ಜಿಲ್ಲಾ ಸುದ್ದಿಗಳು
ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ನ.3 ಬುಧವಾರ ಸ್ವ ಕ್ಷೇತ್ರ ಬೀಳಗಿ ಯಲ್ಲಿ ಕ್ಷೇತ್ರದ ಸಾರ್ವಜನಿಕರು ಸನ್ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ ಆರ್ ನಿರಾಣಿ ಅವರನ್ನು ಭೇಟಿಯಾದರು. ಸಚಿವ ಮುರುಗೇಶ ನಿರಾಣಿಯವರು ದೀಪಾವಳಿ ಹಾರ್ದಿಕ ಹಬ್ಬದ ಶುಭಾಶಯಗಳನ್ನು ಕ್ಷೇತ್ರದ ಜನತೆ ತಿಳಿಸಿ, ಕ್ಷೇತ್ರದ ವಿವಿಧ ಸ್ಥಳಗಳಿಂದ ಆಗಮಿಸಿದ ಜನರ ಸಮಸ್ಯೆಗಳನ್ನು, ಕುಂದು ಕೊರತೆಗಳ ಅಹಲವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸಲು ಭರವಸೆ ನೀಡಿದರು.
ಬಾಗಲಕೋಟೆ : ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳು ಬೀಳಗಿ ಮತಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿದ್ದು, 1 ಲಕ್ಷ ಎಕರೆ ಜಮೀನಿಗೆ ನೀರಾವರಿ ಯೋಜನೆ ಕಾರ್ಯಗತ ಗೊಳಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಬೀಳಗಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು ಬರುವ 20 ತಿಂಗಳ ಅವಧಿಯಲ್ಲಿ ನೀರಾವರಿ ಯೋಜನೆ ಸಂಪೂರ್ಣ ಯಶಸ್ವಿಗೊಳಿಸಲಾಗುತ್ತಿದೆ. ಇದರ ಜತೆಗೆ ಬೀಳಗಿ ಮತಕ್ಷೇತ್ರದ ಬರುವ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸವಾಗಲಿದೆ. ಅಲ್ಲದೇ 280 ಕೋಟಿ ರೂ.ಗಳ ವೆಚ್ಚದಲ್ಲಿ 11 ಕೆಇಬಿ ಕಚೇರಿಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಕೆ.ಬಿ.ಜೆ.ಎನ್.ಎಲ್ ಮತ್ತು ಕೆ.ಎನ್.ಎನ್.ಎಲ್ ನ 1 ಲಕ್ಷಕ್ಕೂ ಹೆಚ್ಚು ಲಿಪ್ಟ ಇರಿಗೇಷನ್ ಮಾಡುವುದು ಮತ್ತು ಕೆರೆ ತುಂಬಿಸುವ ಯೋಜನೆ ಇದ್ದು, ಇದಕ್ಕೆ ಸಂಬಂಧಿಸಿದ ಆಲಮಟ್ಟಿಗೆ ಹೋಗಿ ಬರುವ ಸಮಯ ಉಳಿತಾಯ ಮಾಡುವ ಸಲುವಾಗಿ ಬೀಳಗಿ ಇಲ್ಲವೇ ಗದ್ದನಕೇರಿ ಎರಡರಲ್ಲಿ ಒಂದು ಕಡೆ ಕಚೇರಿ ಆರಂಭಿಸಲಾಗುವುದು. ಅಭಿವೃದ್ಧಿ ಕಾರ್ಯಕ್ರಗಳ ಅನುಕೂಲಕ್ಕಾಗಿ ಸಮಯ ಉಳಿತಾಯ ಜತೆಗೆ ಕಾರ್ಯದಕ್ಷತೆ ಹೆಚ್ಚಿಸಲು ಕಚೇರಿ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.
Be the first to comment