ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಡೆಡ್ಲಿ ಕೊರೋನಾ ರಾಜ್ಯಾದ್ಯಂತ ವ್ಯಾಪಿಸುತ್ತಿರುವುದರಿಂದ ಕರ್ನಾಟಕದಲ್ಲಿ ನಾಳೆಯಿಂದ ಸ್ಟ್ರೀಕ್ಟ ರೂಲ್ಸ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಲೇಟಾದ್ರೂ ಮಹತ್ವದ ನಿರ್ಧಾರ ಕೈಗೊಂಡಿದೆ.ಜನತಾ ಕರ್ಫ್ಯೂವನ್ನು ಜನರು ಸರಿಯಾಗಿ ಪಾಲಿಸುತ್ತಿಲ್ಲ, ಕೊಡುವ ಎಚ್ಚರಿಕೆಗೂ ಜನರು ಸ್ಪಂದಿಸುತ್ತಿಲ್ಲ. ಹಾಗಾಗಿ ಲಾಕ್ ಡೌನ್ ಅನಿವಾರ್ಯ.
ಒಂದು ವೇಳೆ ಅನಗತ್ಯವಾಗಿ ಹೊರಗಡೆ ತಿರುಗಾಡಿದ್ರೆ ಕೇಸ್ ದಾಖಲಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಖಡಕ್ ಸೂಚನೆ ನೀಡಿದ್ದಾರೆ. ಯಾಕಂದ್ರೆ ಕೊರೋನಾ ವೈರಸ್ ಬಹಳಷ್ಟು ಡೇಂಜರ್ ಆಗಿದ್ದು, ಅದು ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರದಿರಲಿ ಎನ್ನುವ ಕಾರಣ ಈ ರೀತಿ ಕ್ರಮಕೈಗೊಳ್ಳುವುದು ಅತ್ಯಗತ್ಯವಾಗಿದೆ.
ದಿನಸಿ,ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಯಾವುದೇ ಕಾರಣಕ್ಕೂ ವಾಹನಗಳನ್ನ ಬಳಸುವಂತಿಲ್ಲ. ಒಂದು ವೇಳೆ ವಾಹನಗಳು ರಸ್ತೆಗಿಳಿದರೆ ಅವುಗಳನ್ನು ಸೀಜ್ ಮಾಡಲಾಗುತ್ತದೆ.ಅಗತ್ಯ ವಸ್ತುಗಳ ಖರೀದಿಯನ್ನು ತಮ್ಮ ತಮ್ಮ ಏರಿಯಾದ ವ್ಯಾಪ್ತಿಯಲ್ಲಿ ಮಾತ್ರ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
Be the first to comment