ಲಾಕ್ ಡೌನ್ ವೇಳೆ ಬೇಕಾಬಿಟ್ಟಿ ಓಡಾಟ, 100 ಕ್ಕೂ ಹೆಚ್ಚು ವಾಹನಗಳು ಸೀಜ್‌

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ  ಸುದ್ದಿಗಳು

ಬಾಗಲಕೋಟೆ: (ಗುಡೂರ):

ಇಂದಿನಿಂದ ಕಟ್ಟು ನಿಟ್ಟಿನ ಲಾಕ್ ಡೌನ ಜಾರಿಯಾಗಿದ್ದು ಸರ್ಕಾರದ ನಿಯಮ ಗಾಳಿಗೆ ತೂರಿ ಅನಗತ್ಯವಾಗಿ ರೋಡಿಗಿಳಿದ 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮತ್ತು ಟಂಟಂಗಳನ್ನು ಗುಡೂರ ಹೊರ ವಲಯ ಪೋಲಿಸ್ ಠಾಣೆಯ ಸಿಬ್ಬಂದಿಗಳು ವಶಕ್ಕೆ ಪಡೆದು ದಂಡ ವಿಧಿಸಲಾಯಿತು.

ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ನಿಯಮ‌ ಜಾರಿ ಮಾಡಿದೆ. ಆದರೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದ ಬಗ್ಗೆ ಪೋಲೀಸರು ಗರಂ ಆಗಿದ್ದಲ್ಲದೆ ಅಂತವರ ವಾಹನಗಳ ಮೇಲೆ ದಂಡ ವಿಧಿಸಿದ್ದಾರೆ.

ಲಾಕ್​ಡೌನ್ ಇದ್ದರೂ ಇಂದು ಗುಡೂರಿಗೆ ಹಲವು ಕಡೆಯಿಂದ ಜನರು ನಿಯಮವನ್ನು ಮೀರಿ ಬೈಕ್ ಮತ್ತು ಟಂಟಂಗಳಲ್ಲಿ ಓಡಾಡುವುದು ಕಂಡು ಬಂದಿದ್ದರಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಇಂದು ಗುಡೂರಿನಾದ್ಯಂತ ಭಾರಿ ಬಂದೋಬಸ್ತ್ ವಹಿಸಿದ್ದಾರೆ. ಇಂದು ಬೆಳಗ್ಗೆಯಿಂದ ಗುಡೂರಿನಲ್ಲಿ 100ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ.

Be the first to comment

Leave a Reply

Your email address will not be published.


*