ಸುಷ್ಮಾ ರಾಜಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಆರೋಗ್ಯ ಹಸ್ತಕ್ಕೆ ಚಾಲನೆ.

ವರದಿ : ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿ

CHETAN KENDULI

ಶಿರಸಿ : ದಿವಂಗತ ದೀಪಕ್ ಹೊನ್ನಾವರ್ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ಕಾಂಗ್ರೆಸ್ ಆರೋಗ್ಯ ಸಹಾಯ ಹಸ್ತ ಕಾರ್ಯಕ್ರಮದ ಮೂಲಕ ಶಿರಸಿ ಸಿದ್ದಾಪುರ ಕ್ಷೇತ್ರದ 5000 ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಒದಗಿಸುವ ಕಾರ್ಯಕ್ಕೆ ಕೆ ಪಿ ಸಿ ಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮುಖಾಂತರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು ದಿವಂಗತ ದೀಪಕ್ ಹೊನ್ನಾವರ್ ಅಭಿಮಾನಿ ಬಳಗದ ವತಿಯಿಂದ ಶ್ರೀಮತಿ ಸುಷ್ಮಾ ರಾಜಗೋಪಾಲ್ ಅವರು ತಮ್ಮ ಸ್ವಂತ ಹಣದಿಂದ ಬಡ ಜನರಿಗೆ ಕಿಟ್ ವಿತರಿಸುತ್ತಿರುವುದು ಉತ್ತಮ ವಿಚಾರ,


ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಬಡ ಜನರಿಗೆ ನೆರವಾಗಲು ಮಾನವೀಯತೆ ಮೂಲಕ ಅಗತ್ಯವಸ್ತುಗಳ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Be the first to comment

Leave a Reply

Your email address will not be published.


*