ಮೇಳೆಕೋಟೆ ಕೆರೆಗೆ ಬಾಗಿನ ಅರ್ಪಿಸಿದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ ಶಾಂತಕುಮಾರ್

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ದೇವನಹಳ್ಳಿ ತಾಲ್ಲೂಕು ತೂಬಗೆರೆ ಹೋಬಳಿಯ ಮೆಳೇಕೋಟೆ ಕೆರೆ ತುಂಬಿದ್ದು ಗ್ರಾಮಸ್ಥರದಲ್ಲಿ ಸಂತಸ ಮೂಡಿಸಿದೆ ನವರಾತ್ರಿ ಹಬ್ಬದ ಬೆನ್ನಲ್ಲೆ ಸಾಂಪ್ರದಾಯಿಕ ಶ್ರದ್ಧೆಯಿಂದ ಬಾಗಿನದ ಮೊರವನ್ನು ಗಂಗೆಯ ಒಡಲಿಗೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಸಮರ್ಪಿಸಿದರು.

CHETAN KENDULI

ನಂತರ ಮಾತನಾಡಿ ಶುದ್ಧವಾದ ನೀರು ಮಾತ್ರ ಕೆರೆಯ ಒಡಲನ್ನು ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದು ಉಪಯುಕ್ತವಾದ ಕ್ರಮವಾಗಿದೆ ಸರ್ಕಾರ ಕೆರೆಗಳ ಹೂಳು ತೆಗೆದು ನಾಲೆಗಳ ದುರಸ್ತಿ ಮಾಡಲು ಮೊದಲ ಆದ್ಯತೆ ನೀಡಬೇಕು. ಕೆರೆಗಳಲ್ಲಿ ಹೂಳನ್ನು ತೆರವುಗೊಳಿಸಿ ಅಂತರ್ಜಲ ಹೆಚ್ಚಳ ಮಾಡಬೇಕು ವರುಣನ ಕೃಪಾ ಕಟಾಕ್ಷದಿಂದ ಮಳೆ ಬಂದು ಹಲವಾರು ಕೆರೆ, ಕಟ್ಟೆಗಳಿಗೆ ನೀರು ಅಲ್ಪ ಸ್ವಲ್ಪ ಬಂದಿದೆ. ಹಳ್ಳ ಕೊಳ್ಳಗಳು ಹರಿದಿರುವುದರಿಂದ ಕುಡಿಯುವ ನೀರಿನ ಅಭಾವ ತಪ್ಪಿದಂತಾಗಿದೆ. ದನ ಕರುಗಳಿಗೆ ಮೇವಿನ ಕೊರತೆ ನೀಗಿದಂತಾಗಿದೆ. ಆದ್ದರಿಂದ ಇನ್ನು ಮುಂದೆ ಪ್ರತಿಯೊಬ್ಬರು ಒಂದೊಂದು ಗಿಡವನ್ನು ನೆಟ್ಟು ಕಾಡನ್ನು ಬೆಳೆಸಿದ್ದೆ ಆದಲ್ಲಿ ಮಳೆಯ ತೊಂದರೆಯಾಗುವುದಿಲ್ಲ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ತಿಳಿಸಿದರು.

ಗ್ರಾಮದ ಮಹಿಳೆಯರು ಪೂರ್ಣ ಕುಂಭ ಸಮೇತರಾಗಿ ಗ್ರಾಮದ ರಸ್ತೆಗಳಲ್ಲಿ ಆಗಮಿಸಿ ಗಂಗೆಗೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಚಿನ್ನಪ್ಪ, ತೂಬಗೆರೆ ಹೋಬಳಿಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿ ಕೆರೆಗೆ ಬಾಗಿನ ಅರ್ಪಿಸಿದರು.

Be the first to comment

Leave a Reply

Your email address will not be published.


*