ಆರೋಗ್ಯವೇ ಮನುಷ್ಯನಿಗೆ ನಿಜವಾದ ಆಸ್ತಿ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪ್ರತಿ ಜನರು ಆರೋಗ್ಯವಂತರಾಗಿದ್ದರೆ ಅದುವೇ ನಿಜವಾದ ಆಸ್ತಿಯಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಅಣ್ಣೇಶ್ವರ ಗ್ರಾಪಂ ಸದಸ್ಯ ಎ.ಚಂದ್ರಶೇಖರ್ ತಿಳಿಸಿದರು.

CHETAN KENDULI

 

ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಸರಕಾರಿ ಶಾಲೆಯಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯ ದಿನವಿಡೀ ಒತ್ತಡದ ಜೀವನ ಸಾಗಿಸುತ್ತಾನೆ. ಆರೋಗ್ಯದ ಕಡೆ ಗಮನವೇ ಹರಿಸಲು ಸಮಯ ಇರುವುದಿಲ್ಲ. ಇಂತಹದ್ದನ್ನು ಪ್ರತಿಯೊಬ್ಬರು ಗಮನಿಸಬೇಕು. ನಮ್ಮ ಆರೋಗ್ಯ ಚೆನ್ನಾಗಿದ್ದರೆ, ಕುಟುಂಬ ಚೆನ್ನಾಗಿರುತ್ತದೆ ಎಂದು ಭಾವಿಸಿ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದು ಇವತ್ತಿನ ಕಾಲದಲ್ಲಿ ತೀರ ಅನಿವಾರ್ಯವಾಗಿದೆ. ಯಾವ ಸಮಯದಲ್ಲಿ ಏನಾದರೂ ಆಗಬಹುದೆಂಬಂತೆ ಪರಿಸ್ಥಿತಿ ಇದೆ. ಹೀಗಿರುವಾಗ ಪ್ರತಿಯೊಬ್ಬರು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ನನ್ನ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ರಕ್ತದಾನ ಶಿಬಿರದಲ್ಲಿ ೫೦ಯೂನಿಟ್‌ನಷ್ಟು ರಕ್ತದಾನ ಸಂಗ್ರಹಿಸಲಾಗಿದೆ. ನೇತ್ರ ತಪಾಸಣೆಯ ಮೂಲಕ ೫೦ ಜನರಿಗೆ ಉಚಿತ ಕನ್ನಡಕಗಳನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಸಹ ನಡೆಸಲಾಗುತ್ತಿದೆ. ಇದಕ್ಕೆ ಸಹಕಾರ ನೀಡಿದ ಯಲಹಂಕ ಬ್ಲಾಕ್ ಬ್ಯಾಂಕ್ ಮತ್ತು ದೇವನಹಳ್ಳಿಯ ನ್ಯೂ ಮಾನಸ ಆಸ್ಪತ್ರೆಗೆ ಅಭಾರಿಯಾಗಿರುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಅಣ್ಣೇಶ್ವರ ಗ್ರಾಪಂ ಸದಸ್ಯ ಎ.ಚಂದ್ರಶೇಖರ್ ಅವರಿಗೆ ಸಾಮೂಹಿಕವಾಗಿ ಅಭಿನಂದಿಸಲಾಯಿತು. ಈ ವೇಳೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಣ್ಣೇಶ್ವರ ಗ್ರಾಪಂ ಸದಸ್ಯ ಮುನಿರಾಜು(ದಿಲ್‌ರಾಜ್), ನ್ಯೂ ಮಾನಸ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕ ಸೋಮಶೇಖರ್, ಸಿಬ್ಬಂದಿ, ಯಲಹಂಕ ರಕ್ತನಿಧಿಯ ಸಿಬ್ಬಂದಿವರ್ಗ, ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*