ರಾಜ್ಯ ಸುದ್ದಿಗಳು
ಕಲಬುರಗಿ:
ಭಾರಿ ಕುತೂಹಲದಲ್ಲಿ ಅಂತ್ಯಗೊಂಡಿರುವ ಕಲಬುರಗಿ ನಗರ ಪಾಲಿಕೆ ಚುನಾವಣೆಯಲ್ಲಿ 41ನೇ ವಾರ್ಡ್ ಚುನಾವಣಾ ಉಸ್ತುವಾರಿ ವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಮುಖರದ ರಿಯಾಜ್ ಪಟೇಲ್ ಪೋಲೀಸ ಪಾಟಿಲ್ ಬಿಳವಾರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳೆಕಿಗೆ ಬಂದಿದೆ.
ನಗರದ MIM ಪಕ್ಷದ ಮುಖಂಡ ಇಲಿಯಾಸ್ ಸೆಟ್ ಬಾಗವಾನ ಹಾಗೂ ತಂಡದವರೇ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
MIM ಪಕ್ಷದ ಮುಖಂಡ ಇಲಿಯಾಸ್ ಸೆಟ್ ಬಾಗವಾನ
ಈ ಕುರಿತು ಹಲ್ಲೆಗೋಳಗಾಗಿರುವ ಕಾಂಗ್ರೆಸ್ ಮುಖಂಡ ಖಾಸೀಂ ಪಟೇಲ್ ಪೋಲಿಸ್ ಪಾಟಿಲ್ ಮುದಬಾಳ ಅವರ ಅಳಿಯ ರಿಯಾಜ್ ಪಟೇಲ್ ಪೋಲೀಸ ಪಾಟಿಲ್ ಬಿಳವಾರ ಫೇಸ್ಬುಕ್ ಜಾಲತಾಣದಲ್ಲಿ ಘಟನೆ ಬಗ್ಗೆ ವಿವರಿಸಿದ್ದು ವಿಡಿಯೋ ಭಾರಿ ವೈರಲ್ ಆಗಿದೆ.
ಚುನಾವಣೆ ಸೋಲಿನ ದ್ವೇಷ ತೀರಿಸಿಕೊಳ್ಳಲು MIM ಪಕ್ಷದ ಮುಖಂಡ ಇಲಿಯಾಸ್ ಸೆಟ್ ಬಾಗವಾನ ಹಾಗು ಅವರ ಮಕ್ಕಳು ಸೇರಿ 10 ರಿಂದ 15 ಜನ ಸೇರಿ ಮಿರ್ಚಿ ಗೋಡೌನ್ ಗೆ ಕರೆತಂದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ರಿಯಾಜ್ ಪಟೇಲ್ ಪೋಲೀಸ ಪಾಟಿಲ್ ಬಿಳವಾರ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಹಲ್ಲೆಯ ನಂತರ ರಿಯಾಜ್ ಪಟೇಲ್ ಪೋಲೀಸ ಪಾಟಿಲ್ ಬಿಳವಾರ ಅವರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.
ಇಳಿಯಾಸ್ ಸೆಟ್ ಭಾಗವನ ಹಾಗೂ ಅವರ ಮಕ್ಕಳು ಸೇರಿ 10ರಿಂದ 15 ಜನರು ಹಲ್ಲೆ ಮಾಡಿದ್ದಾರೆ ಎಂದು ಫೇಸ್ಬುಕ್ ಮುಖಾಂತರ ರಿಯಾಜ್ ಪಟೇಲ್ ಹೇಳಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪೊಲೀಸ್ ಇಲಾಖೆ ಮನವಿಯನ್ನು ಮಾಡಿಕೊಂಡಿದ್ದಾರೆ.
Be the first to comment