ರಾಜ್ಯ ಸುದ್ದಿ
ಹೊನ್ನಾವರ: ತಾಲೂಕಿನ ಮಂಕಿ ವ್ಯಾಪ್ತಿಯ ಮಂಕಿ ಆಸ್ಪತ್ರೆ ಆಟೋ ರಿಕ್ಷಾ ನಿಲ್ದಾಣಕ್ಕಾಗಿ 1.35 ಲಕ್ಷ ರೂಪಾಯಿ ವೈಯಕ್ತಿಕ ವೆಚ್ಚದಲ್ಲಿ ಶಾಸಕ ಸುನೀಲ ನಾಯ್ಕ ಸೂರು ಕಲ್ಪಿಸಿದ್ದು, ಸೋಮವಾರ ನಿಲ್ದಾಣದ ಉದ್ಘಾಟನೆಯನ್ನು ರಿಕ್ಷಾ ಚಾಲಕ ಮತ್ತು ಮಾಲೀಕರ ಅಪೇಕ್ಷೆಯಂತೆ ನೆರವೇರಿಸಿದರು.
ಆಟೋ ರಿಕ್ಷಾ ನಿಲ್ದಾಣಕ್ಕೆ ಸೂರು ನಿರ್ಮಿಸುವುದರಿಂದ ಆಟೋ ಚಾಲಕರು ಮತ್ತು ಮಾಲೀಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಸಿಗುವುದಲ್ಲದೆ ಊರಿನ ಅಂದವೂ ಕೂಡ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಬಹುತೇಕ ಎಲ್ಲಾ ಆಟೋ ರಿಕ್ಷಾ ನಿಲ್ದಾಣಕ್ಕೆ ವೈಯಕ್ತಿಕ ವೆಚ್ಚದಲ್ಲಿ ಸೂರು ಕಲ್ಪಿಸುವ ತೀರ್ಮಾನವನ್ನು ಮಾಡಿದ್ದೇನೆ, ನಿಮ್ಮೆಲ್ಲರ ಸಹಕಾರವಿರಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
Be the first to comment