ಸೆ.26ಕ್ಕೆ ಕಾಂಗ್ರೆಸ್-ಗಾಂಧಿನಡಿಗೆ ಕಾರ್ಯಗಾರಕ್ಕೆ ಪೂರ್ವಭಾವಿ ಸಭೆ ದೇವನಹಳ್ಳಿ ವಿ.ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಂದ ಸಭೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೆ.೨೬ರಂದು ನಡೆಯಲಿರುವ ಕಾಂಗ್ರೆಸ್-ಗಾಂಧಿನಡಿಗೆ ಕಾರ್ಯಗಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿ ರವರು ಇದೇ ತಿಂಗಳ 26ನೇ ತಾರಿಖು ನಮ್ಮ ತಾಲೂಕಿನಲ್ಲಿ ಕಾಂಗ್ರೆಸ್ ಗಾಂಧಿನಡಿಗೆ ಕಾರ್ಯಗಾರ ಕಾರ್ಯಕ್ರಮವನ್ನು ಮಾಡುವಂತೆ ಸೂಚನೆ ನೀಡಿದ್ದಾರೆ. ಇದರ ಉದ್ದೇಶ ಪ್ರತಿ ಗ್ರಾಪಂ ಸದಸ್ಯರು, ಎರಡು ಪುರಸಭೆ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು ಗೆದ್ದಿರುವವರು ಮತ್ತು ಸೋತಿರುವವರು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಬರಲೇ ಬೇಕು. ಈ ಕಾರ್ಯಕ್ರಮದಲ್ಲಿ ಮೂಲತಃ ಪಕ್ಷ ಸಂಘಟನೆಯ ಬಗ್ಗೆ ಯಾವ ರೀತಿ ಕಾರ್ಯಕ್ರಮ ನಡೆಸಬೇಕು ಎಂಬುವುದರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪ್ರತಿಯೊಬ್ಬರು ತಪ್ಪದೇ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

CHETAN KENDULI

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಈ ಸಭೆ ಗಾಂಧಿ ನಡಿಗೆ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ 24/7 ಕಾರ್ಯಕ್ರಮ ರೂಪಿಸಿಕೊಂಡು ಕಾಂಗ್ರೆಸ್ ಅಲೆಯನ್ನು ಎಬ್ಬಿಸಿ, ಎದುರಾಳಿಗಳನ್ನು ಎದೆ ಬಡಿಯುವ ಹಾಗೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕಾರ್ಯಕ್ರಮಕ್ಕೆ ಹಲವಾರು ಕಾಂಗ್ರೆಸ್ ವರಿಷ್ಠರು ಬರಲಿದ್ದಾರೆ. ಎಲ್ಲಾ ಘಟಕದ ಮುಖಂಡರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಾರ್ಯಗಾರವನ್ನು ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆ ಗೇಟ್‌ನಲ್ಲಿರುವ ಎಸ್‌ಎಸ್‌ಬಿ ಕನ್ವೆಂಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಮೂಲ ಉದ್ದೇಶವನ್ನು ವಿವರಿಸಿದರು.

ಈ ವೇಳೆಯಲ್ಲಿ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಮುನಿನರಸಿಂಹಯ್ಯ, ಹಿಂದುಳಿದ ವರ್ಗಗಳ ರಾಜ್ಯಾ ಉಪಾಧ್ಯಕ್ಷ ಸಿ.ಜಗನ್ನಾಥ್, ಮುಖಂಡರಾದ ಎಸ್.ಆರ್.ರವಿಕುಮಾರ್, ಎಸ್.ಪಿ.ಮುನಿರಾಜು, ಚೇತನ್‌ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್, ಜಯರಾಮ್.ಆರ್, ಲಕ್ಷ್ಮೇಗೌಡ, ಕೋದಂಡರಾಮ್, ಪಟೇಲಪ್ಪ, ಸೋಮಶೇಖರ್, ರಾಧಕೃಷ್ಣ, ಕೃಷ್ಣಮೂರ್ತಿ, ಶಿವಾಜಿಗೌಡ, ಟೌನ್ ಅಧ್ಯಕ್ಷ ಗೋಪಿ, ಪುರಸಭೆ ಸದಸ್ಯ ಶ್ರೀಧರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಚಿಂತಾಮಣಿ ವಿ.ಸಭಾ ಕ್ಷೇತ್ರದ ಶಾಸಕಾಂಕ್ಷಿ ವೇಣುಗೋಪಾಲ್, ಅಣ್ಣೇಶ್ವರ ಚಂದ್ರಶೇಖರ್, ಚಂದ್ರಣ್ಣ, ಬೈಚಾಪುರ ರಾಜಣ್ಣ, ಪುರುಶೋತ್ತಮ್‌ಕುಮಾರ್, ಗೋಪಾಲಕೃಷ್ಣ, ಪುರಸಭಾ ಸದಸ್ಯ ಮುನಿಕೃಷ್ಣ, ಮುನಿರಾಜ್(ಬರ್ಮ), ಆವತಿ ಜಿಪಂ ಮಾಜಿ ಸದಸ್ಯೆ ರಾಧಮ್ಮ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಹಿರಿಯ ಮುಖಂಡರು, ಯುವ ಮುಖಂಡರು ಇದ್ದರು.

Be the first to comment

Leave a Reply

Your email address will not be published.


*