ರಾಜ್ಯ ಸುದ್ದಿಗಳು
ಮಸ್ಕಿ
ಬಿಸಿಎಂ ಮೊರಾರ್ಜಿ ವಿದ್ಯಾರ್ಥಿಗಳ ಶಾಶ್ವತ ಕಟ್ಟಡವಿಲ್ಲ, ಸದರಿ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೊರಾರ್ಜಿ ವಸತಿ ಶಾಲೆ ಮಸ್ಕಿಯಲ್ಲಿ ವಿಲೀನವಾಗಿದ್ದು, ಸದರಿ ಇಲಾಖೆಗೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ 5 ಎಕರೆ ಹಸ್ತಾಂತರವಾಗಿದ್ದು, ಇನ್ನುಳಿದ ಎರಡು ಎಕರೆ ಬಾಕಿ ಉಳಿದಿದೆ.ಇದಕ್ಕೂ ಪೂರ್ವದಲ್ಲಿ ಮಸ್ಕಿಯ ಖಾಸಗಿಯ ಬಾಳೆಕಾಯಿ ಮಿಲ್ ನಲ್ಲಿ ವಸತಿ ನಿಲಯ ನಡೆಯುತ್ತಿತ್ತು. ಅದಕ್ಕೆ ಮಾಸಿಕ 1,90,000 ರೂ ನಂತೆ ಬಾಡಿಗೆ ಪಡೆಯಲಾಗುತ್ತಿತ್ತು. ಮಾಲೀಕರು ಮೂಲಸೌಕರ್ಯಗಳನ್ನು ನೀಡದಿದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆಯಾಗಿತ್ತು, ಹಾಗೂ ವಿಷಜಂತುಗಳ ಕಾಟದಿಂದ ಮಕ್ಕಳು ಭಯಭೀತರಾಗಿದ್ದಾರೆ. ವಿಷ ಜಂತುವಿನ ಕಡಿತದಿಂದ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದ, ಹಾಗೂ ತುಂಗಭದ್ರಾ ಎಡ ದಂಡೆ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಮತ್ತೊಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈ ಎಲ್ಲಾ ಕಹಿ ಘಟನೆಗಳ ನಡುವೆಯೂ ಅದೇ ಕಾಲುವೆಯ ಪಕ್ಕದಲ್ಲಿಯೇ ಸ್ಥಳಾಂತರಿಸಲು ಮುಂದಾಗಿರುವುದು ಬೇಜವಾಬ್ದಾರಿತನದ ಸಂಗತಿಯೇ ಸರಿ. ದಲಿತ ಸಂಘಟನೆ ಹೋರಾಟ ದಿಂದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಬಾಳೆಕಾಯಿ ಮಿಲ್ ನಿಂದ ಸದರಿ ಮುದುಗಲ್ ರಸ್ತೆಯಲ್ಲಿರುವ ಶಾಶ್ವತ ಮೊರಾರ್ಜಿ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.
ಪಾಲಕರ ಆಕ್ರೋಶ:-ಈ ಹಿಂದೆಯೂ ಪತ್ರಿಕೆಯಲ್ಲಿ ಪ್ರಕಟಿಸಿರುವಂತೆ ಕಳೆದ ಹಲವು ದಿನಗಳಿಂದ ವಸತಿ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ತಮ್ಮ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಈವರೆಗೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷೆ ವಹಿಸಿರುತ್ತಾರೆ. ಸರ್ಕಾರ ವಿದ್ಯಾರ್ಥಿಗಳಿಗಾಗಿ ಬಾಡಿಗೆ ಕಟ್ಟಡ ಗುರುತಿಸುವಾಗ ಅಗತ್ಯ ಸೌಲಭ್ಯವಿರುವ ಕಟ್ಟಡಗಳನ್ನು ಗುರುತಿಸಬೇಕು. ಆದರೆ ವಸತಿ ಶಾಲೆಗೆ ಯೋಗ್ಯವಲ್ಲದ ಕಟ್ಟಡಗಳಲ್ಲಿ ವಿದ್ಯಾರ್ಥಿಗಳನ್ನು ಕುರಿಗಳಂತೆ ಕೂಡಿ ಹಾಕಿದ್ದಾರೆ. ಇದರಿಂದ ನಮ್ಮ ಮಕ್ಕಳು ಪದೇಪದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಆದ್ದರಿಂದ ಕೂಡಲೇ ಕಟ್ಟಡವನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಂತ ಕಟ್ಟಡ ನಿರ್ಮಿಸುವವರೆಗೆ, ಮೂಲಸೌಕರ್ಯ ಇರುವ ಕಾರಣ ಹಾಗೂ ವಿಧ್ಯಾರ್ಥಿಗಳಿಗೆ ಯೋಗ್ಯವಿರುವ ಮೊರಾರ್ಜಿ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಈ ಹಿಂದೆ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ವಸತಿ ನಿಲಯದ ಮುಂಭಾಗವೇ ಪ್ರತಿಭಟನೆ ಮಾಡುವ ಮೂಲಕ ಸ್ಥಳಾಂತರಿಸಲು ಒತ್ತಾಯಿಸಿದ್ದರು. ಆದರೆ ಈಗ ಬಿಸಿಎಂ ಇಲಾಖೆಯ ಶಿಕ್ಷಣ ಅಧಿಕಾರಿಗಳಿಗೆ ಕೆಲವು ರಾಜಕೀಯ ಮುಖಂಡರು ಮುರಾರ್ಜಿ ವಸತಿ ನಿಲಯದಿಂದ ಬೇರೆಡೆ ಸ್ಥಳಾಂತರಿಸಲು ತಮ್ಮ ವೈಯಕ್ತಿಕ ಲಾಭಕ್ಕಾಗಿ ಆದೇಶ ನೀಡಿರುವರು ಎಂಬ ಕೆಲವು ಮೂಲಗಳು ತಿಳಿಸಿವೆ.ಶಾಸಕರ ಆಸಕ್ತಿ:-ಸ್ಥಳೀಯ ಶಾಸಕರು ಶಿಕ್ಷಣಕ್ಕೆ ಆದ್ಯತೆ ನೀಡುವ ಮೊದಲು ಶಾಶ್ವತ ಕಟ್ಟಡಕ್ಕೆ ಸ್ಥಳವಿದ್ದರೂ ಕೂಡ ಅನುದಾನಕ್ಕೆ ಪ್ರಯತ್ನಪಡದೆ ತಮ್ಮ ಹಿಂಬಾಲಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಸ್ಕಿ ಪಟ್ಟಣದ ಗ್ರೀನ್ ಸಿಟಿಯಲ್ಲಿ ಖಾಸಗಿ ಮಾಲಿಕತ್ವದಲ್ಲಿ ಕಟ್ಟಡ ನಿರ್ಮಿಸಿ ಅದನ್ನು ಹಿಂದುಳಿದ ವರ್ಗ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಬಾಡಿಗೆಗೆ ನೀಡಲು ಮುಂದಾಗಿರುವುದು ಖಂಡನೀಯ, ಮತ್ತು ಬೇಜವಾಬ್ದಾರಿಯೂ ಕೂಡ.
