿಗೆ ಮುಕ್ತಾಯವಾಯಿತು, ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ನಾಮಕರಣ ಮಾಡಲಾಯಿತು.ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳನ್ನು ಒಳಗೊಂಡಿತ್ತು. ಅಂದಿನಿಂದ ನವೆಂಬರ್ 1 ನ್ನು ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರನಲ್ಲಿ ಇಡೀ ಊರಿಗೆ ಊರೆ ಸೇರಿ ಬೆಳಿಗ್ಗೆ 10 ಗಂಟೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಇವರ ಉದ್ಘಾಟನೆಯೊಂದಿಗೆ 66 ನೇ ರಾಜ್ಯೋತ್ಸವದ ಕನ್ನಡದ ತೇರನ್ನು ಭರದಿಂದ ಎಳೆದರು.ಕುಂಬಮೇಳ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಹಿರಿಯರ ಜೊತೆಗೂಡಿ ಮೆರವಣಿಗೆ ಹೊರಟಿತು.
ಸಂಜೆ 6 ಗಂಟೆಗೆ ಗ್ರಾಮದ ರಂಗ ಮಂದಿರದಲ್ಲಿ “ಸಿರಿಗನ್ನಡ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ”ಯು ಪ್ರತಿವರ್ಷದಂತೆ ಈ ಬಾರಿಯೂ ಅದ್ದುರಿಯಾಗಿ ಉಪನ್ಯಾಸರಿಗೆ, ಸಾಧಕರಿಗೆ, ಕರೋನಾ ವಾರಿಯರ್ಸಗೆ,ಸಮಾಜ ಸೇವಕರಿಗೆ,ಪ್ರತಿಭಾನ್ವಿತರಿಗೆ,ನಿವೃತ್ತರಿಗೆ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಆತ್ಮೀಯ ಸನ್ಮಾನ ನೀಡಿ ಗೌರವಿಸಿದರು.
ಉದ್ಘಾಟನಾ ಪರ ಭಾಷಣ ಮಾಡಿದ ಎಸ್.ಜಿ.ನಂಜಯ್ಯನಮಠ ಜಿಲ್ಲಾಧ್ಯಕ್ಷರು ಕಾಂಗ್ರೇಸ್ ಪಕ್ಷ ಬಾಗಲಕೋಟೆ ಕನ್ನಡ ಭಾಷೆ,ನಾಡು,ನುಡಿ ಉಳಿಸೋಣ,ಪರಕೀಯರ ಭಾಷೆ ವ್ಯಾಮೋಹ ಬೇಡ ಎನ್ನುವುದರ ಜೊತೆಗೆ ರಾಜ್ಯದ ಇತಿಹಾಸವನ್ನು ವರ್ಣಿಸಿ ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸೋಣ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಜಿ.ಜಿ.ಹಿರೇಮಠ ಪ್ರಾಚಾರ್ಯರು ಸ.ಪ್ರ.ದ.ಕಾಲೇಜು ಬದಾಮಿ ಇವರು ರಾಜ್ಯದ ಅಳಿವು ಉಳಿವು ನಮ್ಮೆಲ್ಲರ ಕೈಯಲ್ಲಿದ,ದೇಶದಲ್ಲಿ ಅತಿ ಹೆಚ್ವು ಆಯ್.ಎ.ಎಸ್ ಪರೀಕ್ಷೆ ಪಾಸಾಗಲು ನಮ್ಮ ಕನ್ನಡಿಗರು ಪ್ರಯತ್ನಿಸಬೇಕು ಎಂದರು.ಇಂದು ನಾವು ಆಂದ್ರ,ತಮಿಳು,ಕೇರಳ ಹಾಗೂ ಮರಾಠಿಗರ ಪ್ರಭಾವಕ್ಕೆ ಒಳಗಾಗಿದ್ದು ನಮ್ಮತನವನ್ನ ಉಳಿಸಿಕೊಳ್ಳಬೇಕಾಗಿದೆ ಎಂದರು.
