ಜಿಲ್ಲಾ ಸುದ್ದಿಗಳು
ಹೊನ್ನಾವರ
ಅಂಕೋಲಾ ಮೂಲದ ಮಾಜಿ ಸೈನಿಕ ವಿನೋದ ವಿಶ್ವನಾಥ ಕಾಂಬ್ಳೆ ಭಟ್ಕಳದ ಲೈಟ್ ಹೌಸ್ ನಲ್ಲಿ ಕೆಲಸ ಮುಗಿಸಿ ಕಾಸರಕೋಡಿನ ಟೊಂಕದ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿರುವ, ಮಾಜಿ ಸೈನಿಕ ವಿನಾಯಕ ನಾಯ್ಕರನ್ನು ಭೇಟಿ ಯಾಗಲು ಹೋದಾಗ ಕಾಸರಕೋಡು ಭಾಗದ ೧೦ ರಿಂದ ೧೫ ಜನ ನನ್ನ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಮಾತನಾಡಿ ವಿನೋದ ಕಾಂಬ್ಳೆಯವರು ವಿವರ ನೀಡಿದರು. ನನ್ನ ಬೈಕ್ ಚಾವಿ ತೆಗೆದುಕೊಂಡು, ಎಲ್ಲಿ ಹೋಗುತ್ತೀಯಾ ಕಳುವು ಮಾಡಲು ಬಂದಿದ್ದೀಯ ಎಂದು ಹೊಡೆದು ಬೈದು ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ. ಒಂದುವರೆ ಗಂಟೆ ತನಕ ನನ್ನ ಅಲ್ಲೇ ಇಟ್ಟುಕೊಂಡು ಚಿತ್ರ ಹಿ೦ಸೆ ನೀಡಿ, ಆರ್ಮಿ ವ್ಯಕ್ತಿಯಾಗಿ ಹೇಳಿದರೆ ಮತ್ತೆ ಹೊಡೆಯುವುದಾಗಿ, ಜೀವ ಬೆದರಿಕೆ ಹಾಕಿದ್ದರ ಬಗ್ಗೆ ಮಾಜಿ ಸೈನಿಕ ವಿನೋದ ಕಾಂಬ್ಳೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸೈನಿಕರ ಜಿಲ್ಲಾ ಸಂಘದ ಸದಸ್ಯ ಶ್ರೀಕಾಂತ ನಾಯ್ಕರವರು ಈ ಹಲ್ಲೆಯ ಪ್ರಮಾಣವನ್ನು ಖಂಡಿಸಿ ತನಿಕೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.
Be the first to comment