ಲಸಿಕೆ ಅಭಾವ ಸರಿದೂಗಿಸಲು ಗ್ರಾಪಂ ಅಧ್ಯಕ್ಷರ ಮನವಿ ದಿನ್ನೂರು ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಅಭಿಯಾನ

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ

ಗ್ರಾಮೀಣ ಪ್ರದೇಶದ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ಅಭಾವ ತಲೆದೂರಿದ್ದು, ಶೇ.೫೦ರಷ್ಟು ಮಾತ್ರ ಲಸಿಕೆ ಆಗಿರುತ್ತದೆ ಎಂದು ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮರಾಮಣ್ಣ ತಿಳಿಸಿದರು.ದೇವನಹಳ್ಳಿ ತಾಲೂಕಿನ ದಿನ್ನೂರು ಗ್ರಾಮದ ಸರಕಾರಿ ಶಾಲೆಯೊಂದರಲ್ಲಿ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಅಭಿಯಾನದಲ್ಲಿ ಮಾತನಾಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ೬೪೫೦ ಜನಸಂಖ್ಯೆ ಇದ್ದು, ದಿನ್ನೂರು ಗ್ರಾಮದಲ್ಲಿ ೧೨೫ ಜನಸಂಖ್ಯೆ ಇದ್ದು, ೫೦ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾವುದೇ ಪಾಸಿಟೀವ್ ಪ್ರಕರಣಗಳು ಇಲ್ಲ. ವ್ಯಾಕ್ಸಿನೇಷನ್ ಸಮಸ್ಯೆ ಹೆಚ್ಚು ಇದೆ. ಆದಷ್ಟು ವ್ಯಾಕ್ಸಿನ್ ಸರಿದೂಗಿಸಲು ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ಹೇಳಿದರು.

CHETAN KENDULI

ಕುಂದಾಣ ವಿಎಸ್‌ಎಸ್‌ಎನ್ ಅಧ್ಯಕ್ಷ ದಿನ್ನೂರು ರಾಮಣ್ಣ ಮಾತನಾಡಿ, ಸುಣಘಟ್ಟ, ಬನ್ನಿಮಂಗಲ, ಆಲೂರು, ಬೀರಸಂದ್ರ ಗ್ರಾಮಗಳಲ್ಲಿ ಕೋವಿಡ್ ಲಸಿಕೆಯ ಅಭಾವವಿದೆ. ಲಸಿಕೆಯ ಅವಶ್ಯಕತೆ ಇದ್ದು, ಈಗಾಗಲೇ ಕಡಿಮೆ ಜನಸಂಖ್ಯೆಯ ಗ್ರಾಮಗಳಲ್ಲಿ ಲಸಿಕೆ ಹಾಕಲಾಗಿದೆ. ಆದರೆ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಿದರೆ ಹೆಚ್ಚು ಅನುಕೂಲವಾಗಲಿದೆ. ನಾನು ಸಹ ಲಸಿಕೆಯನ್ನು ಹಾಕಿಸಿಕೊಂಡಿದ್ದೇನೆ. ಎರಡನೇ ಡೋಸ್ ಲಸಿಕೆ ಪಡೆಯಲು ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಹೊಸದಾಗಿ ಲಸಿಕೆ ಹಾಕಿಸಿಕೊಳ್ಳಲು ಸಹ ಬರುತ್ತಿದ್ದು, ಲಸಿಕೆಯ ಪ್ರಮಾಣದಲ್ಲಿ ಹಂಚಿಕೆ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.ಈ ವೇಳೆಯಲ್ಲಿ ಆಲೂರು ದುದ್ದನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಕಾಂತ ಮುನಿರಾಜು, ಸದಸ್ಯರು, ಗ್ರಾಮದ ಮುಖಂಡರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಇದ್ದರು.

Be the first to comment

Leave a Reply

Your email address will not be published.


*