ಸಿದ್ದನಕೊಳ್ಳದ ಶ್ರೀ ಸಿದ್ದಪ್ಪಜ್ಜನ ಕೃಪಾದೃಷ್ಠಿಯ ಜೊತೆಗೆ ನಿರಂತರ ದಾಸೋಹ ಮಠದ ಪೂಜ್ಯಶ್ರೀ ಡಾ.ಶಿವಕುಮಾರ ಸ್ವಾಮಿಗಳು ಸಂಸ್ಕಾರವಂತರಿಗೆ ಶಿಕ್ಷಣ ಬಹುಬೇಗ ಸಿಗುತ್ತದೆ.ಮನೆಯೆ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂದು ತಮ್ಮ ಹಾಸ್ಯನುಡಿಗಳಲ್ಲಿ ಆಶಿರ್ವಚನ ನೀಡಿದರು.ಕನ್ನಡ ಕಲರವ ಅಕ್ಟೋಬರ್ 31ರಿಂದ ಆರಂಭವಾಗಿ ನವೆಂಬರ್ 2ಕ್ಕೆ ಮುಗಿದು ಹೋಗದಿರಲಿ, ಅದರ ಕಂಪು ವರ್ಷಪೂರ್ತಿ ಹರಡಿ ಕನ್ನಡ ನಿತ್ಯೋತ್ಸವವಾಗಲಿ ಎಂದು ಸಿದ್ದನಕೊಳ್ಳದ ಶ್ರೀಗಳಾದ ಡಾ.ಶಿವಕುಮಾರ ಶ್ರೀಗಳು ಹೇಳಿದರು.ಕೆಲೂರಿನ ವರಪುತ್ರ, ನಾಡಿನ ವೈಚಾರಿಕ ಪ್ರಜ್ಞೆಯ ಪ್ರತೀಕದಂತಿರುವ ಶಿವಗಂಗೆ ಮೇಲಣಗವಿ ಮಹಾಸಂಸ್ಥಾನ ಮಠದ ಅಧಿಪತಿಗಳೂ, ಮುಂಬರುವ ದಿನಮಾನಗಳಲ್ಲಿ ಪಂಚಪೀಠದ ರಂಭಾಪುರಿ ಮಹಾಪೀಠಕ್ಕೆ ಯೋಗ್ಯ ಉತ್ತರಾಧಿಕಾರಿಯಾಗುವ ಎಲ್ಲ ಅರ್ಹತೆ ಪಡೆದ ಪರಮಪೂಜ್ಯ ಶ್ರೀ ಷ.ಬ್ರ.ಡಾ.ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಅತ್ಯಂತ ಪುರಾತನ ಇತಿಹಾಸವಿರುವ ಕನ್ನಡ ಸಾಹಿತ್ಯ ಸಂಸ್ಕøತಿ ವಿಶ್ವವ್ಯಾಪಿ ವಿಸ್ತಾರ ಹೊಂದಿದೆ. ಕನ್ನಡದ ಹೆಗ್ಗಳಿಕೆಗಳನ್ನು ಮೆಲುಕು ಹಾಕುತ್ತ, ಭಾಷೆ ಬಳಸಿ ಸಂಸ್ಕøತಿ ಪಾಲಿಸಿ ಪರಂಪರೆ ಉಳಿಸುವ ಕಾರ್ಯ ಯುವಕರಿಂದ ಆಗಬೇಕು ಎಂದರು.ಗ್ರಾಮದ ಸ್ವಚ್ಚತೆ ಕುರಿತು ಮಾತನಾಡಿ ಭಕ್ತಿಯಿಂದ ಜನ ಊರಿಗೆ ಬರಬೇಕು ವಿನಃ ಮೂಗು ಮುಚ್ಚಿಕೊಂಡು ಜನ ಊರಿಗೆ ಬರಬಾರದು.ವಚನಗೀತೆ,ಜನಪದ ಗೀತೆ,ಹಾಡುವುದರ ಮೂಲಕ ಮುಂದಿನ ವರ್ಷದ ವೇದಿಕೆ ನಿರ್ಮಾಣವಾಗಬೇಕು ಎಂದರು.
