ಜಿಲ್ಲಾ ಸುದ್ದಿಗಳು
ಭಟ್ಕಳ:
ಭಟ್ಕಳದ ಪುರಸಭೆಯ ಹಳೆಯ 27 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಸೋಮವಾರ ಬೆಳ್ಳಿಗೆ 11 ಗಂಟೆಗೆ ಪುರಸಭೆ ಸಭಾಭವನದಲ್ಲಿ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮ್ ಅವರ ಅಧ್ಯಕ್ಷತೆಯಲ್ಲಿ , ಭಟ್ಕಳ್ ಸಹಾಯಕ ಆಯುಕ್ತೆ ಮಮಾತಾದೇವಿಯವರ ಉಪಸ್ಥಿತಿಯಲ್ಲಿ ನಡೆಯಿತು. ಪುರಸಭೆಯ 26 ಹಳೆಯ ಅಂಗಡಿ ಮಳಿಗೆಗಳಲ್ಲಿ 11 ಅಂಗಡಿಗಳನ್ನು ಹರಾಜು ಹಾಕಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಕಾಯಿದಿರಿಸಿದ ಅಂಗಡಿ ಹರಾಜು ಹಾಕುವಾಗ , ಹರಾಜಿನಲ್ಲಿ ಭಾಗವಹಿಸಿದ ದಲಿತ ಯುವ ಮುಖಂಡ ದಿನೇಶ್ ಪಾವಾಸ್ಕರ್ ಮಾತನಾಡಿ ಪುರಸಭೆ ಅಧಿಕಾರಿಗಳು ನೈಜ ದಲಿತರು ಯಾರು ಎಂದು ನೀವು ಸರಿಯಾಗಿ ದಾಖಲಾತಿ ಪರಿಶೀಲನೆ ಮಾಡದೆ ಹರಾಜು ಪ್ರಕ್ರಿಯೆ ನಡೆಸಿದ್ದು ಸರಿ ಅಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಅಧಿಕಾರಿಗಳು ನೀವು ಕಾನೂನಿನ ವಿರುದ್ಧವಾಗಿ ಈ ಹರಾಜು ಪ್ರಕ್ರಿಯೆ ನಡೆಸುತ್ತಿದ್ದೀರಿ ಇದರಿಂದ ನೈಜ ದಲಿತರಿಗೆ ಅನ್ಯಾಯ ಆಗುತ್ತಿದೆ ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಪುರಸಬಾ ಅಧಿಕಾರಿಗಳು ಮೊದಲು ನೈಜ ದಲಿತರು ಯಾರು ಎಂದು ಅವರ ಜಾತಿ ಪ್ರಮಾಣ ಪತ್ರ ಸರಿಯಾಗಿ ಇದೆಯೋ , ಇಲ್ಲ ಎಂದು ಪರಿಶೀಲಿಸಿ ಈ ಹರಾಜು ಪ್ರಕ್ರಿಯೆ ನಡೆಸಬೇಕಿತ್ತು ಎಂದು ತಿಳಿಸಿಸಿದರು. ಪುರಸಭೆಯ 11 ಅಂಗಡಿ ಮಳಿಗೆಗಳನ್ನು ಸರಕಾರ ನಿಗದಿಪಡಿಸಿದ ದರಕ್ಕೆ ಹರಾಜು ಕುಗಲಾಯಿತು , ಹರಾಜು ಪ್ರಕ್ರಿಯೆಯಲ್ಲಿ ಬಾಗವಹಿಸಿದ ವ್ಯಾಪಾರಸ್ಥರು ತಮಗೆ ಅನುಕೂಲವಾದ ಬಾಡಿಗಗೆ ಅಂಗಡಿಗಳನ್ನು ಹರಾಜು ಕೂಗಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ರಾಧಿಕಾ , ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಫಯಾಜ್ ಮುಲ್ಲಾ , ವೇಣುಗೋಪಾಲ್ ಶಾಸ್ತ್ರಿ, ಪುರಸಬಾ ಸದಸ್ಯರು ಉಪಸ್ಥಿತರಿದ್ದರು. ಈ ಹರಾಜು ಪ್ರಕ್ರಿಯೆಗೆ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ಪಿ.ಎಸ್.ಐ ಸುಮಾ ಆಚಾರ್ಯ, ಕುಡಗುಂಟಿ , ಗ್ರಾಮೀಣ ಠಾಣೆ ಪಿ.ಎಸ್.ಐ ಭರತ್ ಭದ್ರತೆ ಒದಗಿಸಿದರು.
Be the first to comment