ರಾಜ್ಯ ಸುದ್ದಿ
ಕಳೆದ ಎರಡು ವರ್ಷಗಳಿಂದ ಮಕ್ಕಳ ಶೈಕ್ಷಣಿಕವು ಕೋವಿಡ್ ನುಂಗಿ ಹಾಕಿದ್ದು ಹಿಂದೆಂದು ಕೇಳರಿಯದ ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವುದು ಬೇಸರದ ಸಂಗತಿ ಈ ಸಾಲಿನಿಂದ ಮುಂಬರುವ ಶೈಕ್ಷಣಿಕ ವರ್ಷಗಳು ಯಾವುದೇ ತೊಂದರೆಯಾಗದೇ ಪೂರ್ಣವಾಗಿ ಪೂರೈಸಲಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೈಸಿದರು.
ದೇವನಹಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿನ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಪಾಠಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿ, ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಯಾವುದೇ ಕೋವಿಡ್ ನಂತಹ ರೂಪಾಂತರಿಗಳು ಮಕ್ಕಳ ಮೇಲೆ ಪರಿಣಾಮ ಬೀರದೇ ಪೂರೈಸುವಂತಾಗಬೇಕು, ವಿದ್ಯಾರ್ಥಿಗಳು ಶಾಲೆಯ ಹಾಜರಾತಿಯಲ್ಲಿ ಮುಂದಿರಬೇಕು ಕಲಿಕೆಯು ಕಷ್ಟಪಟ್ಟು ವ್ಯಾಸಂಗ ಮಾಡದೇ ಇಷ್ಟಪಟ್ಟು ಓದಿ ಮುಂದಿನ ಭವಿಷ್ಯದ ಸಮಾಜದ ಏಳಿಗೆಯ ಪ್ರಜೆಗಳಾಗಬೇಕೆಂದು ತಿಳಿಸಿದರು.
ದೇವನಹಳ್ಳಿ ಪುರಸಭಾ ಅಧ್ಯಕ್ಷೆ ರೇಖಾರವರು ಮಾತನಾಡಿ, ಮಕ್ಕಳ ಕಲಿಕೆ ಚಿಕ್ಕ ವಯಸ್ಸಿನಿಂದಲೇ ಆಗಬೇಕು ಮಕ್ಕಳು ಚಿಕ್ಕಂದಿನಿಂದಲೇ ಓದಿನ ಕಡೆ ಗಮನ ಹರಿಸಿದರೆ ಮುಂದೆ ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ ಹಾಗೂ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ, ಈಗ ಮಕ್ಕಳು ಪಡುವ ಶ್ರಮ ಮುಂದಿನ ಜೀವನದಲ್ಲಿ ಶ್ರಮವಿಲ್ಲದೇ ಜೀವನ ಸಾಗಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ್ , ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ ಸದಸ್ಯರಾದ ರುದ್ರೇಶ್, ರವೀಂದ್ರ, ನಾರಾಯಣಸ್ವಾಮಿ, ಕುಮಾರ್, ಮಾಜಿ ಸದಸ್ಯ ಗೋಪಾಲ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವು, ಮುಖ್ಯಶಿಕ್ಷಕರು, ಶಿಕ್ಷಕ ವೃಂದ , ವಿದ್ಯಾರ್ಥಿಗಳು ಹಾಜರಿದ್ದರು
Be the first to comment