ಜಿಲ್ಲಾ ಸುದ್ದಿಗಳು
ಮಸ್ಕಿ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮವು ಜಿಲ್ಲೆಯ ಪ್ರಥಮ ಭೂ ಹೋರಾಟದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.ಐತಿಹಾಸಿಕ ಹಿನ್ನೆಲೆಯ ಹೋರಾಟವೆಂದರೆ ಮೆದಿಕಿನಾಳ ಗ್ರಾಮದ ಧಣಿಗಳ ವಿರುದ್ಧ ಸಮಾರೋಪಾಯ ಹೋರಾಟದ ನೆನಪು ಮೈ ಜುಮ್ಮೆನಿಸುವಂತಹ ಜೀವನ್ಮರಣದ ಹೋರಾಟ ದಿಂದ ಅಲ್ಲಿಯ ಜನರಿಗೆ ಜಮೀನ್ದಾರಿ ಗುಲಾಮಗಿರಿಯಿಂದ ಮುಕ್ತಿ ಹೊಂದಿ ನೆಮ್ಮದಿಯ ಜೀವನ ನಡೆಸಲು ಜೀವತುಂಬಿದ ಸಂಘಟನೆ ಎಂದರೆ ಈಗಿನ ಕರ್ನಾಟಕ ರೈತ ಸಂಘ ಎಂಬುದು ಮಾನ್ಯ ತಹಸೀಲ್ದಾರರು ಮೆದಿಕಿನಾಳ ಭೂ ಹೋರಾಟದ ವಿರೋಚಿತ ಚರಿತ್ರೆಯನ್ನು ಬಲ್ಲವರಿಂದ ತಿಳಿದುಕೊಂಡು ಮೆದಿಕಿನಾಳ ಗ್ರಾಮದ ಸರ್ವೆ ನಂಬರ್ 125 ಕ್ಷೇತ್ರ ಒಂದು ಎಕರೆ 36 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದಡಾll ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಇತ್ಲಿ ಇವರನ್ನು ಈ ಜಮೀನಿನಿಂದ ತೆರವುಗೊಳಿಸಿ ತಮ್ಮ ಭೂಮಿಯನ್ನು ತಮ್ಮ ಅಂತಸ್ತಿಗೆ ತೆಗೆದುಕೊಳ್ಳಬೇಕೆಂದು ನಮ್ಮ ಸಂಘಟನೆ ಆಗ್ರಹಿಸುತ್ತದೆ. ರಾಯಚೂರು ಜಿಲ್ಲೆಯ ಭೂ ಮಾಲೀಕರ ದಬ್ಬಾಳಿಕೆ ಹಾಗೂ ಅಕ್ರಮ ಭೂಗಳ್ಳರ ಕೇಂದ್ರವೆಂದರೆ ರಾಯಚೂರು ಜಿಲ್ಲೆ ಅಂದಿನ ಹೈದರಾಬಾದ್ ನಿಜಾಮರ ಆಡಳಿತದಲ್ಲಿ ದೇಸಾಯಿಯರು, ಧಣಿಗಳು, ಜಾಗೀರದಾರರು, ಪೊಲೀಸ್ ಪಾಟೀಲರು, ಇವರುಗಳು ಬ್ರಿಟಿಷರು ಹುಟ್ಟುಹಾಕಿದ ಕಂದಾಯದ ಕರವಸೂಲಿ ಸಂಸ್ಥೆಗಳು ಈಗಿನ ಭೂಮಾಲೀಕ ರಾಗಿ ಪರಿವರ್ತನೆಗೊಂಡಿದ್ದಾರೆ. ಹೈದರಾಬಾದ್ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ ಮೇಲೆ ಈಗಿನ ಭೂಮಾಲಿಕರು ಅಕ್ರಮವಾಗಿ ನಾಯಿ ನರಿಗಳ ಹೆಸರಿನ ಮೇಲೆ ತಮ್ಮ ಭೂಮಿಯನ್ನು ಉಳಿಸಿಕೊಂಡಿದ್ದಾರೆ. ಇದಕ್ಕೆ ನಿಮ್ಮ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಸಹಕರಿಸುತ್ತಾ ಬಾಯಿಂದ ಬಡವರಿಗೆ ಅನ್ಯಾಯ ಮಾಡುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ 19 161 ರಲ್ಲಿ ಜಾರಿಗೆ ಬಂದ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸಮಗ್ರವಾಗಿ ಜಾರಿಗೆ ಆಗದೆ ನಿಷ್ಪ್ರಯೋಜಕವಾಗಿದೆ. ಈ ಕಾಯ್ದೆ ಹೆಸರಿನಲ್ಲಿ ಉಳುವವನೇ ಭೂ ಒಡೆಯ ಎಂಬುವವರೇ ಉಳ್ಳವರಿಗೆ ಭೂ ಎಂಬುದು ಸಾಬೀತಾಗಿದೆ. ಈಗಾಗಲೇ ಮಸ್ಕಿ ತಾಲೂಕಿಗೆ ಒಳಪಡುವ ರತ್ನಾಪುರ, ರತ್ನಾಪುರ ಹಟ್ಟಿ, ಇನ್ನಿತರ ಹಳ್ಳಿಗಳ ಹೂವಿನ ಬಡರೈತರು ಸರ್ಕಾರಿ ಜಮೀನು ಉಳುಮೆ ಮಾಡಿಕೊಂಡು ತಮ್ಮ ಕುಟುಂಬವನ್ನು ಸಾಗಿಸುತ್ತಿದ್ದಾರೆ. ಈ ಸರ್ಕಾರಿ ಜಮೀನಿನ ಮೇಲೆ ಫಾರಂ ನಂಬರ್ 57 ಅಕ್ರಮ-ಸಕ್ರಮ ಕಾಯ್ದೆಯಡಿಯಲ್ಲಿ ಅರ್ಜಿಯನ್ನು ಹಾಕಿದ್ದಾರೆ. ಆ ದಾಖಲಾತಿಗಳನ್ನು ತಮ್ಮ ಮಸ್ಕಿ ತಾಲೂಕಿಗೆ ವರ್ಗಾಯಿಸಿಕೊಂಡು ಭೂ ಹೀನ ಬಡವರಿಗೆ ಭೂಮಿ ಹಂಚಿಕೆ ಮಾಡಬೇಕೆಂದು ಕರ್ನಾಟಕ ರೈತ ಸಂಘ ತಾಲೂಕು ಸಮಿತಿಯು ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದೆ.
ಇದೇ ಸಂದರ್ಭದಲ್ಲಿ ಸಂತೋಷ್ ಹಿರೇದಿನ್ನಿ ಅಧ್ಯಕ್ಷರು ಮಸ್ಕಿ, ಮಾರುತಿ ಜಿನ್ನಾಪುರ ತಾಲೂಕ ಪ್ರಧಾನ ಕಾರ್ಯದರ್ಶಿ, ಹುಲಗಪ್ಪ ಚಿಲ್ಕರಾಗಿ, ಭೀಮಣ್ಣ ಚಿಲ್ಕರಾಗಿ, ಅದಯ್ಯ ಸ್ವಾಮಿ ಹರ್ವಾಪೂರ, ಕೃಪಾನಂದ,ಶರಣಪ್ಪ ಗೌಡ ಚಿಲ್ಕರಾಗಿ ಹಾಗೂ ಸರ್ವ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Be the first to comment