ಪರಿಸರ ಕಾಳಜಿಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು

ವರದಿ: ಹೈದರ್ ಸಾಬ್ , ಕುಂದಾಣ

ರಾಜ್ಯ ಸುದ್ದಿ

CHETAN KENDULI

ದೇವನಹಳ್ಳಿ : ಪರಿಸರ ಉಳಿವಿಗೆ ಯುವಕರು ಮುಂದಾಗಬೇಕು. ಪ್ರತಿ ಗ್ರಾಮದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವಾಗಬೇಕು ಎಂದು ಕಾರಹಳ್ಳಿ ಗ್ರಾಪಂ ಸದಸ್ಯ ಕೆಂಪಣ್ಣ ತಿಳಿಸಿದರು.ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಉಚಿತವಾಗಿ ತೆಂಗಿನ ಮತ್ತು ಅರಳಿ ಸಸಿಗಳನ್ನು ವಿತರಿಸಿ ಮಾತನಾಡಿದರು. ಆರೋಗ್ಯಕರವಾಗಿರಲು ಮರಗಿಡಗಳ ಆಸರೆ ಅತೀ ಮುಖ್ಯವಾಗಿರುತ್ತದೆ. ಇತ್ತೀಚೆಗೆ ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ಜನರು ತಮ್ಮ ಪ್ರಾಣಗಳನ್ನು ಕೋವಿಡ್ ಸಂದರ್ಭದಲ್ಲಿ ಕಳೆದುಕೊಂಡಿದ್ದಾರೆ. ಈಗಲಾದರೂ ಮನುಷ್ಯರಾದ ನಾವುಗಳು ನಮ್ಮ ಕೈಲಾದಷ್ಟು ಸಸಿಗಳನ್ನು ನೆಡುವ ಮತ್ತು ಪೋಷಿಸುವ ಪ್ರಯತ್ನವನ್ನು ಮಾಡಬೇಕು. ಗ್ರಾಮೀಣ ಭಾಗದಲ್ಲಿ ತಮ್ಮ ಮನೆಯಂಗಳದ ಖಾಲಿ ಜಾಗದಲ್ಲಿ ಒಂದು ಸಸಿ ನೆಟ್ಟರೆ ಅದೇ ನಿಮಗೆ ಉತ್ತಮ ಗಾಳಿ ನೀಡುವುದರ ಮೂಲಕ ಆರೋಗ್ಯಕರ ವಾತಾವರಣ ಸೃಷ್ಠಿಸುತ್ತದೆ. ಪ್ರತಿಯೊಬ್ಬರು ಜಾಗೃತರಾಗಬೇಕು. ಏನೇ ಸಭೆ, ಕಾರ್ಯಕ್ರಮಗಳು ಆದರೆ ಒಂದು ಗಿಡವನ್ನು ನೆಟ್ಟು ನಂತರ ಕಾರ್ಯಕ್ರಮಗಳನ್ನು ಮಾಡುವಂತೆ ಆಗಬೇಕು. ಸರಕಾರದ ಹಂತದಲ್ಲಿ ಈ ಯೋಜನೆ ಜಾರಿಯಾದರೆ, ಸಾಕಷ್ಟು ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟಾಗ ಪರಿಸರ ಸಂರಕ್ಷಿಸಿದಂತೆ ಆಗುತ್ತದೆ ಎಂದು ಹೇಳಿದರು.

ಯುವ ಮುಖಂಡ ಕೇಶವ ಮಾತನಾಡಿ, ನಾವು ಚಿಕ್ಕಂದಿನಲ್ಲಿ ಶಾಲೆಗೆ ಹೋಗುವಾಗ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದೆವು. ಆದರೆ, ಆ ಒಂದು ದಿನ ಪರಿಸರ ದಿನಾಚರಣೆ ಆಗಬಾರದು. ಪ್ರತಿ ದಿನವೂ ಪರಿಸರ ದಿನಾಚರಣೆಯನ್ನು ಆಚರಿಸುವಂತೆ ಆಗಬೇಕು. ಏನೇ ಸಭೆ, ಸಮಾರಂಭ, ಕಾರ್ಯಕ್ರಮ ಜತೆಗೆ ಹುಟ್ಟುಹಬ್ಬಗಳ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಸಹ ಪರಿಸರದ ಕಾಳಜಿ ವಹಿಸುವಂತೆ ಆಗಬೇಕು ಎಂದು ಸಲಹೆ ಮಾಡಿದರು.ಕಾರ್ಯಕ್ರಮದಲ್ಲಿ ಕಾರಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪಟಾಲಪ್ಪ, ಗ್ರಾಮದ ಯುವಕರಾದ ನರಸಿಂಹಮೂರ್ತಿ, ಮಂಜುನಾಥ್, ನಾರಾಯಣಸ್ವಾಮಿ, ಕೃಷ್ಣ, ಗಂಗಾಧರ್, ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*