ರಾಜ್ಯ ಸುದ್ದಿಗಳು
ಸಿಂದಗಿ (ವಿಶೇಷ ಪ್ರತಿನಿಧಿಯಿಂದ ವರದಿ):
ಅಚ್ಚೆದಿನ್ ಆಯೆಂಗೆ ಅಂದು ಮೋದಿಯವರು ಕೇಂದ್ರದಲ್ಲಿ ದೇಶಕ್ಕೆ ಮೋಸಾ ಮಾಡುತ್ತಾ ಬಂದರೆ ಮೋದಿ ಸರಕಾರ ಅಚ್ಚೆ ಸರಕಾರ ಎಂದು ಹೇಳಿಕೊಂಡು ಷಡ್ಯಂತ್ರ ನಡೆಸಿ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಬಿಜೆಪಿ ಸರಕಾರ ರಾಜ್ಯದ ಜನತೆಗೆ ಯಾವ ನಿಟ್ಟಿನಲ್ಲಿ ಒಳ್ಳೆಯ ಆಡಳಿತ ಮಾಡಿದೆ ಎನ್ನುವುದೇ ತಿಳಿಯುತ್ತಿಲ್ಲ. ಕೇಂದ್ರದಲ್ಲಿ ವಿರೋಧಿ ಸರಕಾರವಿದ್ದರೂ ರಾಜ್ಯದಲ್ಲಿ ಜನಪರ ಆಡಳಿತ ಸರಕಾರ ಮಾಡಿದ ಹಿರಿಮೆ ಕಾಂಗ್ರೆಸ್ ಪಕ್ಷಕ್ಕಿದೆ. ಅಂದು ಸಿದ್ರಾಮಯ್ಯನವರು ಮಾಡಿದಂತಹ ವಿವಿಧ ಭಾಗ್ಯದಡಿ ಯೋಜನೆಗಳನ್ನು ಇಂದಿನ ವ್ಯಕ್ತಿಪರ ಸರಕಾರ ಕಡಿತಗೊಳಿಸುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ುಪ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಪ್ರಚಾರ ಸಂದರ್ಭದಲ್ಲಿ ರಾಜ್ಯ ಸರಕಾರದ ಅನ್ಯಾಯಗಳ ಬಗ್ಗೆ ಮತದಾರರಿಗೆ ತಿಳಿಸುತ್ತಾ, ಸಿದ್ರಾಮಯ್ಯನವರು ರಾಜ್ಯದ ಅಧಿಕಾರ ಚುಕ್ಕಾಣಿ ಸಿಡಿದ ವೇಳೆಯಲ್ಲಿ ರಾಜ್ಯದ ಸಾವಿರಾರು ಬಡ ಕುಟುಂಬಗಳಿಗೆ ಅನ್ನದಾತರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಿಕೊಟ್ಟು ಆರ್ಥಿಕವಾಗಿ ಹಿಂದಿದ್ದ ಜನರಿಗೂ ಹೊಟ್ಟೆ ತುಂಬುವಷ್ಟು ಆಹಾರ ಸಿಗುವಂತೆ ನೋಡಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಷಡ್ಯಂತ್ರದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಸಿದ್ರಾಮಯ್ಯನವರ ಜನಪರ ಯೋಜನೆಗಳನ್ನು ಮೊಟಕುಗೊಳಿಸಿದ್ದಾರೆ. ಅಲ್ಲದೇ ಬಡ ಕುಟುಂಬಸ್ಥರ ಏಳಿಗೆಯನ್ನು ಮಾಡಬೇಕಾದ ಸರಕಾರ ಕೇವಲ ಬಂಡವಾಳ ಶಾಹಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.
ರಾಜ್ಯ ಬಿಜೆಪಿಗೆ ಈಗಾ ಜಾತಿ ಬಗ್ಗೆ ಆಲೋಚನೆ ಬಂತಾ…?
ಹಲವಾರು ವರ್ಷಗಳ ಹಿಂದೆಯೇ ತಳವಾರ ಸೇರಿದಂತೆ ಇನ್ನಿತರ ಸಮುದಾಯಗಳನ್ನು ಎಸ್ಟಿಗೆ ಒಳಪಡಿಸಬೇಕು ಎಂದು ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಆದೇಶ ಮಾಡಿದ್ದರೂ ರಾಜ್ಯದಲ್ಲಿ ಮಾತ್ರ ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ಯಾವುದೇ ಹಮನ ಹರಿಸದ ರಾಜ್ಯ ಬಿಜೆಪಿ ಸರಕಾರಕ್ಕೆ ಉಪ ಚುನಾವಣೆ ಬಂದ ಕ್ಷಣದಲ್ಲಿಯೇ ಆಯಾ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವ ಸದುದ್ದೇಶ ಬಂದಿದೆಯಾ..? ಇತ್ತಿಚಿಗಷ್ಟೇ ಇದೇ ಸಿಂದಗಿ ಕ್ಷೇತ್ರ ತಳವಾರ ಸಮುದಾಯಕ್ಕೆ ಸೇರಿದ ಓರ್ವ ಮುಖಂಡರಿಗೆ ಚುನಾವಣೆಯ ನಂತರ ಎಸ್ಟಿ ಪ್ರಮಾಣ ಪತ್ರ ನೀಡುವ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದು ಮಾದ್ಯಮದಲ್ಲಿ ವರದಿಯಾಗಿದೆ. ಇದೇ ವೇಳೆಯಲ್ಲಿಯೇ ಸಿಎಂ ಬೊಮ್ಮಾಯಿ ಅವರಿಗೆ ತಳವಾರ ಸಮಾಜದ ಬೇಡಿಕೆಗಳು ನೆನೆಪಿಗೆ ಬಂದವಾ…? ಅಥವಾ ಚುನಾವಣೆ ಎದುರಿಸಲು ಎಂತಹದೇ ದಾರಿಯಲ್ಲೂ ಬಿಜೆಪಿ ಪಕ್ಷ ನಡೆಯುತ್ತದೆ ಎನ್ನುವುದಕ್ಕೆ ಇದು ಸಾಕ್ಷಿನಾ..? ಎಂಬುವುದೇ ತಿಳಿಯುತ್ತಿಲ್ಲ. ಜನರ ಮೂಗಿಗೆ ಬೆಣ್ಣೆ ಒರೆಸುವ ಕೆಲಸ ಮಾಡುತ್ತಿರುವ ರಾಜ್ಯ ಬಿಜೆಪಿ ಸರಕಾರಕ್ಕೆ ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಂದಗಿ ಕ್ಷೇತ್ರದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಇದರ ಬಗ್ಗೆ ಬಿಜೆಪಿ ಪಕ್ಷದ ಯಾವ ಮುಖಂಡನೂ ಮಾತು ಎತ್ತದಿರುವುದು ಮತದಾರರಲ್ಲಿ ಸಂಶಯ ಪ್ರಶ್ನೆ ಮೂಡಿದೆ.
Be the first to comment