ಮುದ್ದೇಬಿಹಾಳ ಕ್ಷೇತ್ರದ ರೈತರ ಬೇಡಿಕೆಗಿಂತಲೂ ಹೆಚ್ಚಿನ ಕೃಷಿ ಕೇಂದ್ರ ಸ್ಥಾಪನೆಗೆ ಮನವಿ ಮಾಡಿದ ರೈತ ಪರ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರಿಗೆ ಮುದ್ದೇಬಿಹಾಳ ಕ್ಷೇತ್ರದ ರೈತರ ಪರವಾಗಿ ಸಮಸ್ತ ಕೃಷಿ ಕೇಂದ್ರ ಸ್ಥಾಪನೆ ಮಾಡುವಂತೆ ಮನವಿ ನೀಡುತ್ತಿರುವ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶ್ರೀ ಎ.ಎಸ್.ಪಾಟೀಲ ನಡಹಳ್ಳಿ.

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ತಾಲೂಕಿನ ರೈತರ ಅಸ್ಥಿರತೆಯನ್ನು ಹೋಗಲಾಡಿಸಿ ಅವರನ್ನು ಆರ್ಥಿಕವಾಗಿ ಸದೃಢವಾಗಿಸಬೇಕೆಂಬ ಹಿತದೃಷ್ಠಿಯಿಂದ ತಾಲೂಕಿನ ರೈತರ ಬೇಡಿಕೆಯಾಗಿದ್ದ ವಿಜಯಪುರ ಜಿಲ್ಲೆಯ ಹಿಟ್ಟನಳ್ಳಿ ಗ್ರಾಮದಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಾನಳಾಂತರಿಸುವ ಬೇಡಿಕೆಗೆ ಹೆಚ್ಚುವರಿಯಾಗಿ ತಾಲೂಕಿಗೆ ಸಮಗ್ರ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಕೌಶಲ್ಯ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಮನವಿಯನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ರೈತರ ಪರವಾಗಿ ಮನವಿ ನೀಡಿದರು.


ರಾಜ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ ಅವರಿಗೆ ಮುದ್ದೇಬಿಹಾಳ ಕ್ಷೇತ್ರದ ರೈತರ ಪರವಾಗಿ ಸಮಸ್ತ ಕೃಷಿ ಕೇಂದ್ರ ಸ್ಥಾಪನೆ ಮಾಡುವಂತೆ ಮನವಿ ನೀಡುತ್ತಿರುವ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶ್ರೀ ಎ.ಎಸ್.ಪಾಟೀಲ ನಡಹಳ್ಳಿ.


ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರಿಗೆ ಮುದ್ದೇಬಿಹಾಳ ಕ್ಷೇತ್ರದ ರೈತರ ಪರವಾಗಿ ಸಮಸ್ತ ಕೃಷಿ ಕೇಂದ್ರ ಸ್ಥಾಪನೆ ಮಾಡುವಂತೆ ಮನವಿ ನೀಡುತ್ತಿರುವ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶ್ರೀ ಎ.ಎಸ್.ಪಾಟೀಲ ನಡಹಳ್ಳಿ.


ಈಗಾಗಲೇ ಮುದ್ದೇಬಿಹಾಳ ತಾಲೂಕಿನಲ್ಲಿ ಕೇಂದ್ರಗಳ ಸ್ಥಾಪನೆಗೆ ಬೇಕಾಗಿರುವ ಜಾಗ ಹಾಗೂ ಅವುಗಳಿಗೆ ಅಗತ್ಯವಿರುವ ಸದೃಢ ಭೂಮಿ ಮತ್ತು ನೀರಿಣ ಪ್ರಮಾಣವಿದ್ದು ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟಿ ಭಾಗದ ರೈತರು ಸುಮಾರು 85 ಕಿಮೀ ದೂರದ ಹಿಟ್ಟನಳ್ಳಿಯಲ್ಲಿರುವ ಕೃಷಿ ಕೇಂದ್ರಕ್ಕೆ ತೆರಲಿ ಕೃಷಿ ಚಟುವಟಿಕೆ ಬಗ್ಗೆ ಜ್ಞಾನ ಪಡೆದುಕೊಳ್ಳಲು ಸಾಕಷ್ಟು ಅನಾನುಕೂಲವಾಗಿದೆ. ಆದ್ದರಿಂದ ಕೃಷಿ ಕೇಂದ್ರಗಳನ್ನು ಸ್ಥಾಪಿಸಲು ಅಮಗ್ರ ಸ್ಥಾನಮಾನ ಹೊಂದಿರುವ ಮುದ್ದೇಬಿಹಾಳ ತಾಲೂಕಿಗೆ ಸಮಗ್ರ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಕೌಶಲ್ಯ ಅಧ್ಯನ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಕೃಷಿ ಸಚಿವರಲ್ಲಿ ಮನವಿ ಮಾಡಿ ತಾಲೂಕಿನ ರೈತರ ಹರಿಕಾರರಾಗಿದ್ದಾರೆ.

ಅತಿಯಾದಂತ ರಾಸಾಯಣಿಕ ಬಳಕೆಯೊಂದು ಕಡೆಯಾದರೆ ಹವಾಮಾನ ಕ್ಷಣಕ್ಷಣಕ್ಕೂ ಬದಲಾವಣೆಯಾಗುತ್ತಿದೆ. ಇದರಿಂದ ಈ ಭಾಗದ ರೈತರು ಹೊಲದಲ್ಲಿ ಬಿತ್ತನೆ ಮಾಡಲು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕಿಗೆ ಕೃಷಿ ಕೇಂದ್ರಗಳನ್ನು ಮಾಡಿದರೆ ಮುದ್ದೇಬಿಹಾಳ ತಾಲೂಕಿನ ರೈತರಿಗೆ ಮಾತ್ರವಲ್ಲದೇ ಸುತ್ತಮುತ್ತಲಿನ ತಾಲೂಕಿನ ರೈತರಿಗೂ ಹೆಚ್ಚಿನ ಕೃಷಿ ಚಟುವಟಿಕೆಯ ಜ್ಞಾನ ನೀಡಿದಂತಾಗುತ್ತದೆ.

Be the first to comment

Leave a Reply

Your email address will not be published.


*