ಜಿಲ್ಲಾ ಸುದ್ದಿಗಳು
ರಾಯಚೂರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಜಿಲ್ಲಾ ಅಧ್ಯಕ್ಷರಾದ ರೂಪ ಶ್ರೀನಿವಾಸ್ ನಾಯಕ್ ಅವರ ನೇತೃತ್ವದಲ್ಲಿ ರೈತರಿಗೆ ಮೋಸ ಮಾಡಿರುವ ನರ್ಸರಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಹಾಯಕ ಸಹ ನಿರ್ದೇಶಕರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಅವರಿಗೆ ಆ ನರ್ಸರಿ ಮಾಲೀಕನ ಮೇಲೆ ಕ್ರಮ ತಗೋಳಬೇಕು ಮತ್ತು ಆ ನರ್ಸರಿ ಇವತ್ತಿನಿಂದನೆ (stop sell’s) ಮಾಡಬೇಕು ಎಂದು ಒತ್ತಾಯಿಸಲಾಯಿತು.
2021-22ನೇ ಸಾಲಿನಲ್ಲಿ ಮೆಣಸಿನಕಾಯಿ ಬಿತ್ತನೆ ಪ್ರದೇಶವು ಅತ್ಯಂತ ಹೆಚ್ಚು ಬೆಳೆಯುವ ರೈತರು ನಮ್ಮ ತಾಲೂಕಿನಲ್ಲಿದ್ದಾರೆ. ಈ ಒಂದು ಸಂದರ್ಭದಲ್ಲಿ ಬೀಜ ಅಥವಾ ಸಸಿಗಳಿಗೆ ಹೆಚ್ಚಿನ ಬೇಡಿಕೆಯಾಗಿದೆ. ಇಂತಹ ಸಮಯದಲ್ಲಿ ಮೆಣಸಿನಕಾಯಿ ಬೆಳೆಗಾರರಿಗೆ ತುಂಬಾನೆ ಒಂದಲ್ಲ ಒಂದು ರೀತಿ ತೊಂದರೆಯಾಗುತ್ತಾ ಬಂದಿವೆ, ಅದರಲ್ಲಿ ದೇವದುರ್ಗ ತಾಲೂಕಿನ ಕೆಲ ಹಳ್ಳಿಗಳ ರೈತರು ಸಹ ಮೋಸ ಹೋಗಿದ್ದಾರೆ. ಕಾರಣ ಬೇರೆ ರಾಜ್ಯದಿಂದ ಬಂದ ನರ್ಸರಿದಾರರು, ಅದರಲ್ಲಿ ಪ್ರಕಾಶರೆಡ್ಡಿ ಎಂಬುವರು ನಮ್ಮ ತಾಲೂಕಿನ ರೈತರಿಗೆ ಮೆಣಸಿನಕಾಯಿ ಸಸಿಯಲ್ಲಿ ಮೋಸಮಾಡಿದ್ದಾನೆ. ಅವರನ್ನು ಜಿಲ್ಲೆಯಿಂದ ಬಹಿಷ್ಕಾರ ಮಾಡಬೇಕು ಹಾಗೂ ರೈತರಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯ, ಈ ಹಿಂದಿನ ದಿನಮಾನಗಳಲ್ಲಿ ಕ.ರಾ.ರೈ.ಸಂ.ಹಾ.ಹ.ಸೇನೆ ತಮಗೆ ಕೊಟ್ಟಿರುವ ಮನವಿ ಪತ್ರದ ಅನ್ವಯ ಸೂಕ್ತ ಕ್ರಮ ಕೈಗೊಳ್ಳದೆ ಇರುವ ಕಾರಣ ಇಲಾಖೆಗೆ ಇನ್ನು 8 ದಿನಗಳಲ್ಲಿ ಮರು ಪರೀಶಿಲನೆ ಮಾಡದೇ ಹೊದರೆ ತಮ್ಮ ಕಛೇರಿಗೆ ಮುತ್ತಿಗೆ ಹಾಕಲಾಗುತ್ತದೆ. ಜಿಲ್ಲಾಧಿಕಾರಿಗಳಾದ ಡಿ.ಡಿ ಅವರಿಗೆ ಈ ಪ್ರತಿಯನ್ನು ರವಾನಿಸಲಾಗುತ್ತದೆ. ನಿಮ್ಮನ್ನು ಅಮಾನತುಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷರು ರೂಪ ಶ್ರೀನಿವಾಸ್ ನಾಯಕ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮರಿಲಿಂಗ ಪಾಟೀಲ್, ಜೈನುದ್ದಿನ್ ನಾಗುಂಡಿ, ಹನುಮಂತರಾಯ ಕೊತ್ತದೊಡ್ಡಿ, ಯಲ್ಲನಗೌಡ ಕೊತ್ತದೊಡ್ಡಿ, ಹಾಗೆ ಮೋಸ ಹೋದ ರೈತರ ಹೆಸರು ಚಂದ್ರಮಾ ಚಂದನಕೇರ, ಹನುಮಂತರಾಯ ವಗಡಂಬಳಿ, ನಾಗಪ್ಪ ವೆಂಗಳಾಪುರ ,ಭೀಮಶಪ್ಪ ಅಂಚೆಸುಗೂರ್,ಹೊನ್ನಪ್ಪ ತೆಗ್ಗಿಹಾಳ, ಇಬ್ರಾಹಿಂ ಗೌರಂಪೆಟ್ ಮುಂತಾದ ರೈತ ಮುಖಂಡರಿದ್ದರು.
Be the first to comment