ಹಿಂದೂ ದೇವಸ್ಥಾನ ಸ್ವತಂತ್ರಗೊಳಿಸಲು ಸೂಕ್ತ ಕಾನೂನು ರಚನೆ – ಸಿ.ಎಂ ಬಸವರಾಜ ಬೊಮ್ಮಾಯಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಹುಬ್ಬಳ್ಳಿ

ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಸ್ವತಂತ್ರಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಾರೋಪದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಹಿಂದೂ ದೇವಾಲಯಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಹಲವಾರು ಕಾನೂನಿನ ಕಟ್ಟುಪಾಡುಗಳಿವೆ, ಇವುಗಳನ್ನು ಗೆಜೆಟ್ ಅಧಿವೇಶನಕ್ಕೂ ಮುನ್ನ ತೆಗೆದುಹಾಕಲಾಗುತ್ತದೆ ಮತ್ತು ಸ್ವತಂತ್ರ ನಿರ್ವಹಣೆಗೆ ಅವಕಾಶ ಮಾಡಿಕೊಡುವ ಕಾನೂನನ್ನು ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

CHETAN KENDULI

ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇಗುಲದ ಅಭಿವೃದ್ಧಿಗೆ ಬಳಸುವ ಅಧಿಕಾರ ಇಲ್ಲ, ಒಂದು ವೇಳೆ ಬಳಸಬೇಕಾದರೆ ಅಧಿಕಾರಿಯ ಅನುಮತಿಯನ್ನು ಪಡೆಯಬೇಕಾದ ವ್ಯವಸ್ಥೆಯಿದೆ. ಆದರೆ ಬೇರೆ ಧರ್ಮಗಳ ಪ್ರಾರ್ಥನಾ ಮಂದಿರಗಳಲ್ಲಿ ಯಾವುದೇ ಆಚರಣೆಗೆ ಕಾನೂನಿನ ಕಟ್ಟುಪಾಡುಗಳಿಲ್ಲ. ಇಂತಹ ಸ್ವಾತಂತ್ರ್ಯವನ್ನು ಹಿಂದೂ ದೇಗುಲಗಳಿಗೂ ನೀಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Be the first to comment

Leave a Reply

Your email address will not be published.


*