ನದಿಯಿಂದ ಜನವಸತಿ ಪ್ರದೇಶಕ್ಕೆ ಬಂದ ಮೊಸಳೆ ಭಯಬೀತರಾದ ಕೋಗಿಲಬನ ನಿವಾಸಿಗಳು 

ವರದಿ - ಸ್ಪೂರ್ತಿ ಎನ್ ಶೇಟ್

 ಜಿಲ್ಲಾ ಸುದ್ದಿ

CHETAN KENDULI

ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳ್ಳಂ ಬೆಳಗ್ಗೆ ಅಚ್ಚರಿಯೊಂದು ಕಾದಿತ್ತು.ಅಲ್ಲೇ ಪಕ್ಕದಲ್ಲೇ ಇರುವ ಕಾಳಿ ನದಿ ಇಂದ ಮೊಸಳೆಯೊಂದು ಕೋಗಿಲಬನ ಗ್ರಾಮದ ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟು, ಸ್ಥಳೀಯರನ್ನು ಭಯಭೀತರನ್ನಾಗಿ ಸುವಂತೆ ಮಾಡಿತು .

ಸುಮಾರು ಅರ್ಧ ಗಂಟೆಗಳವರೆಗೆ ಮೊಸಳೆ ಅತ್ತಿಂದಿತ್ತ ಓಡಾಡತೊಡಗಿದೆ. ಸ್ಥಳೀಯರಲ್ಲಿ ಕೆಲವೊಬ್ಬರು ವಿಡಿಯೋ ಮಾಡಲು ಶುರು ಹಚ್ಚಿಕೊಂಡರೇ, ಬಹುತೇಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತು . ಇದೇ ರೀತಿ ಮುಂದಿನ ದಿನಗಳಲ್ಲಿ ಮೊಸಳೆಗಳು ಬಂದರೆ ಎನ್ನುವ ಭಯವನ್ನು ಇದೀಗ ನಿರ್ಮಾಣವಾಗ ತೊಡಗಿದೆ .

ಮೊಸಳೆ ಬಂದಿರುವುದರ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸುತ್ತಿದ್ದಂತೆ , ಅರಣ್ಯ ಇಲಾಖೆಯ ರಫೀಕ್ ಮೊದಲಾದವರು ಸ್ಥಳಕ್ಕಾಗಮಿಸಿ ಮೊಸಳೆ ನಿಧಾನವಾಗಿ ಪುನಃ ನದಿಗೆ ಸೇರುವಂತಾಗಲೂ ಸಹಕರಿಸಿದರು. ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೊಸಳೆಗಳಿದ್ದು , ನದಿ ದಂಡೆಯ ಪಕ್ಕದ ಜನವಸತಿ ಪ್ರದೇಶಗಳಲ್ಲಿ ಆಗೊಮ್ಮೆ ಈಗೊಮ್ಮೆ ಮೊಸಳೆಗಳು ಪ್ರತ್ಯಕ್ಷವಾಗುವುದು ಸರ್ವೇಸಾಮಾನ್ಯವಾಗಿದೆ .

Be the first to comment

Leave a Reply

Your email address will not be published.


*