ಕೋವಿಡ್ ಸೊಂಕಿತರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ದಿನಸಿ ಕಿಟ್ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:(ಕೆಲೂರ)

ಕೋವಿಡ್–19 ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೇ ಇದ್ದು, ಸೋಂಕಿತರಲ್ಲಿ ಅನೇಕರು ಆಮ್ಲಜನಕ ಕೊರತೆಯಿಂದ ನರಳಾಡುತ್ತಿದ್ದಾರೆ. ಎಷ್ಟೋ ಜನರಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್‌ ಸಿಗದೆ ಪ್ರಾಣ ಬಿಡುತ್ತಿದ್ದಾರೆ.ಕೆಲೂರ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದ್ದು ಇವರಿರ್ವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.ಸೊಂಕಿತರಿಗೆ 14 ದಿನಗಳವರೆಗೆ ಬೇಕಾಗುವ ದಿನಸಿ ಕಿಟ್‌ಗಳನ್ನು ಕೆಲೂರ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ರವಿವಾರ ವಿತರಿಸಿದರು.

ದಿನಸಿ ಕಿಟ್ ನಲ್ಲಿ 14 ದಿನಕ್ಕೆ ಬೇಕಾಗುವಷ್ಟು ಅಕ್ಕಿ,ಸಕ್ಕರೆ,ಚಹಾಪುಡಿ,ರವಾ,ಅವಲಕ್ಕಿ, ಬೇಳೆ, ಎಣ್ಣೆ,ಕೊಬ್ಬರಿ ಎಣ್ಣೆ,ಸಾಬೂನು,ಪೇಸ್ಟ ಸೇರಿದಂತೆ ಕೆಲವು ಸಾಂಬಾರು ಪದಾರ್ಥಗಳನ್ನು ಕೊಡಲಾಯಿತು.ಬೆಂಗಳೂರಿನಿಂದ ಬಂದವರನ್ನು ಗುರುತಿಸಿ ಅವರಕೈಗೆ ಮುದ್ರೆ ಹಾಕಿ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡಲು ಕಂದಾಯ ಇಲಾಖೆಯವರು ತಿಳಿಸಿದರು.

‘ಕೊರೊನಾ ಮೇಲೆರಗು ಎತ್ತಿದ್ದಂತೆ’. ಎತ್ತಿನ ಮೈಸವರಿದರೆ ಸಮಾಧಾನಗೊಳ್ಳುತ್ತದೆ. ಅಂತೆಯೇ ಕೊರೊನಾ ಬಗ್ಗೆಯೂ ಎಚ್ಚರವಾಗಿರಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಮುಂಜಾಗ್ರತಾ ಕ್ರಮಗಳಿಂದ ಈ ಸೋಂಕಿನಿಂದ ದೂರವಿರಬಹುದು. ಈ ರೋಗಕ್ಕೆ ಆದಷ್ಟು ಬೇಗನೆ ಮಾಯವಾಗಲಿ ಎಂದು ಶ್ರೀ ಗುರು ಮಂಟೇಶ್ವರನಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಉಮೇಶ ಹೂಗಾರ,ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ, ಪೋಲಿಸ್ ಸಿಬ್ಬಂದಿ, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಬಾಬು ಸಿಮಿಕೇರಿ,ಬಸವರಾಜ ಮಾದರ,ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*