ಕೇವಲ 2,000ರೂಪಾಯಿ ಲಂಚಕ್ಕೆ ಕ್ಕೆ 3 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಪಿಡಿಒ: ಭ್ರಷ್ಟ ಅಧಿಕಾರಿಗಳಿಗೆ ಇದು ಎಚ್ಚರಿಕೆ ಸುದ್ದಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಬೀದರ್‌

ರೈತನಿಂದ ಲಂಚ ಪಡೆದ ಆರೋಪದಲ್ಲಿ ಮೀನಕೇರಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ್ಗೆ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಬಾಳೆ ಸಸಿ ನೆಡಲು ಸರ್ಕಾರದಿಂದ ಕೊಡುವ ಸಹಾಯಧನ ಮಂಜೂರು ಮಾಡಲು ಪಿಡಿಒ ಜಗನ್ನಾಥ್, ರೈತನಿಂದ 3000ಲಂಚ ಬೇಡಿಕೆ ಇಟ್ಟಿದ್ದ. ಪ್ರಕರಣದ ಬಗ್ಗೆ ವಾದವನ್ನು ಆಲಿಸಿದ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಸತ್ಯನಾರಾಯಣಾಚಾರ್ಯ ಜಗನ್ನಾಥಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

CHETAN KENDULI

ಬಶಿರಾಪುರದ ಅನಂತ ಭೀಮಣ್ಣ ಗೊಬ್ಬರಕ್ಕೆ ಖರ್ಚು ಮಾಡಿದ 13 ಸಾವಿರ ಹಣ ಪಡೆಯಲು ಪಿಡಿಒಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಹಣ ಕೊಡಲು ಪಿಡಿಒ 8 ತಿಂಗಳು ಸತಾಯಿಸಿ ಗ್ರಾಮದ ಶಿವಪುತ್ರ ಎನ್ನುವವರ ಮೂಲಕ ಪಿಡಿಒ 3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಅನಂತ ಭೀಮಣ್ಣ ಅವರು 2 ಸಾವಿರ ಕೊಡಲು ಒಪ್ಪಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಪಿಡಿಒ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.

Be the first to comment

Leave a Reply

Your email address will not be published.


*