ಅನೇಕ ವರ್ಷಗಳ ಕಾಲ ಬಸ್ಸುಗಳೇ ಇರದೆ, ಒಂದು ದ್ವೀಪದಂತೆ ಇದ್ದ ಸಮೃದ್ಧ ಕೆಲೂರ ಗ್ರಾಮ ಅನೇಕ ವಿಶೇಷತೆಯನ್ನು ಒಳಗೊಂಡಿದೆ. ಮಹಾನ್ ವಾಕ್ ಸಿದ್ದಿಪುರುಷರು, ಮಹಾಮಹಿಮರು, ಜೀವಂತ ಸಮಾಧಿಸ್ತರಾದ ಇವರು ನಡೆದರೆ ಒಂಟಿಪಾದ ಮೂಡುತ್ತಿದ್ದವು.ಇಂತಹ ಅಪರೂಪದ ಮಹಾತಪಸ್ವಿ ಒಂಟಿಪಾದ ಶ್ರೀ ಗುರು ಮಂಟೇ ಬಸವಣ್ಣನವರ ಕರ್ತೃಗದ್ದುಗೆ ಇಲ್ಲಿದೆ.ಇಂಥಹ ಗ್ರಾಮದಲ್ಲಿ ಇಂದು ಸರ್ವ ಜನಾಂಗದ ಶಾಂತಿಯ ತೋಟವೆನಿಸಿದ ಈ ಗ್ರಾಮದಲ್ಲಿ ಸಕಲ ಕಲಾವಿದರು ರಾಜ್ಯಮಟ್ಟದ ಪ್ರಶಸ್ತಿ ಪಡೆದ, ಎಲ್ಲ ಸರಕಾರಿ ಇಲಾಖೆಗಳಲ್ಲಿ ಎಲ್ಲ ಸ್ಥರದ ಮತ್ತು ಉನ್ನತ ಹುದ್ದೆಯನ್ನು ಅಲಂಕರಿಸಿದ ನೌಕರರು ಇದ್ದಾರೆ.ಸದಾ ಒಂದಿಲ್ಲೊಂದು ವಿಷಯಗಳಲ್ಲಿ ಗಮನಸೆಳೆಯುತ್ತಿರುವ ಕೆಲೂರು ಹಲವರ ಬಾಯಲ್ಲಿ ಯಾವತ್ತೂ ಇರತಕದಕ್ಕದ್ದಾಗಿದೆ. ಯುವಕರು ಅತ್ಯಂತ ಒಗ್ಗಟ್ಟು ಮತ್ತು ಹುರುಪಿನಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ.ಎಂದು ಸಂಗಣ್ಣ ಗದ್ದಿ ಮುಖ್ಯೋಪಾಧ್ಯಾಯರು ಎಸ್.ಆರ್.ಕಂಠಿ ಬಾಲಕೀಯರ ಪ್ರೌಢಶಾಲೆ ಇಲಕಲ್ಲ ಇವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಮೇಘರಾಜೇಂದ್ರ ಮಹಾಪುರುಷರು ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ವಹಿಸಿದ್ದರು.ಮಲ್ಲು ಹುನಗುಂಡಿ ನಿರೂಪಿಸಿದರು.ಬಾಬುಸಾಬ ಸಿಮಿಕೇರಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಅಪ್ಪಾಸಾಹೇಬ ನಾಡಗೌಡರ, ವಜಿರಪ್ಪ ಪೂಜಾರ, ಮೈಲಾರಪ್ಪ ಕೊಪ್ಪದ,ಸಂಗಪ್ಪ ಹೂಗಾರ, ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ,ಮುತ್ತಣ್ಣ ನಾಡಗೌಡರ,ಸಂಗಣ್ಣ ನಾಡಗೌಡರ,ಶೇಖರಯ್ಯ ಮೇಟಿಮಠ,ಮಹಾಂತಪ್ಪ ಕುಂಚಗನೂರ,ಈರಣ್ಣ ಬೂದಿಹಾಳ,ರಾಜೇಸಾಬ ನದಾಫ,ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಕೊಪ್ಪದ, ಗಿರಿಜಮ್ಮ ಅಧಿಕಾರಿ,ನೀಲಮ್ಮ ಕಬ್ಬರಗಿ,ರೇಣುಕಾ ಕಮತರ,ರತ್ನಾ ಮಾದರ,ಉಮೇಶ ಹೂಗಾರ, ಹನಮಂತ ವಡ್ಡರ,ಭೀಮವ್ವ ತೋಟಗೇರ, ಬಿಬಿಜಾನ ಸಿಮಿಕೇರಿ, ಹಾಗೂ ಇತರೆ ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು, ಗ್ರಾಮದ ಹಿರಿಯರು ಮತ್ತು ಯುವಕರು, ಸಿರಿಗನ್ನಡ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
Be the first to comment