ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಶನಿವಾರ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ಥಳೀಯ ಪಿ.ಎಸ್.ಐ. ಎಂ.ಬಿ.ಬಿರಾದಾರ ಹಾಗೂ ನಾಲತವಾಡ ಹೊರ ಠಾಣೆಯ ಸಿಬ್ಬಂದಿಗಳು ಅನಾವಶ್ಯಕವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ವಾಹನಗಳನ್ನು ತಡೆದು ತಪಾಸಣೆ ಕೈಗೊಂಡು ಮೇಲಾಧಿಕಾರಿಗಳ ಸೂಚನೆಗಳನ್ನು ಬಂದುಬಸ್ತಾಗಿ ಪಾಲನೆಯಾಗುವಂತೆ ನೋಡಿಕೊಂಡರು.
ತಹಸೀಲ್ದಾರ ಬೇಟಿ:
ಮುದ್ದೇಬಿಹಾಳ ತಹಸೀಲ್ದಾರ ಅಧಿಕಾರಿಯಾಗಿ ಪ್ರಭಾರ ವಹಿಸಿರುವ ನಿಡಗುಂಡ ತಾಲೂಕಿನ ತಹಸೀಲ್ದಾರ ವಾಲಿ ಅವರು ಶನಿವಾರ ಪಟ್ಟಣಕ್ಕೆ ಬೇಟಿ ನೀಡಿ ಪರಿಸ್ಥಿತಿಯನ್ನು ವಿಕ್ಷಣೆ ಮಾಡಿದರು. ಅಲ್ಲದೇ ಅನಾವಶ್ಯಕ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದರು.
ಶುಕ್ರವಾರ ತಾಲೂಕಿನ ಯರಝರಿ ಗ್ರಾಮದಲ್ಲಿ ನಡೆದ ದ್ಯಾಮವ್ವನ ಜಾತ್ರಾ ಮಹೋತ್ಸವದಲ್ಲಿ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿ ಹೆಚ್ಚಿನ ಬಂದುಬಸ್ತಿ ಒದಗಿಸುವಂತೆ ಮೇಲಾಧಿಕಾರಿಗಳಿಂದ ಬಂದಂತಹ ಸೂಚನೆಯನ್ನು ಸ್ಥಳೀಯ ಪೊಲೀಸ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು.
ಅಲ್ಲದೇ ತಾಲೂಕಿನ ನಾಲತವಾಡ ಗ್ರಾಮದ ವೀರೇಶ್ವರ ಸರ್ಕಲ್ ಹತ್ತಿರ ಪೊಲೀಸ್ ಇಲಾಖೆಯನವರು ಬಂದೋಬಸ್ತ್ ಮಾಡಿದ ಪೊಲೀಸರು ಮಾಸ್ಕ ಧರಿಸದ ದ್ವಿಚಕ್ರ ವಾಹನಕಾರರಿಗೆ ಹಾಗೂ ಅನಾವಶ್ಯಕವಾಗಿ ಸಂಚಾರ ನಡೆಸಿದ ವಾಹನಕಾರರಿಗೆ ದಂಡವನ್ನು ವಿಧಿಸುವ ಮೂಲಕ ಜಾಗೃತಿ ಮೂಡಿಸಿದರು.
ಸ್ತಬ್ಧವಾದ ಮುದ್ದೇಬಿಹಾಳ ಪಟ್ಟಣ:
ಶನಿವಾರ ಬೆಳಿಗ್ಗೆಯಿಂದಲೇ ಬಸವೇಶ್ವರ ವೃತ್ತ, ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಇಂದಿರಾ ವೃತ್ತ, ಮಹಾತ್ಮಾ ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅನಾವಶ್ಯಕ ಸಂಚಾರವನ್ನು ತಡೆದ ಪಿ.ಎಸ್.ಐ. ಎಂ.ಬಿ.ಬಿರಾದಾರ ಪೊಲೀಸ ತಂಡವು ರಸ್ತೆಗೆ ಯಾವುದೇ ವಾಹನ ಸಂಚರಿಸದಂತೆ ಮಾಡಿದ್ದು ಮುದ್ದೇಬಿಹಾಳ ಪಟ್ಟಣವು ಸಂಪೂರ್ಣವಾಗಿ ಸ್ತಬ್ಧವಾದಂತೆ ಕಂಡಿತು.
ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿ ಜಿ.ಟಿ.ಗೆಣ್ಣೂರ, ಎಸ್.ಎಸ್. ಮಟ್ಯಾಳ, ಶ್ರೀಕಾಂತ ಬಿರಾದಾರ, ವ್ಹಿ.ಎನ್. ಹಾಲಗಂಗಾದರಮಠ, ಶಾಂತಗೌಡ ಬನ್ನೆಟ್ಟಿ, ಪ್ರಭಾರ ತಹಸೀಲ್ದಾರ ವಾಲಿ, ಪ್ರಭು ಪಾಟೀಲ ಸೇರಿದಂತೆ ಇತರರಿದ್ದರು.
Be the first to comment