ಬಿಸಿಎಂ ಜಿಲ್ಲಾಧಿಕಾರಿ ಖಾಸಗಿ ಮಾಲೀಕರೊಂದಿಗೆ ಈ ಹಿಂದೆ ಎಪಿಎಂಸಿಯಲ್ಲಿ ಇದ್ದಾಗ ಒಬ್ಬ ವಿದ್ಯಾರ್ಥಿ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆ ಮಾಸುವ ಮುನ್ನವೇ ಅದೇ ಕಾಲುವೆಯ ಪಕ್ಕದಲ್ಲಿಯೇ ಸ್ಥಳಾಂತರಿಸಲು ಮುಂದಾಗಿದ್ದಾರೆ.ಪಕ್ಕದಲ್ಲಿಯೇ ಬಾವಿಯಿದ್ದು ವಿದ್ಯಾರ್ಥಿಗಳಿಗೆ ವಾಸವಿರಲು ಸುರಕ್ಷಿತವಲ್ಲ ಎಂದು ಗೊತ್ತಿದ್ದರೂ ಅದೇ ಸ್ಥಳದಲ್ಲಿ ವಸತಿ ಶಾಲೆ ನಿರ್ಮಿಸಲು ಮುಂದಾಗಿರುವುದು ತಾಲೂಕ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯವೇ ಸರಿ.ಮಸ್ಕಿಯ ಬಿಸಿಎಂ ಮೊರಾರ್ಜಿ ವಸತಿ ನಿಲಯ ಮಂಜೂರಾಗಿ ಹದಿನಾರು ವರ್ಷಗಳೇ ಗತಿಸಿದರೂ ಬಾಡಿಗೆ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸುತ್ತಾ ಬಂದಿದ್ದಾರೆ. ನಿಲಯದ ಮಾಸಿಕ ಬಾಡಿಗೆಯೂ 1,90,000 ರೂ ಇದ್ದು, ಮುಂಬರುವ ದಿನಮಾನಗಳಲ್ಲಿ ಖಾಸಗಿ ಒಡೆತನಕ್ಕೆ ಒಪ್ಪಿಸಿ ನಿಲಯದ ಮಾಸಿಕ ಮೂರು ಲಕ್ಷದಿಂದ ನಾಲ್ಕು ಲಕ್ಷದವರೆಗೆ ನಿಗದಿ ಪಡಿಸುವ ಸಾಧ್ಯತೆಯಿದೆ. ಶಾಶ್ವತ ಕಟ್ಟಡ ವಾಗುವುದರೊಳಗೆ ಐದಾರು ವರ್ಷಗಳ ಗತಿಸುವವು ಇದರಿಂದ ಸರ್ಕಾರಕ್ಕೆ 2 ಕೋಟಿಗೂ ಅಧಿಕ ನಷ್ಟವಾಗುವದು.
ಬಿಸಿಎಂ ಮೊರಾರ್ಜಿ ವಸತಿ ನಿಲಯ ಸ್ಥಳಾಂತರಿಸುವುದರಿಂದ ಸರಕಾರಕ್ಕೆ 2 ಕೋಟಿಗೂ ಅಧಿಕ ನಷ್ಟ ವಾಗುವುದು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು. ಆದಕಾರಣ ಮುರಾರ್ಜಿ ವಸತಿ ನಿಲಯದ ಪಕ್ಕದಲ್ಲಿಯೇ ಮೂರರಿಂದ ನಾಲ್ಕು ಕೊಠಡಿಗಳನ್ನು ನಿರ್ಮಿಸುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬಹುದು ಹಾಗೆಯೇ ಸರಕಾರಕ್ಕೆ ಆಗುವ ನಷ್ಟವನ್ನು ತಡೆಯಬಹುದಲ್ಲವೇ…? ವಸತಿ ನಿಲಯ ಸ್ಥಳಾಂತರ ಹಿಂತೆಗೆದುಕೊಳ್ಳಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ವಿಜಯ ಬಡಿಗೇರ್ ಮಸ್ಕಿ,ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷರು ಮಸ್ಕಿ,
Be the first to comment